ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತನ ಪತ್ತೆಗಾಗಿ ಎನ್‌ಐಎ ಹಾಗೂ ಇತರೆ ತನಿಖಾ ಸಂಸ್ಥೆಗಳು ಹುಡುಕಾಟ ಆರಂಭಿಸಿವೆ. ತನಿಖೆಗೆ ನೆರವು ನೀಡುವ ಉದ್ದೇಶದಿಂದ ಕಲಾವಿದ ಹರ್ಷ, ಶಂಕಿತನ ರೇಖಾಚಿತ್ರ ಬಿಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಸ್ಫೋಟಕ್ಕೂ ಮುನ್ನ ಹಾಗೂ ಸ್ಫೋಟದ ನಂತರ ಶಂಕಿತ ಓಡಾಡುತ್ತಿದ್ದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದೇ ದೃಶ್ಯಗಳನ್ನು ಆಧರಿಸಿ ಹರ್ಷ ಅವರು ರೇಖಾಚಿತ್ರ ಬಿಡಿಸಿದ್ದಾರೆ.

‘10’ ಸಂಖ್ಯೆ ಕ್ಯಾಪ್ ಧರಿಸಿರುವ ಶಂಕಿತನ ಮೂರು ಪ್ರತ್ಯೇಕ ಮುಖಚಹರೆಯನ್ನು ಕಲಾವಿದ ಹರ್ಷ ಹಾಳೆ ಮೇಲೆ ಬಿಡಿಸಿದ್ದಾರೆ. ಇದೇ ರೇಖಾಚಿತ್ರವನ್ನು ಎನ್‌ಐಎ ಹಾಗೂ ಇತರೆ ತನಿಖಾ ಸಂಸ್ಥೆಗಳ ಸಾಮಾಜಿಕ ಮಾಧ್ಯಮಗಳ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.