ಬೆಂಗಳೂರು: ನಗರ ಪ್ರದೇಶಗಳಲ್ಲಿ ತರಕಾರಿ–ಸೊಪ್ಪು ಮತ್ತು ಹೂವಿನ ಬೆಳೆಗಳನ್ನು ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ಬೆಳೆಯಲು ಲಂಬ ಕೃಷಿ ವಿಧಾನವನ್ನು ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

‘1000 ಚದರ ಮೀಟರ್‌ನ ಪಾಲಿಹೌಸ್‌ನಲ್ಲಿ ಲಂಬಾಕಾರದಲ್ಲಿ ನಿರ್ಮಿಸಲಾದ 12 ಅಡಿಯ ರ್‍ಯಾಕ್‌ನಲ್ಲಿ 6 ಪದರಗಳಿಗೆ ಪ್ಲಾಸ್ಟಿಕ್ ಚೀಲಗಳನ್ನು ಅಳವಡಿಸಬೇಕು. ಅದರಲ್ಲಿ ಕೊಕೊಪಿಟ್, ಭತ್ತದ ಹೊಟ್ಟನ್ನು ಹಾಕಿ ತರಕಾರಿ ಮತ್ತು ಹೂವಿನ ಬೆಳೆಗಳನ್ನು ಬೆಳೆಯಬಹುದು. ಇದಕ್ಕೆ ಬತ್ತಿ ನೀರಾವರಿ ಪದ್ಧತಿಯ ಮೂಲಕ ನೀರು ಮತ್ತು ಪೋಷಕಾಂಶಗಳನ್ನು ನೀಡಬೇಕು. ಇದಕ್ಕೆ ಕೇವಲ 1000 ಲೀಟರ್ ನೀರು ಬೇಕಾಗುತ್ತದೆ’ ಎಂದು ಐಐಎಚ್‌ಆರ್‌ನ ವಿಜ್ಞಾನಿ ಮತ್ತು ಹೂವು, ಔಷಧ ಸಸ್ಯಗಳ ಮುಖ್ಯಸ್ಥ ಡಾ. ಅಶ್ವಥ್ ಮಾಹಿತಿ ನೀಡಿದರು.

‘ಹೂವಿನ ಬೆಳೆಗಳಾದ ಲಿಲಿಯಂ, ಜರ್ಬೆರಾ, ಜಿಪ್ಸೋಫಿಲಾ, ಗ್ಲಾಡಿಯೋಲಸ್, ತರಕಾರಿ–ಸೊಪ್ಪಿನಲ್ಲಿ ಎಲೆಕೋಸು, ಹೂಕೋಸು, ಬೀನ್ಸ್, ಕೊತ್ತಂಬರಿ, ಪಾಲಕ್ ದಂಟನ್ನು ಪ್ರತಿದಿನ 70–80 ಕೆ.ಜಿಯಷ್ಟು ಸೊಪ್ಪು ಮತ್ತು ತರಕಾರಿಗಳನ್ನು ಬೆಳೆಯಬಹುದು’ ಎಂದು ಅವರು ತಿಳಿಸಿದರು.

‘ಕೇಂದ್ರ ಸರ್ಕಾರದ ತೋಟಗಾರಿಕೆ ಸಮಗ್ರ ಅಭಿವೃದ್ಧಿ ಮಿಷನ್‌ನವರು (ಎಂಐಡಿಎಚ್) ಈ ಲಂಬ ಕೃಷಿ ಅಳವಡಿಸಿಕೊಳ್ಳುವ ರೈತರಿಗೆ ಎಷ್ಟು ಸಬ್ಸಿಡಿ ನೀಡಬೇಕು ಎಂದು ಕೇಳಿದ್ದು, ಇದಕ್ಕೆ ಎಷ್ಟು ಸಬ್ಸಿಡಿ ನೀಡಬೇಕೆಂಬ ಸಮಗ್ರ ಮಾಹಿತಿಯನ್ನು ತಯಾರಿಸಿ ಅವರಿಗೆ ಕಳುಹಿಸಿಕೊಡಲಾಗುವುದು’ ಎಂದು ಅವರು ಹೇಳಿದರು.

‘ನಗರ ಪ್ರದೇಶಗಳ ನಿರುದ್ಯೋಗಿ ಯುವಕರು ಮತ್ತು ಮಹಿಳೆಯರು ಈ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಈ ಪದ್ಧತಿಯನ್ನು ಅಳವಡಿಸಿಕೊಂಡರೆ ವಾಣಿಜ್ಯ ಬೆಳೆಯಾದ ಲಿಲಿಯಂ ಹೂವಿನ ಹೆಚ್ಚು ಉತ್ಪಾದನೆ ಸಾಧ್ಯ. ನಗರ ತೋಟಗಾರಿಕೆ ಇದು ವರದಾನವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.