ಭೋಪಾಲ್: ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರು ಮತದಾನ ಮಾಡಿಲ್ಲ. ಸೋಲುವ ಭಯವಿದ್ದ ಕಾರಣ ಅವರುಮತದಾನದ ದಿನವೂ ತಾವು ಅಭ್ಯರ್ಥಿಯಾಗಿರುವ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು ಎಂದು ಮಧ್ಯಪ್ರದೇಶ ಬಿಜೆಪಿ ಲೇವಡಿ ಮಾಡಿದೆ.

ದಿಗ್ವಿಜಯ್ ಅವರು ಭಾನುವಾರವಿಡೀ ಭೋಪಾಲ್ನಲ್ಲೇ ಇದ್ದರು.ಭೋಪಾಲ್ನಿಂದ 140 ಕಿ.ಮೀ. ದೂರದಲ್ಲಿರುವ ರಾಘವಗಡದಲ್ಲಿ ಅವರು ಮತದಾನದ ಹಕ್ಕು ಹೊಂದಿದ್ದಾರೆ. ಇಡೀ ದಿನ ಭೋಪಾಲ್ನಲ್ಲೇ ಇದ್ದುದ್ದರಿಂದ ಅವರು ಮತ ಚಲಾಯಿಸಿಲ್ಲ. ಇದನ್ನು ಬಳಸಿಕೊಂಡು ದಿಗ್ವಿಜಯ್ ಅವರನ್ನು ಬಿಜೆಪಿ ಲೇವಡಿ ಮಾಡಿದೆ.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ನಮ್ಮ ಅಭ್ಯರ್ಥಿ ಸಾಧ್ವಿಗೆ ಬೆದರಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿಯೇ ಅವರು ಭೋಪಾಲ್ನಲ್ಲೇ ಇದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.