ಶಿವಮೊಗ್ಗ: 'ಹಾಸನ ಭಾಗದಲ್ಲಿ ಪ್ರತಿಷ್ಠಿತ ರಾಜಕೀಯ ಕುಟುಂಬವೊಂದರ ಯುವ ರಾಜಕಾರಣಿ ನೂರಾರು ಬಡ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ್ದಾನೆ ಎಂಬ ಸುದ್ಧಿಗಳು ಹೊರಬರುತ್ತಿವೆ. ಇದು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಹದ್ದು. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು' ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈಗ ಎಲ್ಲ ಕಡೆಯೂ ಹಾಸನ ಭಾಗದ ಆ ರಾಜಕಾರಣಿಯ ಲೈಂಗಿಕ ಹಗರಣದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಆತನಬಲೆಗೆ ಬಿದ್ದವರು ಬಡವರು, ಮುಸುರೆ ತಿಕ್ಕಲು ಬಂದವರು ಇದ್ದಾರೆ. ಅಷ್ಟೇ ಅಲ್ಲ, ಮಹಿಳಾ ಪೊಲೀಸರೊಬ್ಬರನ್ನು ಕೂಡ ಇದಕ್ಕೆ ಬಳಸಿಕೊಳ್ಳಲಾಗಿದೆ. ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳು ಅಸಹಾಯಕರಾಗಿರುವುದರಿಂದ ದೂರು ನೀಡಲು ಕೂಡ ಅವರು ಭಯ ಪಡುತ್ತಿದ್ದಾರೆ. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಬೇಕು‘ ಎಂದು ಆಗ್ರಹಿಸಿದರು.
.ಪೆನ್ಡ್ರೈವ್ ಪ್ರಕರಣ: ಮಹಿಳೆಯರ ರಕ್ಷಣೆಗೆ ಧಾವಿಸಲು ಆಗ್ರಹ.
ಭಾರತ ಮಾತೆಯ ರಕ್ಷಕರು ಎಂದು ಹೇಳಿಕೊಳ್ಳುವ ಬಿಜೆಪಿಯವರು ಈ ವಿಚಾರದಲ್ಲಿ ತುಟಿ ಬಿಚ್ಚುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಅನ್ಯಾಯಕೊಳಕ್ಕಾಗದ ಮಹಿಳೆಯರ ಪರ ಮಾತನಾಡದಿರುವುದು ಸರಿಯೇ ಎಂದು ಪ್ರಶ್ನಿಸಿದ ಆಯನೂರು ಮಂಜುನಾಥ್, ಶಿವಮೊಗ್ಗದಲ್ಲೂ ಹಿಂದೂ ಹುಲಿ ಅನ್ನಿಸಿಕೊಂಡ ಈಶ್ವರಪ್ಪ ಕೂಡ ಹಾಸನದಲ್ಲಿ ನೂರಾರು ಹಿಂದೂ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಸುಮ್ಮನಿದ್ದಾರೆ ಎಂದು ಲೇವಡಿ ಮಾಡಿದರು.
.ಪೆನ್ಡ್ರೈವ್ ಪ್ರಕರಣದ ಸಮಗ್ರ ತನಿಖೆ ಆಗಲಿ: ಕಾಂಗ್ರೆಸ್ ಅಭ್ಯರ್ಥಿಯ ತಾಯಿ ಒತ್ತಾಯ.
ಲೈಂಗಿಕ ಹಗರಣದಲ್ಲಿ ಒಂದಷ್ಡು ಒಪ್ಪಿತ, ಇನ್ನೊಂದಷ್ಟು ಬಲವಂತಕ್ಕೆ ಕಟ್ಟುಬಿದ್ದ ಸಂಬಂಧಗಳೇ ಇರಬಹುದು. ಆದರೆ ಖಾಸಗಿ ದೃಶ್ಯಗಳನ್ನು ವಿಡಿಯೊ ಚಿತ್ರೀಕರಿಸಿ ಇಟ್ಟುಕೊಳ್ಳಬಹುದೇ. ಇದರಿಂದ ಆಯಾ ಹೆಣ್ಣುಮಕ್ಕಳ ಕುಟುಂಬಗಳು ಸಾಮಾಜಿಕವಾಗಿ ಅಪಮಾನ ಅನುಭವಿಸಬೇಕಿದೆ. ಏನಾದರೂ ಅನಾಹುತಗಳು ಘಟಿಸಿದರೆ ಯಾರು ಜವಾಬ್ದಾರಿ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
.ನನ್ನ ಬಳಿಯೂ ಪೆನ್ಡ್ರೈವ್ ಇದೆ: ಲಕ್ಷ್ಮಣ ಸವದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.