ಬೆಂಗಳೂರು: ‘ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರ ಬಗ್ಗೆ ಅನುಕಂಪ ತೋರುವ ಬದಲು ಅವಕಾಶಗಳನ್ನು ನೀಡಬೇಕು. ಸಮುದಾಯದವರ ಬಗೆಗಿನ ತಪ್ಪು ಕಲ್ಪನೆ ಹೋಗಲಾಡಿಸಲು ಶಾಲಾ ಪಠ್ಯದಲ್ಲಿಯೇ ಪಾಠಗಳನ್ನು ಅಳವಡಿಸಬೇಕು...’

ಹೀಗೆ ಹೇಳಿದವರು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಪ್ರಮುಖರು. ಬುಕ್ ಬ್ರಹ್ಮ ಸಾಹಿತ್ಯೋತ್ಸವದ ‘ಲಿಂಗ ಸಂವೇದನೆ: ದಕ್ಷಿಣ ಭಾರತದ ಸಾಹಿತ್ಯ’ ಗೋಷ್ಠಿಯಲ್ಲಿ ಸಮುದಾಯದವರ ಸ್ಥಿತಿಗತಿ ಬಗ್ಗೆ ಚರ್ಚಿಸಲಾಯಿತು.

ಜಾನಪದ ಕಲಾವಿದೆ ಮಂಜಮ್ಮ ಜೋಗತಿ, ‘ಕಲಾವಿದೆಯಾಗಿ ನನಗೆ ಅಕಾಡೆಮಿ ಅಧ್ಯಕ್ಷ ಸ್ಥಾನ, ಪ್ರಶಸ್ತಿಗಳನ್ನು ಸರ್ಕಾರ ನೀಡಿ ಗೌರವಿಸಿದೆ. ಆದರೆ, ನಮ್ಮ ಸಮುದಾಯದವರನ್ನು ಸರ್ಕಾರ ಗುರುತಿಸುತ್ತಿಲ್ಲ. ಇದರಿಂದಾಗಿ ನಮ್ಮ ಬಗೆಗಿನ ತಪ್ಪು ಕಲ್ಪನೆ ತೊಲಗಲಿಲ್ಲ. ಈಗಲೂ ಮಕ್ಕಳಲ್ಲಿ ಕೆಟ್ಟ ಅಭಿಪ್ರಾಯಗಳನ್ನು ಮೂಡಿಸಲಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಸಿಗಬೇಕಾದರೆ ಶಾಲಾ ಪಠ್ಯದಲ್ಲಿಯೇ ಸಮುದಾಯದ ಬಗ್ಗೆ ಅಗತ್ಯ ಮಾಹಿತಿ ಒದಗಿಸಬೇಕು’ ಎಂದರು.

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ,‘ನಮ್ಮ ಗುರುತು, ಲಿಂಗವನ್ನು ನಾವು ನಿರ್ಧರಿಸುತ್ತೇವೆ. ನಾವು ಕೂಡಾ ಸಮಾಜದಲ್ಲಿ ಎಲ್ಲರ ಹಾಗೆ ಸಹಜವಾಗಿ ಬದುಕುವುದಕ್ಕಾಗಿ ಮುಕ್ತ ವಾತಾವರಣ ಅಗತ್ಯ. ನಮ್ಮ ಬಗ್ಗೆ ಕರುಣೆ ತೋರುವ ಬದಲು ಗೌರವ ನೀಡಬೇಕು. ನಮ್ಮ ಹೋರಾಟ ನಿರಂತರವಾಗಿ ನಡೆಯಲಿದ್ದು, ಮುಂದೊಂದು ದಿನ ಸಮುದಾಯದವರು ಸಂಸತ್ತು ಪ್ರವೇಶಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕವಿ ಮಾಳವಿಕಾ, ‘ಪಠ್ಯಪುಸ್ತಕ ರಚಿಸಿರುವವರು ನಮ್ಮ ಸಮುದಾಯವನ್ನು ತೆರೆಮರೆಯಲ್ಲಿ ಇಟ್ಟಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಸಾಹಿತಿಗಳು ನಮ್ಮನ್ನು ಒಪ್ಪದಿದ್ದರಿಂದ ಅವರು ನಮ್ಮ ಬಗ್ಗೆ ಬರೆದಿಲ್ಲ. ನಮ್ಮ ಸಾಹಿತ್ಯವನ್ನು ನಾವೇ ಬರೆದು, ಪ್ರಪಂಚಕ್ಕೆ ತಲುಪಿಸಬೇಕು’ ಎಂದರು.

ಸಂಗೀತಗಾರ್ತಿ ರೂಮಿ ಹರೀಶ್ ಗೋಷ್ಠಿ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.