ಭೋಪಾಲ್: ಹಿಂದೂ ಹಾಗೂ ಭಾರತೀಯ ಮಹಿಳೆಯರು ಸಭ್ಯ ಉಡುಗೆ ಧರಿಸಬೇಕು. ಆದರೆ ಅವರ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ಮಧ್ಯಪ್ರದೇಶ ಬಿಜೆಪಿಯ ಮಹಿಳಾ ಮೋರ್ಚದ ಮುಖ್ಯಸ್ಥೆ ಮಾಯಾ ನರೋಲಯಾ ಹೇಳಿದ್ದಾರೆ.

ಇಂದೋರ್ನಲ್ಲಿ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ಹಿಂದೂ ಹಾಗೂ ಭಾರತೀಯ ಮಹಿಳೆಯರು ಸಭ್ಯ ಉಡುಗೆ ಧರಿಸಬೇಕು. ಯಾಕೆಂದರೆ ನಮ್ಮದು ಮೌಲ್ಯಗಳ ದೇಶ ಎಂದು ಹೇಳಿದ್ದಾರೆ.

ಮಹಿಳೆಯರು ಸಲ್ವಾರ್, ಸೂಟ್ ಅಥವಾ ಜೀನ್ಸ್ ಧರಿಸುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಸೌಮ್ಯ ಉಡುಗೆ ಧರಿಸಬೇಕು ಎಂದು ಹೇಳಿದ್ದಾರೆ.

ಕೆಟ್ಟ ಉಡುಪು ಧರಿಸುವವರು ಶೂರ್ಪನಖಿಯರಂತೆ ಕಾಣುತ್ತಾರೆ ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರು ಹೇಳಿಕೆಯನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.