ಕಲಬುರ್ಗಿ: ಚಿಕನ್, ಮೀನು ಕೊಟ್ಟಿಲ್ಲ, ಮಕ್ಕಳಿಗೆ ಚಿಪ್ಸ್ ನೀಡಿಲ್ಲ ಎಂದು ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆ.

ಮಹಾರಾಷ್ಟ್ರದಿಂದ ವಾಪಸಾಗಿ ಆಳಂದ ತಾಲ್ಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಸೋಮನಾಥ ಸೋನಕಾಂಬಳೆ ಹಲ್ಲೆ ನಡಸಿರುವ ಆರೋಪಿ.

ಹಲ್ಲೆಯಿಂದ ಕಾರ್ಯಕರ್ತೆ ರೇಣುಕಾ ನಾಗಪ್ಪ ಕುಡುಕೆ ಅವರ ಕೈಗೆ ಬಲವಾದ ಪೆಟ್ಟು ಬಿದ್ದಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

‘ಊಟಕ್ಕೆ ಚಿಕನ್, ಮೀನು ಕೊಡಿ. ಮಕ್ಕಳಿಗೆ ಚಿಪ್ಸ್ ಕೊಡಿಸಿ ಎಂದು ಕೇಳಿದರು. ಆ ಅಧಿಕಾರ ನನಗಿಲ್ಲ ಎಂದು ಉತ್ತರಿಸಿದ್ದೆ. ಸಿಟ್ಟಿಗೆದ್ದ ಆರೋಪಿ ನನ್ನ ಕೈ ತಿರುವಿ ಹಲ್ಲೆ ಮಾಡಿದ. ಆತನ ಮೂವರು ಸಂಬಂಧಿಕರು ಹಲ್ಲೆ ಮಾಡಿದರು‘ ಎಂದು ರೇಣುಕಾ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.