ಕಮ್ಮಾರರಿಗೆ ಎಂದು ಯಾವುದೇ ಪ್ರತ್ಯೇಕ ಯೋಜನೆಗಳಿಲ್ಲ. ಅಸಂಘಟಿತ ಕಾರ್ಮಿಕರಿಗೆ ನೀಡುವ ಎಲ್ಲ ಸವಲತ್ತುಗಳನ್ನೂ ಅವರಿಗೂ ನೀಡಲಾಗುತ್ತಿದೆ.
–ಸಂತೋಷ್ ಲಾಡ್, ಕಾರ್ಮಿಕ ಸಚಿವಕೋವಿಡ್ ಸಮಯದಲ್ಲಿ ಸಮಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ₹5 ಸಾವಿರ ಪರಿಹಾರದ ಜತೆಗೆ ಆಹಾರದ ಕಿಟ್ ನೀಡಿದರು. ನಮ್ಮ ಕುಲುಮೆಗಳು ಬಂದ್ ಆದರೂ ಯಾವ ನೆರವೂ ಸಿಗಲಿಲ್ಲ.
--ಬಸವರಾಜ ಕಮ್ಮಾರ, ಹುನಗುಂದ ಕಮ್ಮಾರ ಸಂಘದ ಅಧ್ಯಕ್ಷವಿಶ್ವಕರ್ಮರಲ್ಲಿ 41 ಉಪಜಾತಿಗಳಿದ್ದು, ಮೈಸೂರು ವಿವಿಯಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಕಮ್ಮಾರರ ವಿಚಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬಂದಿದ್ದು, ಪ್ರಸ್ತುತ 28 ಜಿಲ್ಲೆಗಳಲ್ಲಿ ಅಧ್ಯಯನ ಮುಗಿದಿದೆ. 2025ರಲ್ಲಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
-ಕೃಷ್ಣಮೂರ್ತಿ, ಪ್ರಾಧ್ಯಾಪಕ, ಮೈಸೂರು ವಿವಿಕಟ್ಟಿಗೆಯ ಚಕ್ಕಡಿಯಾದರೆ ಪ್ರತಿ ಹಂಗಾಮಿಗೂ ಸಣ್ಣಪುಟ್ಟ ಕೆಲಸಗಳು ಬರುತ್ತಿದ್ದವು. ಕಬ್ಬಿಣದ ಚಕ್ಕಡಿ ಸಿದ್ಧಗೊಂಡರೆ ಕನಿಷ್ಠ 50 ವರ್ಷ ಬಾಳಿಕೆ ಬರುತ್ತದೆ. ಹೀಗಾಗಿ, ಕುಡಗೋಲು, ಕೊಡಲಿ, ಕುಡ, ಟೇಬಲ್, ಕುರ್ಚಿ ಮುಂತಾದ ಸಣ್ಣಪುಟ್ಟ ಕೆಲಸಗಳೇ ನಮಗೆ ಜೀವನಾಧಾರ.
– ಸುನೀಲ ಕಂಬಾರ, ಚಚಡಿಕಲಬುರಗಿಯ ಬಂಬೂ ಬಜಾರ್‌ನಲ್ಲಿ ಚಕ್ಕಡಿಯ ಕಟ್ಟಿಗೆ ಗಾಲಿಗೆ ಹಳಿಜೋಡಿಸಲು ಬೆರಣಿ ಜೋಡಿಸುತ್ತಿರುವ ಕಮ್ಮಾರ –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್
ಕಲಬುರಗಿಯ ಬಂಬೂ ಬಜಾರ್‌ನಲ್ಲಿ ಕುಲುಮೆ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್
ಕಲಬುರಗಿಯ ಬಂಬೂ ಬಜಾರ್‌ನಲ್ಲಿ ಕುಲುಮೆ ಕೆಲಸದಲ್ಲಿ ತೊಡಗಿರುವ ಕಮ್ಮಾರ – ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್
ರಾಯಚೂರು ಕೃಷಿ ಎಂಜಿನಿಯರಿಂಗ್ ಕಾಲೇಜಿನ ಕೃಷಿ ಯಂತ್ರೋಪಕರಣಗಳ ಹಾಗೂ ತಾಂತ್ರಿಕ ವಿಭಾಗದಲ್ಲಿ ಇಡಲಾದ ಬಹು ಉಪಕರಣ ಅಳವಡಿಸುವ ಯಂತ್ರಗಳು
ವಿಜಯಪುರದ ಸೋಲಾಪುರ ರಸ್ತೆ ಬದಿ ಕಬ್ಬಿಣವನ್ನು ಹದಗೊಳಿಸಿ ಬಡಿಯುತ್ತಿರುವ ಲೋಹರ್ ಸಮುದಾಯದವರು
–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದ ಸೋಲಾಪುರ ರಸ್ತೆ ಬದಿ ಕಬ್ಬಿಣವನ್ನು ಹದಗೊಳಿಸಿ ಬಡಿಯುತ್ತಿರುವ ಲೋಹರ್ ಸಮುದಾಯದವರು
–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ