ಬೆಂಗಳೂರು: ಬೆಳ್ಳಂದೂರಿನಲ್ಲಿ ಗ್ರೀನ್‌ಗ್ಲೆನ್ ಬಡಾವಣೆಯ ಬಳಿ ಸುಮಾರು 10 ಜೋಪಡಿಗಳು ಮಂಗಳವಾರ ಬೆಂಕಿಗಾಹುತಿಯಾಗಿವೆ. ಜೋಪಡಿಗಳಲ್ಲಿದ್ದವರನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿ ರಕ್ಷಣೆ ಮಾಡಿದರು.

ಈ ಜೋಪಡಿಗಳಲ್ಲಿ ದಿನಗೂಲಿ ಕಾರ್ಮಿಕರು ನೆಲೆಸಿದ್ದರು. ಇವುಗಳ ಸಮೀಪದಲ್ಲಿ ಹಾದುಹೋಗಿದ್ದ ವಿದ್ಯುತ್ ಮಾರ್ಗದಲ್ಲಿ ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಅದು ಜೋಪಡಿಗಳಿಗೂ ವ್ಯಾಪಿಸಿತ್ತು.

‘ಬೆಂಕಿಯಿಂದಾಗಿ ಅಡುಗೆ ಅನಿಲದ ಸಿಲಿಂಡರ್‌ಗಳೂ ಸಿಡಿಯಲಾರಂಭಿಸಿದವು. ನಾವು ತಕ್ಷಣವೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಮಾಹಿತಿ ನೀಡಿದೆವು. ಬೆಳ್ಳಂದೂರು ಆಸುಪಾಸಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚು ಇದ್ದುದರಿಂದ ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪುವಾಗ ವಿಳಂಬವಾಯಿತು. ಬಹುತೇಕ ಜೋಪಡಿಗಳು ಸರ್ವನಾಶವಾಗಿವೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು.

‘ಸುಮಾರು 50 ನಿಮಿಷಗಳ ಪ್ರಯತ್ನದ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದೆವು. ಘಟನೆಯಿಂದ ಕೆಲವರಿಗೆ ಗಾಯಗಳಾಗಿವೆ. ಜೋಪಡಿಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

‘ಜೋಪಡಿ ನಿವಾಸಿಗಳ ಸ್ವತ್ತುಗಳೆಲ್ಲವೂ ನಾಶವಾಗಿವೆ. ಹಾಗಾಗಿ ಸ್ಥಳೀಯರೆಲ್ಲ ಸೇರಿ ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿಕೊಟ್ಟೆವು. ಬಟ್ಟೆ ಬರೆಗಳನ್ನು ಪಾತ್ರೆಗಳನ್ನು ಹಾಗೂ ಆಹಾರ ಸಾಮಗ್ರಿಗಳನ್ನು ಒದಗಿಸಿದೆವು’ ಎಂದು ಮಹದೇವಪುರದ ಸೋನಾಲಿ ಸಿಂಗ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.