ಸ್ವಾತಂತ್ರ್ಯ ನಂತರದ ಆರಂಭಿಕ ದಿನಗಳಲ್ಲಿ ಇದ್ದ ವಕ್ಫ್ ಆಸ್ತಿಗಳ ಸಂಖ್ಯೆ 10 ಸಾವಿರ. ಇದೀಗ ವಕ್ಫ್ ಆಸ್ತಿ ಸಂಖ್ಯೆ ಸುಮಾರು 9.5 ಲಕ್ಷ ಮತ್ತು ವಕ್ಫ್ ಹೆಸರಿನಲ್ಲಿ 38 ಲಕ್ಷ ಎಕರೆ ಭೂಮಿ ಇದೆ. ಇದು ಆತಂಕ ತರುವ ವಿಚಾರ. ಕಾನೂನುಬಾಹಿರ ಕಾಯ್ದೆಗಳ ಮೂಲಕ ನಮ್ಮ ರೈತರ, ನಮ್ಮ ದೇವಸ್ಥಾನವನ್ನು, ಮಠ ಮಂದಿರಗಳನ್ನು ವಕ್ಫ್ ಎಂದು ಘೋಷಿಸುತ್ತಿರುವುದು ನಮ್ಮ ತಕರಾರಿಗೆ ಕಾರಣ.
–ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಅಷ್ಟ ಮಠದ ಜಾಗವನ್ನೂ ವಕ್ಫ್ ಬೋರ್ಡಿಗೆ ಸೇರಿದ್ದು ಎನ್ನುತ್ತಾರೆ. ಆಳಂದ ತಾಲ್ಲೂಕಿನಲ್ಲಿ ಸಿದ್ದರಾಮಯ್ಯನವರ ಕುಲದೇವರಾದ ಬೀರಲಿಂಗೇಶ್ವರರ ಗುಡಿ, ಸಾವಿರಾರು ಎಕರೆ ರೈತರ ಜಮೀನು, ಹಿಂದೂಗಳ ಸ್ಮಶಾನವನ್ನೂ ವಕ್ಫ್‌ಗೆ ಸೇರಿದ್ದು ಎನ್ನುತ್ತಿದ್ದಾರೆ.