ನವದೆಹಲಿ (ಪಿಟಿಐ): ರಾಷ್ಟ್ರಪತಿ ಭವನದ ಮುಂದಿನ ವಿಶಾಲ ಪ್ರಾಂಗಣದಲ್ಲಿ ಸೋಮವಾರ ಸಂಜೆ ನಡೆದ ಭವ್ಯ ಸಮಾರಂಭದಲ್ಲಿ ನರೇಂದ್ರ ದಾಮೋದರದಾಸ್ ಮೋದಿ ಅವರು ದೇಶದ 15ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜಕೀಯ ನಾಯಕರು, ಉದ್ಯಮಿಗಳು, ಧಾರ್ಮಿಕ ಮುಖಂಡರು, ಖ್ಯಾತನಾಮರು ಹಾಗೂ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರು ಸೇರಿದಂತೆ ಸುಮಾರು 4,000 ಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮೋದಿ ಹಾಗೂ ಅವರ ಸಂಪುಟದ 45 ಸದಸ್ಯರಿಗೆ ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು.

ಎಲ್ಲೆಡೆ ಸಂಭ್ರಮ: ಮೋದಿ ಅವರು ದೇವರ ಹೆಸರಿನಲ್ಲಿ, ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ, ದೇಶದಾದ್ಯಂತ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಪಟ್ಟರು.

ಅಕ್ಷರಶಃ ಪಟ್ಟಾಭಿಷೇಕ ನೆನಪಿಸಿದ ಈ ಸಮಾರಂಭದಲ್ಲಿ ಜಾತ್ರೆಯ ಸಂಭ್ರಮ ನೆಲೆಸಿತ್ತು. ನೆತ್ತಿಸುಡುವ ಬಿಸಿಲನ್ನೂ ಲೆಕ್ಕಿಸದೇ ಮೋದಿ ಅಭಿಮಾನಿಗಳು ಮಧ್ಯಾಹ್ನವೇ ರಾಷ್ಟ್ರಪತಿಭವನದತ್ತ ಧಾವಿಸಿ ಬಂದರು. ಪ್ರಾಂಗಣದಲ್ಲಿ ಅಲ್ಲಲ್ಲಿ ಫ್ಯಾನ್ ಗಾಳಿ ಬೀಸುತ್ತಿದ್ದರೂ ಧಗೆ ತಾಳಲಾರದೇ ಹಲವರು ಆಹ್ವಾನ ಪತ್ರಿಕೆಯನ್ನೇ ಬೀಸಣಿಕೆ ಮಾಡಿಕೊಂಡಿದ್ದರು.

ಜಯಘೋಷ: ತುಂಬು ತೋಳಿನ, ಕೆನೆಬಣ್ಣದ ಜುಬ್ಬಾದ ಮೇಲೆ ತಿಳಿಕಂದು ವರ್ಣದ ನೆಹರೂ ಜಾಕೆಟ್ ಧರಿಸಿದ್ದ ನರೇಂದ್ರ ಮೋದಿ ಅವರು ವೇದಿಕೆಗೆ ಬರುತ್ತಿದ್ದಂತೆಯೇ ‘ಮೋದಿ...ಮೋದಿ...’ ಎಂಬ ಕೂಗು ಕೇಳಿಬಂತು. ಇನ್ನೊಂದೆಡೆ, ‘ಭಾರತ್‌್ ಮಾತಾ ಕಿ ಜೈ’, ‘ಜೈ ಶ್ರೀರಾಮ್’ ಎಂಬ ಘೋಷಣೆಗಳು ಮೊಳಗಿದವು.

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಮತ್ತಿತರರು

ಮುಂದಿನ ಸಾಲಿನಲ್ಲಿಯೇ ಕೂತಿದ್ದರು. ಒಂದೊಂದಾಗಿ ಇವರೆಲ್ಲರ ಹೆಸರನ್ನು ಕರೆದು ಸ್ವಾಗತ ಕೋರುತ್ತಿದ್ದಂತೆಯೇ ಹರ್ಷೋದ್ಗಾರ ಕೇಳಿಬರುತ್ತಿತ್ತು. ಷರೀಫ್ ಹೆಸರು ಕರೆದಾಗಲಂತೂ ಜನರ ಕೇಕೆ ಮುಗಿಲು ಮುಟ್ಟಿತ್ತು.ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರು ಕರೆದಾಗ ಕೂಡ ಅಭಿಮಾನಿಗಳಿಂದ ಜಯಘೋಷ ಕೇಳಿಬಂತು.

ಗಣ್ಯರು: ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ, ಭೂತಾನ್ ಪ್ರಧಾನಿ ತ್ಸರಿಂಗ್ ತೊಗ್‌ಬೆ, ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅಬ್ದುಲ್ ಗಯೂಮ್, ಬಾಂಗ್ಲಾದೇಶ ಸ್ಪೀಕರ್ ಶಿರಿನ್ ಚೌಧರಿ, ಮಾರಿಷನ್ ಪ್ರಧಾನಿ ನವೀನ್ ರಾಮ್‌ಗೂಲಮ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್, ವಿಶೇಷ ಸಹಾಯಕ ತಾರಿಕ್ ಫಾತೆಮಿ, ವಿದೇಶಾಂಗ ಕಾರ್ಯದರ್ಶಿ ಏಜಾಜ್ ಚೌಧರಿ ಮತ್ತಿತರರು ಷರೀಫ್ ಅವರ ನಿಯೋಗದಲ್ಲಿದ್ದರು.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ದರ್ಬಾರ್ ಸಭಾಂಗಣದ ಮೆಟ್ಟಿಲುಗಳನ್ನು ಇಳಿದು, ಪ್ರಾಂಗಣದಲ್ಲಿ ನಿರ್ಮಿಸಿದ್ದ ವೇದಿಕೆ ಹತ್ತುವುದಕ್ಕೆ ಕೆಲ ಸಮಯ ತೆಗೆದುಕೊಂಡ ಕಾರಣ ಕಾರ್ಯಕ್ರಮ ಕೆಲವು ನಿಮಿಷ ತಡವಾಗಿ ಶುರುವಾಯಿತು.

ಉಪಸ್ಥಿತ ಗಣ್ಯರು: ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ನಿರ್ಗಮಿತ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪಿ.ಚಿದಂಬರಂ, ಶರದ್ ಪವಾರ್, ಪ್ರಫುಲ್ ಪಟೇಲ್, ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ನಿರ್ಗಮಿತ ಸ್ಪೀಕರ್ ಮೀರಾ ಕುಮಾರ್, ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್‌್ ಕಲಾಂ, ಪ್ರತಿಭಾ ಪಾಟೀಲ್ ಉಪಸ್ಥಿತರಿದ್ದರು.

ಮುಲಾಯಂ ಸಿಂಗ್ ಯಾದವ್, ಅವರ ಪುತ್ರ ಅಖಿಲೇಶ್ ಯಾದವ್, ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬಿಹಾರ ಮುಖ್ಯಮಂತ್ರಿ ಜೀತನ ರಾಂ ಮಾಂಝಿ, ಅಸ್ಸಾಂ ಮುಖ್ಯಮಂತ್ರಿ ತರುಣ್‌್ ಗೊಗೊಯ್, ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಕೂಡ ಇದ್ದರು.

ತಾರಾ ಮೆರುಗು: ಬಾಲಿವುಡ್ ನಟರಾದ ಸಲ್ಮಾನ್ ಖಾನ್, ವಿವೇಕ್ ಒಬೆರಾಯ್, ಹೇಮಾ ಮಾಲಿನಿ, ಧರ್ಮೇಂದ್ರ, ಶತ್ರುಘ್ನ ಸಿನ್ಹಾ ಮತ್ತಿತರರು ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಿದ್ದರು.

ಧಾರ್ಮಿಕ ಮುಖಂಡರು:  ಶ್ರೀ ಶ್ರೀ ರವಿಶಂಕರ್ ಗುರೂಜಿ, ಪೇಜಾವರ ಶ್ರೀ, ಮೊರಾರಿ ಬಾಪು, ಸಾಧ್ವಿ ರಿತಾಂಬರಾ ಮುಂದಿನ ಸಾಲಿನಲ್ಲಿ ಕೂತಿದ್ದರು.90 ನಿಮಿಷಗಳವರೆಗೆ ನಡೆದ ಸಮಾರಂಭದ ಬಳಿಕ ಮೋದಿ ಅವರು ವಿದೇಶಿ ಗಣ್ಯರಿಗೆ ಹಸ್ತಲಾಘವ ನೀಡಿ ಧನ್ಯವಾದ ಸಲ್ಲಿಸಿದರು. ನೂತನ ಪ್ರಧಾನಿಗೆ ಶುಭಕೋರುವುದಕ್ಕೆ ಜನ ಮುಗಿಬಿದ್ದ ಕಾರಣ ತುಸು ಹೊತ್ತು ಗದ್ದಲ ಉಂಟಾಯಿತು.

ಪರ್ಯಾಯ ವ್ಯವಸ್ಥೆ: ಮಳೆ ಬೀಳುವ ಮುನ್ಸೂಚನೆ ಇದ್ದ ಕಾರಣ ರಾಷ್ಟ್ರಪತಿ ಭವನದ ದರ್ಬಾರ್ ಸಭಾಂಗಣದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದರ ಅಗತ್ಯ ಬೀಳಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.