ಬೆಂಗಳೂರು: ರಾಜಧಾನಿಯ ಹಸಿರೀಕರಣದ ಕನಸು ಕಂಡಿದ್ದ ‘ಅದಮ್ಯ ಚೇತನ’ ಅನಂತ್ ಕುಮಾರ್. ಅವರು ಆರಂಭಿಸಿದ ‘ಹಸಿರು ಬೆಂಗಳೂರು’ ಅಭಿಯಾನದಡಿ ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಈ ‘ಹಸಿರು ಯಜ್ಞ’ದಲ್ಲಿ ಯುವಜನ ಉತ್ಸಾಹದಿಂದ ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದಾರೆ.

ರಾಜಧಾನಿಯಲ್ಲಿ ದಿನೇ ದಿನೇ ಹಸಿರು ಕ್ಷೀಣಿಸುತ್ತಿರುವ ಕುರಿತು ಅಧ್ಯಯನ ನಡೆಸಿದ್ದ ಭಾರತೀಯ ವಿಜ್ಞಾನ ಸಂಸ್ಥೆ ಈ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿತ್ತು. ರಾಜಧಾನಿಯಲ್ಲಿ ಪ್ರತಿ ಏಳು ಮಂದಿಗೆ ಒಂದು ಮರ ಮಾತ್ರ ಇದೆ ಎಂಬ ಕಳವಳಕಾರಿ ಅಂಶವನ್ನು ಈ ವರದಿ ಬಹಿರಂಗಪಡಿಸಿತ್ತು. ಪ್ರತಿ ವ್ಯಕ್ತಿಗೆ ಒಂದು ಮರವಾದರೂ ಇರಬೇಕು ಎಂಬ ಉದ್ದೇಶದಿಂದ ಅನಂತ್ ಕುಮಾರ್ ಅವರು ‘ಅದಮ್ಯ ಚೇತನ’ ಸಂಸ್ಥೆಯ ವತಿಯಿಂದ ‘ಹಸಿರು ಬೆಂಗಳೂರು’ ಅಭಿಯಾನವನ್ನು ಆರಂಭಿಸಿದ್ದರು.

ಗಿಡಗಳನ್ನು ನೆಟ್ಟು ಬೆಳೆಸುವ ಸಲುವಾಗಿ 2015ರ ಡಿಸೆಂಬರ್ನಲ್ಲಿ ‘ಹಸಿರು ಭಾನುವಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಅಭಿಯಾನದ 150ನೇ ಕಾರ್ಯಕ್ರಮ ಲಾಲ್ಬಾಗ್ನಲ್ಲಿ ಭಾನುವಾರವಷ್ಟೇ (ನ.11) ಆಯೋಜನೆಯಾಗಿತ್ತು.

‘ಕಾರ್ಯಕ್ರಮ ಆರಂಭವಾದ ಬಳಿಕ ಒಂದು ಭಾನುವಾರವೂ ಗಿಡ ನೆಡುವುದು ನಿಂತಿಲ್ಲ. ಅನಂತ್ ಕುಮಾರ್ ಅವರುಕಾರ್ಯಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ಆಗಾಗ್ಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. 2018ರ ಜುಲೈ 1ರಂದು ನಡೆದ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆರೋಗ್ಯ ಕ್ಷೀಣಿಸಿದ್ದರಿಂದ ಆನಂತರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ’ ಎಂದು ಅನಂತ್ ಕುಮಾರ್ ಆಪ್ತ ಮುರಳೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಸಿರು ಜೀವನಶೈಲಿಯನ್ನು ಉತ್ತೇಜಿಸುವ ಸಲುವಾಗಿ ಸಂಸ್ಥೆ ‘ಸಸ್ಯಾಗ್ರಹ’ ಆಂದೋಲನ ಆರಂಭಿಸಿತ್ತು. ಮಹಾತ್ಮ ಗಾಂಧಿಯವರು ಚಂಪಾರಣ್ನಲ್ಲಿ ಆರಂಭಿಸಿದ್ದ ‘ಸತ್ಯಾಗ್ರಹ’ ಚಳವಳಿಗೆ 100 ವರ್ಷ ತುಂಬಿದ ಸಂದರ್ಭ ಆರಂಭಿಸಿದ್ದ ಈ ಕಾರ್ಯಕ್ರಮದಿಂದ ಪ್ರಭಾವಿತರಾಗಿ ಅನೇಕರು ನಿಸರ್ಗಸ್ನೇಹಿ ಬದುಕಿನ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಗಿಡ ನೆಟ್ಟು ಬೆಳೆಸುವುದು, ಕೆರೆಗಳ ಸಂರಕ್ಷಣೆ, ಸಾತ್ವಿಕ ಆಹಾರ, ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಉಡುಪುಗಳ ಬಳಕೆ, ಪರಿಸರಸ್ನೇಹಿ ಮನೆಗಳ ನಿರ್ಮಾಣ,ಅಡುಗೆಮನೆಯ ಕಸದ ಮರುಬಳಕೆ, ಅಡುಗೆಗೆ ಜೈವಿಕ ಇಂಧನ ಬಳಕೆ, ಸೌರ ವಿದ್ಯುತ್ ಬಯೋಗ್ಯಾಸ್ ಉತ್ಪಾದನೆಗೆ ಉತ್ತೇಜನ ಈ ಆಂದೋಲನದ ಪ್ರಮುಖ ಅಂಶಗಳು.

* ಇವನ್ನೂ ಓದಿ...

*ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತಕುಮಾರ್ ಇನ್ನಿಲ್ಲ

*ಅನಂತ ಜೀವನಯಾನ

*‘ಸುಮೇರು’ ಆವರಿಸಿದ ಅನಂತ ದುಃಖ

*‘ಹಸಿರು ಬೆಂಗಳೂರು’ ಕನಸು ಕಂಡ ಅದಮ್ಯ ಚೇತನ ಅನಂತಕುಮಾರ್

*ಅನಂತ್: ದೆಹಲಿ ರಾಜಕಾರಣದ ಒಳಮನೆ ಹೊಕ್ಕ ವಿರಳ ಕನ್ನಡಿಗ

*ವಿಶಿಷ್ಟ ಆಲೋಚನೆಗಳ ಸಂಘಟನಾ ಚತುರ

*ಅನಂತಕುಮಾರ್ಗೆ ಮೋದಿ ಅಂತಿಮ ನಮನ

*ಅನಂತಕುಮಾರ್ ಕೇಂದ್ರ, ರಾಜ್ಯ ಸರ್ಕಾರಕ್ಕೆ ಕೊಂಡಿಯಂತೆ ಇದ್ದರು: ಯಡಿಯೂರಪ್ಪ

*‘ಬಿಜೆಪಿಯ ಬಹುದೊಡ್ಡ ಆಸ್ತಿ’: ಅನಂತಕುಮಾರ್ ಸೇವೆ ನೆನಪಿಸಿಕೊಂಡ ರಾಷ್ಟ್ರ ನಾಯಕರು

*ಒಳ್ಳೆಯವರಿಗೆ ದೇವರು ಅನ್ಯಾಯ ಮಾಡಿಬಿಟ್ಟ; ಸಂಸದ ಪ್ರಹ್ಲಾದ ಜೋಶಿ

*ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ

*ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ: ಸುರೇಶ್ಕುಮಾರ್

*ರಾಜಕೀಯ ಕಾರ್ಯಭಾರದಲ್ಲಿ ರೋಗಲಕ್ಷಣ ನಿರ್ಲಕ್ಷಿಸಿದ್ದರೆ ಅನಂತಕುಮಾರ್?

*‘ಶೋಕಾಚರಣೆಯ ದಿನವಾಗದೆ ಕ್ಯಾನ್ಸರ್ಗೆ ತುತ್ತಾಗುವವರ ಭವಿಷ್ಯದ ಬಗ್ಗೆ ಚಿಂತಿಸಿ’

*ಅನಂತಕುಮಾರ್ ನೆನೆದು ಕಣ್ಣೀರಿಟ್ಟ ಸಂಸದ ಪ್ರತಾಪ್ ಸಿಂಹ

*ಟಾಟಾ ಎಸ್ಟೇಟ್ ಕಾರಲ್ಲಿ ಹಳ್ಳಿಹಳ್ಳಿ ಸಂಚರಿಸಿದ್ದೆವು: ಬೆಲ್ಲದ

*90 ವರ್ಷದವರೆಗೆ ಬದುಕುತ್ತೀನಿ ಅಂದಿದ್ದ ಅನಂತಕುಮಾರ್!

*ಗುರುಮಠಕಲ್ ವಶಕ್ಕಾಗಿ ‘ಅನಂತ’ ಯತ್ನ

*ಬೆಳಗಾವಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ‘ಅನಂತ’

*ಭಿನ್ನ ವಿಚಾರಧಾರೆ ಗೌರವಿಸುತ್ತಿದ್ದ ನಾಯಕ: 80ರ ದಶಕದಿಂದ ಬಾಗಲಕೋಟೆ ನಂಟು

*ಬಿಜೆಪಿಗೆ ‘ದಲಿತ’ ಬಲ ತುಂಬಿದ್ದ ಅನಂತಕುಮಾರ್

*ಉತ್ತರ ಕನ್ನಡ ಜಿಲ್ಲೆಯಲ್ಲೂ ‘ಅನಂತ’ ಹೆಜ್ಜೆ ಗುರುತು

*ಅನಂತಕುಮಾರ್ ರಾಣೆಬೆನ್ನೂರಿಗೆ ಬಂದಿದ್ದ ಕ್ಷಣಗಳ ನೆನಪು

*ಶಿವಮೊಗ್ಗ ಜಿಲ್ಲೆಯ ನಾಯಕರ ಒಡನಾಟದಲ್ಲಿ ‘ಅನಂತ’ ನೆನಪು

*ವಿಜಯಪುರ: ಅವಿಭಜಿತ ಜಿಲ್ಲೆಯೊಂದಿಗೆ ಅನಂತಕುಮಾರ್ ಅವಿನಾಭಾವ ಸಂಬಂಧ

*ಗೊರಕೆ ತಡೆಗೆ ಅನಂತಕುಮಾರ ಹೆಬ್ಬೆರಳಿಗೆ ದಾರ!

*ರಾಮನಗರ ಜಿಲ್ಲೆ ನಂಟು: ತಂಗಿ ಮಗಳ ನೆನಪಲ್ಲಿ ಕಾಲೇಜು ಸ್ಥಾಪಿಸಿದ್ದ ಅನಂತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.