ಸುಬ್ರಹ್ಮಣ್ಯ: ಮಕ್ಕಳು ಆಹಾರದಲ್ಲಿ ವಿಷ ಬೆರೆಸಿ ತಂದೆಯನ್ನೇ ಹತ್ಯೆ ಮಾಡಲು ಯತ್ನಿಸಿದ ಘಟನೆ ಇಲ್ಲಿನ ಗುತ್ತಿಗಾರು ಬಳಿಯ ನಾಲ್ಕೂರು ಗ್ರಾಮದ ಅಂಜೇರಿಯಲ್ಲಿ ಗುರುವಾರ ನಡೆದಿದೆ.

ಹೊನ್ನಪ್ಪ ನಾಯ್ಕ ಅಂಜೇರಿ ಎಂಬುವವರ ಮಕ್ಕಳಾದ ದೇವಿಪ್ರಸಾದ್ (33) ಹಾಗೂ ಲೋಕೇಶ್ (35) ಎಂಬುವವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆಯಲ್ಲಿ ಗುರುವಾರ ರಾತ್ರಿ ಹಂದಿ ಮಾಂಸದ ಅಡುಗೆ ಮಾಡಲಾಗಿತ್ತು. ಮನೆ ಮಂದಿ ಊಟ ಮಾಡಿದ ಬಳಿಕ, ಮಗ ದೇವಿಪ್ರಸಾದ್ ಅಡುಗೆಗೆ ವಿಷ ಬೆರೆಸಿಟ್ಟಿದ್ದರು. ಇದಕ್ಕೆ ಇನ್ನೊಬ್ಬ ಮಗ ಲೋಕೇಶ್ ಕೂಡಾ ಸಹಕಾರ ನೀಡಿದ್ದರು ಎನ್ನಲಾಗಿದೆ. ಬೆಳಿಗ್ಗೆ ಮಾಂಸದ ಅಡುಗೆ ಸೇವಿಸಿದ ತಂದೆ ವಾಂತಿ ಮಾಡಿಕೊಂಡು, ತೀವ್ರ ಅಸ್ವಸ್ಥಗೊಂಡಾಗ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇದೀಗ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹೊನ್ನಪ್ಪ ಅವರ ಪತ್ನಿ ಸವಿತಾ ದೂರು ನೀಡಿದ್ದು, ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿ ವಿಚಾರವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.