ಬೆಂಗಳೂರು: ‘ಕಾಂಗ್ರೆಸ್ನ ಯಾವ ಶಾಸಕರಿಗೆ ಆಮಿಷ ಒಡ್ಡಲಾಗಿತ್ತು? ನಿಮ್ಮ ಶಾಸಕರು ದನಕರುಗಳೇ? ಖರೀದಿಗೆ ಅವರನ್ನು ಮಾರುಕಟ್ಟೆಯಲ್ಲಿ ಇಟ್ಟಿದ್ದೀರಾ’ ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸರ್ಕಾರ ಬೀಳಿಸಲು ಪ್ರತಿ ಶಾಸಕರಿಗೆ ₹50 ಕೋಟಿಯ ಆಮಿಷ ಒಡ್ಡಿದ್ದಾರೆ ಎಂದು ಮುಖ್ಯಮಂತ್ರಿ ಆರೋಪ ಮಾಡಿದ್ದಾರೆ. ಅದಕ್ಕೆ ಅವರು ಪುರಾವೆ ನೀಡಬೇಕು. ಇಲ್ಲವೇ ರಾಜೀನಾಮೆ ನೀಡಿ ಹೋಗಬೇಕು’ ಎಂದು ಆಗ್ರಹಿಸಿದರು.

‘ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಲು ಅವರ ಪಕ್ಷದವರೇ ಖೆಡ್ಡಾ ತೋಡಿದ್ದಾರೆ. ಸರ್ಕಾರ ಬೀಳಿಸುವ ಅವಶ್ಯ ನಮಗಿಲ್ಲ. ಒಂದು ಕೋಟಿಗೆ ಬರುತ್ತೇವೆ ಎಂದು ಅವರ ಶಾಸಕರು ಹೇಳಿದರೂ, ನಮಗವರು ಬೇಡ. ಸರ್ಕಾರ ತಾನಾಗಿಯೇ ಬೀಳುತ್ತದೆ. ನಾವು ಚುನಾವಣೆ ಎದುರಿಸಿ ಸರ್ಕಾರ ರಚಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.