ಬೆಂಗಳೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಳು ಮಾಡಲು ಬಿಜೆಪಿಯವರು ಹೊರಟ್ಟಿದ್ದಾರೆ’ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಪಿ.ಎಂ. ನರೇಂದ್ರಸ್ವಾಮಿ, ‘ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ಸಿಲುಕಿಸುತ್ತೇವೆ ಎಂದು ಹೊರಟರೆ ಅದು ಸಾಧ್ಯ ಇಲ್ಲ. ಬಿಜೆಪಿಯವರ ಪ್ರತಿಭಟನೆ ನಾಟಕ ಅಷ್ಟೆ. ಎಷ್ಟು ದಿನ ಈ ನಾಟಕ ನಡೆಯುತ್ತದೆ ಎಂದು ನೋಡೋಣ’ ಎಂದರು.

‘ಬಿಜೆಪಿ, ಜೆಡಿಎಸ್ ನಾಯಕರ ಕುತಂತ್ರಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನರ ಮುಂದೆ ನಾವು ಬಿಚ್ಚಿಡುತ್ತೇವೆ’ ಎಂದೂ ಹೇಳಿದರು.

ನಾರಾಯಣಸ್ವಾಮಿ ಮಾತನಾಡಿ, ‘ಮುಡಾ ನಿವೇಶನ ಹಂಚಿಕೆಯ ಹಳೆಯ ಹಗರಣವನ್ನು ಉದ್ದೇಶಪೂರ್ವಕವಾಗಿ ಬಿಜೆಪಿಯವರು ಎತ್ತಿದ್ದಾರೆ. ಈ ಬಗ್ಗೆ ಚರ್ಚೆಗೆ ಅವಕಾಶ ಕೇಳಿ ಧರಣಿ ಮಾಡುತ್ತಿದ್ದಾರೆ. ಬಿಜೆಪಿಯವರು ನಡೆಸುತ್ತಿರುವುದು ರಾಜಕೀಯ ದುರುದ್ದೇಶದ ಪ್ರತಿಭಟನೆ’ ಎಂದರು.

‘ಈ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿ ಆಗಿಲ್ಲ. ಹಂಚಿಕೆ ಮಾಡಿದರಲ್ಲಿ ಮುಖ್ಯಮಂತ್ರಿ ಸಹಿ ಇಲ್ಲ. ಬಿಜೆಪಿ ಅವಧಿಯಲ್ಲಿ ಈ ಹಗರಣ ಆಗಿದೆ. ರಾಜಕೀಯ ಉದ್ದೇಶದಿಂದ ಧರಣಿ ನಡೆಯುತ್ತಿದೆ. ಬಿಜೆಪಿಯವರು ಯಾವ ಉದ್ದೇಶದಿಂದ ಮೈಸೂರು ಪಾದಯಾತ್ರೆ ಮಾಡಲು ಹೊರಟಿದ್ದಾರೆ? ಈಗಾಗಲೇ ಈ ಹಗರಣದ ತನಿಖೆ ನಡೆಯುತ್ತಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿ ಪಾದಯಾತ್ರೆ ಮಾಡುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಮೈಸೂರಿನಲ್ಲಿ ವಾಸವಿದ್ದೇನೆ. ನನಗೆ ನಿವೇಶನ ಕೊಡಿ ಎಂದು ಕುಮಾರಣ್ಣ (ಎಚ್.ಡಿ. ಕುಮಾರಸ್ವಾಮಿ) ಪತ್ರ ಬರೆದಿದ್ದಾರೆ. ಕುಮಾರಣ್ಣ ಏನಾದರೂ ಉದ್ಯಮ ಮಾಡಿದ್ದಾರಾ? ಕುಮಾರಣ್ಣನವರೇ ಯಾವ ಇಂಡಸ್ಟ್ರಿ ಮಾಡಿ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ? ಎಚ್.ಡಿ. ಬಾಲಕೃಷ್ಣ ಕೂಡ ನಿವೇಶನ ಪಡೆದಿದ್ದಾರೆ. ಅವರ ಅತ್ತೆ, ಪತ್ನಿ ಕೂಡ ನಿವೇಶನ ಪಡೆದುಕೊಂಡಿದ್ದಾರೆ. ಅದೂ ಅಕ್ರಮ ಅಲ್ಲವೇ ಕುಮಾರಣ್ಣ? ಇದರ ಬಗ್ಗೆ ಯಾಕೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಸಿದ್ರಾಮಣ್ಣ ಅವರನ್ನು ಕಟ್ಟಿಹಾಕಲು ಬಿಜೆಪಿಯವರು ಈ ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದೂ ನಾರಾಯಣಸ್ವಾಮಿ ಆರೋಪಿಸಿದರು.

‘ಕಪ್ಪು ಚುಕ್ಕೆಯಿಲ್ಲದ ರಾಜಕಾರಣಿ ಅಂದ್ರೆ ಸಿದ್ರಾಮಣ್ಣ. ಇಡೀ ದೇಶದಲ್ಲೇ ಅಂತಹ ರಾಜಕಾರಣಿ ಇಲ್ಲ. ಅವರಿಗೆ ಕಪ್ಪು ಚುಕ್ಕೆ ತರಲು ಹೊರಟಿದ್ದಾರೆ. ನಾಟಕ ಮಾಡುತ್ತಿರುವ ಬಿಜೆಪಿ, ಜೆಡಿಎಸ್ನವರಿಗೆ ಜನ ಬುದ್ಧಿ ಕಲಿಸಬೇಕು’ ಎಂದು ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ, ‘ದಲಿತರ ಭೂಮಿ ಪಡೆದಿದ್ದಾರೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ, ಅದು ಕ್ರಯಕ್ಕೆ ಪಡೆದ ಭೂಮಿ’ ಎಂದರು.

‘ಕುಮಾರಣ್ಣ ಅರ್ಜಿ ಹಾಕಿ ಮುಡಾದಿಂದ 21 ಸಾವಿರ ಚದರಡಿ ವಿಸ್ತೀರ್ಣದ ನಿವೇಶನ ಪಡೆದಿದ್ದಾರೆ. ಅವರಿಗೆ ಹೇಗೆ ನಿವೇಶನ ಕೊಟ್ಟರು? ಸಾ.ರಾ. ಮಹೇಶ್, ಜಿ.ಟಿ. ದೇವೇಗೌಡ ಅವರು ಕೂಡ ನಿವೇಶನ ತೆಗೆದುಕೊಂಡಿದ್ದಾರೆ. ಅವರ ಬಗ್ಗೆ ಯಾಕೆ ನೀವು ಮಾತನಾಡುತ್ತಿಲ್ಲ? ಸಿದ್ದರಾಮಯ್ಯ ಪಡೆದರೆ ಮಾತ್ರ ಅಕ್ರಮವೇ’ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ಕೊಟ್ಟಿದ್ದು ಯಾವ ಸರ್ಕಾರ? ಅಂದಿನ ಅಧ್ಯಕ್ಷ ರಾಜೀವ ಯಾವ ಪಕ್ಷದಲ್ಲಿದ್ದ? ಆಗ ನಗರಾಭಿವೃದ್ಧಿ ಸಚಿವ ಯಾರಿದ್ದರು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏನು ಮಾಡುತ್ತಿದ್ದರು? ಈಗ ಧರಣಿ ಮಾಡುತ್ತಿರುವ ಬಿಜೆಪಿ ನಾಯಕರು, ತಮ್ಮವರೂ ತಪ್ಪು ಮಾಡಿದ್ದಾರೆಂದು ಹೇಳುತ್ತಿದ್ದಾರಾ’ ಎಂದೂ ಪ್ರಶ್ನಿಸಿದರು.

‘ಈ ಪ್ರಕರಣದ ಹಿನ್ನೆಲೆ ಗಾಯಕ ಎಚ್.ಡಿ. ಕುಮಾರಸ್ವಾಮಿ. ಧರಣಿ ಮಾಡುವಂತೆ ಸೂಚನೆ ಕೊಟ್ಟಿರುವುದೂ ಅವರೇ’ ಎಂದು ಕುಮಾರಸ್ವಾಮಿ ವಿರುದ್ದ ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.