ಮೈಸೂರು: ‘ಯಾರೆಲ್ಲರ ವಿರುದ್ಧ ಎಫ್ಐಆರ್ ದಾಖಲಾಗಿದೆಯೋ ಅವರೆಲ್ಲರೂ ತಾಕತ್ತಿದ್ದರೆ, ವಿಧಾನಸೌಧದ ಮುಂದೆ ಬಂದು ರಾಜೀನಾಮೆ ಕೊಡಲಿ' ಎಂದು ಆಗ್ರಹಿಸಿದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ‘ಅಂತಹವರಿಗೆ ದೇವಿ ಚಾಮುಂಡೇಶ್ವರಿ ಒಳ್ಳೆ ಬುದ್ಧಿ ಕೊಡಲಿ’ ಎಂದರು.

ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಗುರುವಾರ ದಸರಾ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಎಲ್ಲರೂ ಗಾಜಿನ ಮನೆಯಲ್ಲೇ ಕುಳಿತಿದ್ದಾರೆ. ಎಫ್ಐಆರ್ ಬಿತ್ತೆಂದರೆ ಯಾರೂ ಇರೋ ಹಂಗೇ ಇಲ್ಲ. ಬಿಜೆಪಿಯ ಅಶೋಕನೂ ಇಲ್ಲ. ಜನತಾದಳವೂ ಇಲ್ಲ, ಕಾಂಗ್ರೆಸ್ಸೂ ಇಲ್ಲ’ ಎಂದರು.

ಸಿದ್ದರಾಮಯ್ಯ ಅವರನ್ನು ‘ಚಾಮುಂಡೇಶ್ವರಿಯ ವರಪುತ್ರ’ ಎಂದು ಕರೆದ ಅವರು, ‘ಎಂಥದ್ದೇ ಸಂದರ್ಭದಲ್ಲೂ ಚಾಮುಂಡೇಶ್ವರಿ ಹಾಗೂ ಜನರ ಆಶೀ ರ್ವಾದರಿಂದಲೇ ಸಿದ್ದರಾಮಯ್ಯನವರಿಗೆ ಇನ್ನೂ ಹೆಚ್ಚಿನ ಶಕ್ತಿ ಬಂದಿದೆ’ ಎಂದರು.

‘ಮುಡಾ ಪ್ರಕರಣ ಸಿದ್ದರಾಮಯ್ಯನವರ ಜೀವನದಲ್ಲಿ ನಡೆದಿರುವ ಅನಿರೀಕ್ಷಿತ ಘಟನೆ. ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನೆಲ್ಲ ಬದಿಗೊತ್ತಿ, ರಾಜೀನಾಮೆ ಕೊಡಿ ಎನ್ನುತ್ತಿದ್ದಾರೆ. ರಾಜೀನಾಮೆ ಕೊಡಿ, ಜೈಲಿಗೆ ಹಾಕಿ ಎಂದು ಯಾವ ಕಾನೂನು ಹೇಳಿದೆ ಎಂಬುದನ್ನು ತೋರಿಸಿ’ ಎಂದು ಸವಾಲು ಹಾಕಿದರು. ‘ನೀವು ಕೇಂದ್ರದಲ್ಲಿರುವವರು ಅಭಿವೃದ್ಧಿ ಮಾಡಿ. ಕೇಂದ್ರದಿಂದ ತರಬೇಕಾದ್ದೇನು? ರಾಜ್ಯಕ್ಕೆ ಕೊಡಬೇಕಾದ್ದೇನು ಎಂಬುದರತ್ತ ಗಮನ ಹರಿಸಿ’ ಎಂದು ಆಗ್ರಹಿಸಿದರು. ದೃಶ್ಯಮಾಧ್ಯಮಗಳ ಕಾರ್ಯವೈಖರಿಯನ್ನೂ ಟೀಕಿಸಿದರು.

ರಾಜೀನಾಮೆ ಕೊಡೋಣ ಬಿಡಿ: ಎಚ್ಡಿಕೆ

ಬೆಂಗಳೂರು: ‘ಎಫ್ಐಆರ್ ದಾಖಲಾಗಿರುವ ಎಲ್ಲರೂ ರಾಜೀನಾಮೆ ಕೊಡಬೇಕು ಎಂದು ನಮ್ಮದೇ ಜಿ.ಟಿ. ದೇವೇಗೌಡ ಹೇಳಿದ್ದಾರೆ. ನಾನು ಕೊಡಬೇಕಾದಾಗ ಕೊಡುತ್ತೇನೆ ಬಿಡಿ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಅವರದೇ ಕ್ಷೇತ್ರದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಹೊಗಳಿಕೆ ಸಹಜವಾಗಿ ಇರುತ್ತದೆ’ ಎಂದರು.

‘ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಜಿ.ಟಿ. ದೇವೇ ಗೌಡ ಹೇಳಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖ ಲಾದ ನಂತರ ನಾನೂ ಅವರ ರಾಜೀನಾಮೆ ಕೇಳಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿ ಯಾದ ನಂತರ ಅವರ ನಡ ವಳಿಕೆ ಬದಲಾಗಿದೆ. ಅಧಿಕಾರ ದುರುಪಯೋಗ ಮಾಡಿ ಕೊಂಡಿದ್ದಾರೆ. ಹಾಗಾಗಿ, ಅವರ ರಾಜೀನಾಮೆಗೆ ನಿರಂತರ ಒತ್ತಾ ಯಿಸಿದ್ದೆ. ಈಗ ಅಧಿಕಾರಿಗಳ ಮೂಲಕ ಸಾಕ್ಷ್ಯ ನಾಶ ಮಾಡಲು ಹೊರಟಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.