ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾರಿಗೆ ತಂದಿದ್ದ ‘ಭಾಗ್ಯಲಕ್ಷ್ಮಿ’ ಯೋಜನೆಯ ಬಾಂಡ್, ಮಗು ಹುಟ್ಟಿದ ಆರು ತಿಂಗಳ ಒಳಗಾಗಿ ಫಲಾನುಭವಿಗಳ ಕೈಸೇರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಸೋಮವಾರ ಇಲ್ಲಿ ತಿಳಿಸಿದರು.

’ಮಗು ಜನಿಸಿದ ವರ್ಷದೊಳಗೆ ಯೋಜನೆಯ ಸೌಲಭ್ಯ ಪಡೆಯಬಹುದಾಗಿತ್ತು. ಆದರೆ, ಕಳೆದ ಆರು ವರ್ಷಗಳಲ್ಲಿ ಈ ಸೌಲಭ್ಯ ಮರೀಚಿಕೆಯಾಗಿತ್ತು. ಅಗತ್ಯ ದಾಖಲಾತಿಗಳು ವರ್ಷದೊಳಗೆ ಸಿಗದೇ ಅನೇಕರು ಸೌಲಭ್ಯ ವಂಚಿತರಾಗುತ್ತಿದ್ದರು. ಈ ಕುರಿತು ಆಗಿನ ಸಚಿವರ ಗಮನಕ್ಕೂ ತಂದಿದ್ದೆ. ಮಗು ಜನಿಸಿದ 2 ವರ್ಷದವರೆಗೆ ಸೌಲಭ್ಯ ಪಡೆಯುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಈಡೇರಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.