ಮಂಗಳೂರು: ತಮ್ಮ ಬರ್ತ್ ಡೇ ಬಂದರೆ ಸಾಕು ಮಕ್ಕಳು ಸಂಭ್ರಮದಲ್ಲಿ ತೇಲಾಡುತ್ತಿರುತ್ತಾರೆ. ದೊಡ್ಡದಾದ ಕೇಕ್, ಹೊಸ ವಸ್ತ್ರ, ಸ್ನೇಹಿತರಿಗೆ ಸಿಹಿತಿಂಡಿ.. ಹೀಗೆ ಉದ್ದವಾದ ಪಟ್ಟಿ ಮಾಡಿ ಪೋಷಕರಲ್ಲಿ ಪಟ್ಟು ಹಿಡಿಯುವುದು ಸಾಮಾನ್ಯ. ಆದರೆ, ಮಂಗಳೂರಿನ ಸನ್ಮತಿ ತನ್ನ 10ನೇ ವರ್ಷದ ಜನ್ಮದಿನಕ್ಕೆ ಅಜ್ಜಿ ನೀಡಿದ ₹ 10 ಸಾವಿರದ ಚೆಕ್ ಅನ್ನು ನೆರೆ ಸಂತ್ರಸ್ತರ ನೆರವಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಳು.

ತಲಪಾಡಿಯ ಕಿನ್ಯಾದ ಶಾರದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ 5ನೇ ತರಗತಿ ಓದುತ್ತಿರುವ ಸನ್ಮತಿ, ಆಗಸ್ಟ್ 25ರಂದು ತನ್ನ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಳು. ಅಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರ ಮೂಲಕ ‘ಮುಖ್ಯಮಂತ್ರಿ ಪರಿಹಾರ ನಿಧಿ’ಗೆ ಚೆಕ್ ಹಸ್ತಾಂತರಿಸಿ, ‘ಹುಟ್ಟಿದ ದಿನದ ನೆನಪಿನಲ್ಲಿ ನೆರೆ ಸಂತ್ರಸ್ತರಿಗೆ ನನ್ನ ಕಿಂಚಿತ್ ಕಾಣಿಕೆ’ ಎಂಬ ಒಕ್ಕಣೆಯ ಪತ್ರವನ್ನೂ ನೀಡಿದ್ದಳು. ಬಾಲೆಯ ಹೃದಯವಂತಿಕೆಗೆ ಜಿಲ್ಲಾಧಿಕಾರಿಯೂ ಶಹಭಾಷ್ ಹೇಳಿದ್ದರು.

‘ಮಾಧ್ಯಮಗಳಲ್ಲಿ ನೆರೆ ಸಂತ್ರಸ್ತರ ನೋವನ್ನು ವೀಕ್ಷಿಸುತ್ತಿದ್ದೆ. ನೂರಾರು ಮಕ್ಕಳು ಬೀದಿಯಲ್ಲಿ ವಾಸಿಸುತ್ತಿದ್ದರು. ಅವರ ಪುಸ್ತಕಗಳೂ ನೀರು ಪಾಲಾಗಿರುವು ದನ್ನು ಕಂಡು ಸಂಕಟವಾಯಿತು. ಅದೇ ವೇಳೆ ನನ್ನ ಜನ್ಮದಿನ ಇದ್ದುದರಿಂದ ಸರಳ ವಾಗಿ ಆಚರಿಸಿಕೊಂಡು, ಹೊಸ ವಸ್ತ್ರ ಖರೀದಿಸಲು ಅಜ್ಜಿ ನೀಡಿದ ಚೆಕ್ ಅನ್ನು ದೇಣಿಗೆಯಾಗಿ ನೀಡಿದೆ’ ಎನ್ನುತ್ತಾಳೆ.

ಪದವಿಪೂರ್ವ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ನಿತಿನ್ ಮತ್ತು ದೀಪಾ`ರಾಣಿ ದಂಪತಿಯ ಎರಡನೇ ಪುತ್ರಿಯಾದ ಸನ್ಮತಿ, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಮೊಮ್ಮಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.