ಎಲ್ಲಾ ಚುನಾವಣಾ ಸಮೀಕ್ಷೆಗಳ ನಿರೀಕ್ಷೆಯನ್ನೂ ಮೀರಿ, ಸ್ವತಃ ಬಿಜೆಪಿಗೇ ಅಚ್ಚರಿ ಹುಟ್ಟಿಸುವಂತೆ 16ನೇ ಲೋಕಸಭೆಗೆ ಮೊದಲ ಸಲ ಸದಸ್ಯರಾಗಿ ಮೋದಿ ಪ್ರವೇಶಿಸಿ, ಪ್ರಧಾನಿಯಾಗಲಿರುವುದು ಭಾರತದ ಪ್ರಜಾಪ್ರಭುತ್ವದ ಅಚ್ಚರಿಗಳಲ್ಲಿ ಅಚ್ಚರಿ.

ತಂದೆ, ತಾಯಿ ಪ್ರಧಾನಿಯಾಗಿದ್ದವರು ಈ ದೇಶದ ಪ್ರಧಾನಿಯಾದ ಉದಾಹರಣೆಯಿದೆ (ಇಂದಿರಾ ಗಾಂಧಿ, ರಾಜೀವ್ ಗಾಂಧಿ). ಪ್ರತಿಷ್ಠಿತ ಕುಟುಂಬದಿಂದ ಬಂದವರು ಪ್ರಧಾನಿಯಾದ ಉದಾಹರಣೆಯಿದೆ (ನೆಹರೂ), ಕಾಯಸ್ಥ ಕುಟುಂಬದಿಂದ ಬಂದವರು ಪ್ರಧಾನಿಯಾದ ನಿದರ್ಶನವೂ ಇದೆ (ಲಾಲ್ ಬಹದ್ದೂರ್ ಶಾಸ್ತ್ರಿ). ಮುಖ್ಯಮಂತ್ರಿಯಾದವರು ಪ್ರಧಾನಿ ಪಟ್ಟದಲ್ಲಿ ಕೆಲ ದಿನ ಕುಳಿತ ನೆನಪೂ ಇದೆ(ದೇವೇಗೌಡರು).

ಆದರೆ ರೈಲ್ವೆ ಸ್ಟೇಷನ್‌ಗಳಲ್ಲಿ ಕೊರೆಯುವ ಚಳಿಯಲ್ಲಿ ಚಹಾ ಮಾರಿದ ಗಾಣಿಗರ ಬಡ ಹುಡುಗನೊಬ್ಬ ದೇಶದ ಚುಕ್ಕಾಣಿ ಹಿಡಿದ ಮೊದಲ ಉದಾಹರಣೆ ನರೇಂದ್ರ ದಾಮೋದರ ದಾಸ್ ಮೋದಿಯವರದು.

ಬಾಲ್ಯ: ಗುಜರಾತಿನ ಮೆಹಸಾನ್ ಜಿಲ್ಲೆಯ ವಡ್‌ನಗರದಲ್ಲಿ, 1950ರ ಸೆಪ್ಟೆಂಬರ್ 17ರಂದು ಜನಿಸಿದ ಮೋದಿ ಹಿಂದುಳಿದ ‘ಮೋಧ್ ಘಾಂಚಿ’ (ಗಾಣಿಗ) ಸಮುದಾಯಕ್ಕೆ ಸೇರಿದವರು. ತಂದೆ ದಾಮೋದರದಾಸ್ ಮೂಲ್‌ಚಂದ್ ಮೋದಿ ಮತ್ತು ತಾಯಿ ಹೀರಾಬೆನ್ ದಂಪತಿಯ ಆರು ಮಕ್ಕಳಲ್ಲಿ ಮೋದಿ ಮೂರನೆಯ ಕೂಸು.

‘ಚಿಕ್ಕಂದಿನಲ್ಲಿ ಅಪ್ಪನ ಜತೆಗೆ ರೈಲು ನಿಲ್ದಾಣಗಳಲ್ಲಿ ಚಹಾ ಮಾರುತ್ತಿದ್ದೆ’ ಎಂದು ಮೋದಿ ಹೇಳಿಕೊಂಡಿದ್ದಾರೆ. ಈ ಸಮಯದಲ್ಲಿ ಅನೇಕ ಅಪಮಾನಗಳಿಗೆ ಒಳಗಾಗಿದ್ದಾರೆ. ಬಡತನದ ನೋವು ಅವರ ವ್ಯಕ್ತಿತ್ವಕ್ಕೆ ಬೇರೆಯದೇ ಖದರ್ ನೀಡಿತು. ಹಿರಿಯರು ಸಂಪ್ರದಾಯದಂತೆ ಅವರಿಗೆ ಯಶೋದಾಬೆನ್ ಜತೆಗೆ ಬಾಲ್ಯ ವಿವಾಹ ಮಾಡಿದ್ದರು. ಈ ವಿವಾಹ ಊರ್ಜಿತವಾಗಲಿಲ್ಲ.

ಮುಂದೆ ಮೋದಿ ಎಳೆವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. ಸಂಘದ ವರಿಷ್ಠರಾದ ಗುರೂಜಿ ಗೋಳ್ವಾಲ್‌ಕರ್ ಮತ್ತು ಬಾಳಾಸಾಹೇಬ್ ದೇವರಸ್ ಪ್ರಭಾವ ಅವರ ವ್ಯಕ್ತಿತ್ವಕ್ಕೆ ಹೊಸ ಆಯಾಮ ನೀಡಿತು. ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಸಕ್ರಿಯರಾಗಿದ್ದರು.

ಇಂದಿರಾ ಗಾಂಧಿ ಅವರು 1975ರಲ್ಲಿ ಆಂತರಿಕ ತುರ್ತುಪರಿಸ್ಥಿತಿ ಹೇರಿದಾಗ ಮೋದಿ ಹೋರಾಟದ ಹಾದಿ ಹಿಡಿದು ಭೂಗತ ಹೋರಾಟ ಮಾಡಿದರು, ಕರಪತ್ರ ಸಿದ್ಧಪಡಿಸಿದರು. ಯುವನಾಯಕರಾಗಿ ಸಂಘಟನೆಯ ಹಿರಿಯರ ಗಮನ ಸೆಳೆದರು.

ನಡುವೆ ಎರಡು ವರ್ಷ ಯಾರ ಕೈಗೂ ಸಿಗದೆ ಶ್ರೀರಾಮಕೃಷ್ಣಾಶ್ರಮದ ಮೂಲಕ ಹಿಮಾಲಯದ ಕಡೆ ಏಕಾಂಗಿಯಾಗಿ ಯಾತ್ರೆ ಕೈಗೊಂಡು ಅಲ್ಲಲ್ಲೇ ಕೆಲವು ಆಶ್ರಮಗಳಲ್ಲಿ ತಂಗುತ್ತಾ ಕಾಲಕಳೆದರು. ಮರಳಿ ಬಂದ ಅವರು ಚಹಾ ಮಾರುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಸಮಯದಲ್ಲಿ ಒಂದು ರೀತಿ ಗುಂಪಿನಲ್ಲಿದ್ದೂ ಅಂತರ್ಮುಖಿ ವ್ಯಕ್ತಿತ್ವವನ್ನು ಅವರು ಮೂವತ್ತರ ವಯಸ್ಸಿನ ಒಳಗೇ ರೂಢಿಸಿಕೊಂಡರು.

ರಾಜಕೀಯ ಹೆಜ್ಜೆ
ಒಮ್ಮೆ ವಾಜಪೇಯಿಯವರು ದೆಹಲಿಯಲ್ಲಿ ಇದ್ದು ಸಿಹಿ ತಿಂದು ದಪ್ಪ ಆಗುತ್ತಿದ್ದೀಯ, ಗುಜರಾತಿಗೆ ಹೋಗಿ ಏನಾದರು ಮಾಡು ಎಂದರು. ಆಗ ಮೋದಿ ಗುಜರಾತ್‌ನಲ್ಲಿ ಒಂದು ಶಾಲೆ ತೆಗೆಯುವ ಪ್ರಯತ್ನದಲ್ಲಿದ್ದರು! 2001ರಲ್ಲಿ ಮೊದಲ ಬಾರಿ ಗುಜರಾತ್ ಮುಖ್ಯಮಂತ್ರಿ ಯಾಗುವ ವರೆಗೂ ಅವರು ತೆರೆಮರೆಯಲ್ಲಿಯೇ ಇದ್ದರು. 2002ರ ಕೋಮು ಗಲಭೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು, ಅದರಲ್ಲೂ ಮುಸ್ಲಿಮರು ಬಲಿಯಾದರು. ಗಲಭೆ ನಿಯಂತ್ರಿಸಲು ಅವರ ನೇತೃತ್ವದ ಆಡಳಿತ ಪಕ್ಷ ವಿಫಲವಾಯಿತೆಂಬ ಟೀಕೆ ಕೇಳಿಬಂತು.

ಈ ಪ್ರಕರಣದ ಬಳಿಕ ಮೋದಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಾದಿತ ವ್ಯಕ್ತಿ ಎನಿಸಿಕೊಂಡರು. ಕಳೆದ ಒಂದು ದಶಕದಲ್ಲಿ ಮಾಧ್ಯಮ ಮತ್ತು ವಿವಿಧ ರಾಜಕೀಯ ಪಕ್ಷಗಳಿಂದ ಮೋದಿಯವರಷ್ಟು ಟೀಕೆಗಳನ್ನು ಎದುರಿಸಿದವರು ಮತ್ತೊಬ್ಬರಿಲ್ಲ. ಸತತ ಮೂರು ಬಾರಿ ಮುಖ್ಯಮಂತ್ರಿಯಾಗುವಷ್ಟರಲ್ಲಿ ಮೋದಿ ನೇರವಾಗಿ ಮಾಧ್ಯಮದ ಕಣ್ಣು ಕಿವಿಗೆ ದೊರಕದ ಕಾರ್ಯವೈಖರಿ ರೂಢಿಸಿಕೊಂಡರು. ಅವರ ಆಪ್ತರು ಈಗ ಮೋದಿ ಏನು ಯೋಚನೆ ಮಾಡುತ್ತಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸುವ ಪರಿಪಾಠ ಬೆಳೆಯಿತು.
ಇಂದಿರಾ ಗಾಂಧಿ ಮತ್ತು ವಾಜಪೇಯಿ ನಂತರದ ಅತಿಜನಪ್ರಿಯ ನಾಯಕರಾಗಿ ಮೇಲೆದ್ದಿರುವ ಮೋದಿ ತಾವು ಸರ್ಕಾರ ನಡೆಸುವುದಿಲ್ಲ ಬದಲಿಗೆ ದೇಶ ಮುನ್ನಡೆಸುವೆ ಎಂದು ಹೇಳಿದ್ದಾರೆ.

ತಮ್ಮ ನೆಚ್ಚಿನ ಅಭಿವೃದ್ದಿ ಮಾದರಿ ಮತ್ತು ಸಂಘದ ರಾಷ್ಟ್ರೀಯ ಚಿಂತನೆ ಎರಡನ್ನೂ ತೂಗಿಸಿಕೊಂಡು ಹೋಗುವ ಹೊಣೆ ಈಗ ಮೋದಿ ಹೆಗಲಮೇಲಿದೆ. ಈಗ ಅವರು ಹಿಂದುತ್ವದ ಪ್ರತಿಪಾದಕ ಸಾಂಸ್ಕೃತಿಕ ಸಂಘಟನೆ ಆರೆಸ್ಸೆಸ್ ಮುಖವಾಣಿಯಾಗಿ ದೇಶ ನಡೆಸುವರೇ ಅಥವಾ ಬಹುಚರ್ಚಿತ ಅಭಿವೃದ್ಧಿ ಮಾದರಿಯನ್ನು ಜಾರಿಗೆ ತರುವರೇ? ಪಕ್ಷದ ಒಳಗೇ ಹೊಗೆಯಾಡುತ್ತಿರುವ ಅಸಮಾಧಾನದ ಹೊಗೆಯನ್ನು ಹೇಗೆ ನಿಭಾಯಿಸುವರು? ಅವರೇ ಸೈದ್ಧಾಂತಿಕವಾಗಿ ಹೇಳುತ್ತಾ ಬಂದಿರುವ ಸ್ವದೇಶಿ ಆರ್ಥಿಕ ನೀತಿ ಮತ್ತು ಭಾರತೀಯ ನೆಲೆಗಟ್ಟಿನ ಶಿಕ್ಷಣವನ್ನು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ತರಬಲ್ಲರು? ಸಂವಿಧಾನದ 370 ನೇ ವಿಧಿಯ ತಿದ್ದುಪಡಿ, ರಾಮಮಂದಿರ ನಿರ್ಮಾಣ ಮುಂತಾದ ವಿಷಯಗಳಲ್ಲಿ ದೇಶದ ಅಲ್ಪಸಂಖ್ಯಾತ ಸಮುದಾಯಗಳನ್ನೂ ಹೇಗೆ ಒಟ್ಟಿಗೆ ತೆಗೆದುಕೊಂಡು ಹೋಗುವರು ಎಂಬುದು ಮೋದಿ ಮತ್ತು ದೇಶದ ಮುಂದಿರುವ ಪ್ರಶ್ನೆಗಳು.

ವಾಜಪೇಯಿ ಯಾರನ್ನೂ ಗುರುತಿಸಲಾಗದ ಸ್ಥಿತಿಯಲ್ಲಿ ಮಲಗಿದ್ದಾರೆ, ಆಡ್ವಾಣಿ ಉನ್ನತ ಹುದ್ದೆಗೆ ಹೋಗಬಹುದು. ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಯಲ್ಲಿ ವಾಜಪೇಯಿ, ಅಡ್ವಾಣಿ ಯುಗ ಮುಗಿದು ಮೋದಿ ಯುಗ ಆರಂಭವಾಗಿದೆ.

ಸ್ವಂತ ವ್ಯಕ್ತಿತ್ವ ಮತ್ತು ಶಿಸ್ತಿನ ಸಂಘಟನೆ
1970ರ ದಶಕದಲ್ಲಿ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತ ರಾಗಿದ್ದಾಗಲೂ ಕೇವಲ ಸರಳತೆಗೆ ತೃಪ್ತರಾಗದ ಮೋದಿ ಶಿಸ್ತಿನ ಸಂಘಟನೆಯ ಮೂಲ ಚೌಕಟ್ಟಿನೊಳಗೆ ಸ್ವಂತಿಕೆ ಬೆಳೆಸಿಕೊಂಡರು. ಅವರ ಅಂದಿನ ಆಪ್ತರು ನೆನಪಿಸಿಕೊಳ್ಳುವಂತೆ ಉಳಿದವರು ಒಗೆದ ಶುಭ್ರ ಬಟ್ಟೆ ಹಾಕಿಕೊಂಡರೆ ಮೋದಿ ಇಸ್ತ್ರಿ ಮಾಡಿದ ಬಟ್ಟೆ ತೊಡುತ್ತಿದ್ದರು.

ತಂತ್ರಜ್ಞಾನದ ಜೊತೆ ಮೊದಲಿನಿಂದ ಸಲಿಗೆ ಬೆಳೆಸಿಕೊಂಡಿದ್ದ ಮೋದಿ ಯಾವುದೇ ಪ್ರಮುಖ ರಾಜಕೀಯ ಹುದ್ದೆ ಏರುವ ಮೊದಲೇ ಅಂತರ್ಜಾಲ ಬಳಸುವುದು, ಕಂಪ್ಯೂಟರ್, ಲ್ಯಾಪ್ಟಾಪ್ ಲೀಲಾಜಾಲವಾಗಿ ಬಳಸುತ್ತಿದ್ದರು. ಹೊಸ ವಿಚಾರ, ಹೊಸತನಕ್ಕೆ ಅವರು ಸದಾ ತಮ್ಮನ್ನು ಒಡ್ಡಿಕೊಳ್ಳುತ್ತಲೇ ಬಂದರು. ಗುಜರಾತಿನ ಮುಖ್ಯಮಂತ್ರಿಯಾದಾಗ ಈ ತಂತ್ರಜ್ಞಾನದ ಅರಿವಿನ ಲಾಭವನ್ನು ಆಡಳಿತ ಚುರುಕುಗೊಳಿಸುವಲ್ಲಿ ಬಳಸಿಕೊಂಡರು.

1985ರಲ್ಲಿ ಆರೆಸ್ಸೆಸ್ ಪ್ರಚಾರಕ ಮೋದಿಯವರನ್ನು ಬಿಜೆಪಿಗೆ ಕಳುಹಿಸಿಕೊಟ್ಟಿತು. ಮೋದಿ ಗುಜರಾತ್ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು, ಅವುಗಳನ್ನು ಚೆನ್ನಾಗಿ ನಿಭಾಯಿಸುತ್ತಲೇ ಮೇಲೆ ಬಂದರು. ಸಂಘ ಮತ್ತು ಪಕ್ಷ ಏನು ಹೇಳುತ್ತದೆಯೋ ಅದನ್ನು ಅವರು ಮಾಡುತ್ತಾ ಬಂದರು.ಉದಾಹರಣೆಗೆ ಸಂಘ ಹೇಳಿತು ಎಂದು ಅವರು ಬಿ.ಎ ಪರೀಕ್ಷೆಗೆ ಕುಳಿತು ತೇರ್ಗಡೆಯಾದರು.
ಅದೇ ರೀತಿ ರಾಜ್ಯಶಾಸ್ತ್ರದಲ್ಲಿ ಎಂ.ಎ., ಮಾಡಲು ಹಿರಿಯರು ಹೇಳಿದಾಗ ಅದನ್ನು ಪಾಲಿಸಿದರು. 1991ರಲ್ಲಿ ಬಿಜೆಪಿ ನಾಯಕ ಡಾ.ಮುರಳಿ ಮನೋಹರ ಜೋಶಿ ಕನ್ಯಾಕುಮಾರಿಯಿಂದ ಶ್ರೀನಗರಕ್ಕೆ ‘ಏಕತಾಯಾತ್ರೆ’ ಕೈಗೊಂಡಾಗ ಅದರ ಪೂರ್ಣ ಹೊಣೆ ಮೋದಿ ಹೆಗಲಿಗೇರಿತ್ತು.

ಈಗ 16ನೇ ಲೋಕಸಭೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಮೇಲೆ ಇಡೀ ದೇಶದಲ್ಲಿ ಒಟ್ಟು ಮೂರು ಲಕ್ಷ ಕಿ.ಮೀ. ಸುತ್ತಿ ಚುನಾವಣಾ ಭಾಷಣಗಳನ್ನು ಮಾಡಿದ ಮೋದಿಗೆ ಆಗಲೇ ದೇಶದ ಉದ್ದಗಲಗಳ ಸೂಕ್ಷ್ಮ ಪರಿಚಯ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.