ಲಖನೌ: ‘ಪತಿಯನ್ನು ಕೊಲೆ ಮಾಡಿದವರಿಗೆ ₹50 ಸಾವಿರ ನಗದು ಬಹುಮಾನ ನೀಡಲಾಗುವುದು’ ಎಂದು ಮಹಿಳೆಯೊಬ್ಬರು ತಮ್ಮ ವಾಟ್ಸ್ಆ್ಯಪ್ ಖಾತೆಯಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇಚ್ಛೆಗೆ ವಿರುದ್ಧವಾಗಿ ತನಗೆ ಮದುವೆ ಮಾಡಲಾಗಿದೆ ಎಂದೂ ಬರೆದುಕೊಂಡಿದ್ದಾರೆ.

ಪತ್ನಿಯ ‘ಸ್ಟೇಟಸ್’ ನೋಡಿ ಗಾಬರಿಗೊಂಡ ಪತಿ ಪೊಲೀಸ್ ಠಾಣೆಗೆ ಹೋಗಿ, ದೂರು ನೀಡಿದ್ದಾರೆ. ಇನ್ನೊಂದೆಡೆ, ಮಹಿಳೆಯ ಈ ಸ್ಟೇಟಸ್ ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಲ್ಲಿಯೂ ಆತಂಕ ಮೂಡಿಸಿದೆ.

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಮಹಿಳೆಗೆ ಉತ್ತರಪ್ರದೇಶ ಆಗ್ರಾ ಜಿಲ್ಲೆಯ ಬಾಹ್‌ನ ಯುವಕನ ಜೊತೆಗೆ ಎರಡು ವರ್ಷದ ಹಿಂದೆ ವಿವಾಹವಾಗಿತ್ತು. ಪತಿಯೊಂದಿಗೆ ಭಿನ್ನಾಭಿಪ್ರಾಯ ಇದ್ದ ಹಿನ್ನೆಲೆಯಲ್ಲಿ ಐದು ತಿಂಗಳಿನಿಂದ ಆಕೆ ತಂದೆ–ತಾಯಿ ಜತೆಗೆ ವಾಸವಿದ್ದರು. ಅಲ್ಲದೆ, ಕೌಟುಂಬಿಕ ನ್ಯಾಯಾಲಯಕ್ಕೂ ದೂರು ನೀಡಿದ್ದರು.

ಕೆಲ ದಿನಗಳ ಹಿಂದೆ ಕೋರ್ಟ್‌ಗೆ ವಿಚಾರಣೆಗೆ ಹೋಗಿದ್ದಾಗ, ವಿಚ್ಛೇದನ ನೀಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದಿತು ಎಂದು ತನ್ನ ಪತ್ನಿ ಬೆದರಿಸಿದ್ದಾಗಿ ಹೇಳಿರುವ ಪತಿ, ಆಕೆಗೆ ಮತ್ತೊಬ್ಬರ ಜತೆ ಸಂಬಂಧವಿದ್ದು, ಅವರನ್ನು ಮದುವೆಯಾಗಲು ವಿಚ್ಛೇದನ ಬಯಸಿದ್ದಾರೆ ಎಂದು ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್ ಸ್ಟೇಟಸ್ ಪ್ರಕರಣ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.