ಬೀದರ್: ‘ಸಿ.ಎಂ. ಇಬ್ರಾಹಿಂ ಅವರನ್ನು ಜೆಡಿಎಸ್ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿರುವುದು ಖಂಡನಾರ್ಹ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹೀಗೆ ಮಾಡುವುದರ ಮೂಲಕ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೆ ಅವಮಾನ ಮಾಡಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ ವಾಲದೊಡ್ಡಿ ಹೇಳಿದರು.
.ಕುಮಾರಸ್ವಾಮಿಗೆ ಜೆಡಿಎಸ್ ಪಕ್ಷದ ಹೊಣೆ: ಎಚ್.ಡಿ.ದೇವೇಗೌಡ.
ಇಬ್ರಾಹಿಂ ಅವರ ಉಚ್ಚಾಟನೆಗೂ ಮುನ್ನ ಪಕ್ಷದ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣ ನಾಚಿಕೆಗೇಡಿನ ಸಂಗತಿಯಾಗಿದೆ. ಯಾವುದೇ ಕಾರಣಕ್ಕೂ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿಯಾದ್ರೆ ನಾವು ಪಕ್ಷದಲ್ಲಿ ಇರುವುದಿಲ್ಲ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
.ಜೆಡಿಎಸ್ ಸಮಿತಿ ವಿಸರ್ಜನೆ: ಎಚ್.ಡಿ.ಕುಮಾರಸ್ವಾಮಿ ಹಂಗಾಮಿ ಅಧ್ಯಕ್ಷ.
ಮಾಜಿ ಪ್ರಧಾನಿಯಾಗಿ ಕೆಲಸ ಮಾಡಿದ ದೇವೇಗೌಡರು, ಇಬ್ರಾಹಿಂ ಉಚ್ಚಾಟನೆಗೂ ಮುನ್ನ ಸ್ವಲ್ಪ ವಿಚಾರ ಮಾಡಬೇಕಿತ್ತು. ಜೆಡಿಎಸ್ ಅಂದರೆ ತಂದೆ–ಮಗನ ಪಕ್ಷ ಎಂದು ತಿಳಿದುಕೊಂಡಿದ್ದಾರೆ. ಪಕ್ಷಕ್ಕಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದನ್ನು ಮರೆತು ಹೋಗಿದ್ಧಾರೆ. ಇಬ್ರಾಹಿಂ ಅವರು ಬಸವ ತತ್ವ ಹಾಗೂ ಅಂಬೇಡ್ಕರ್ ಸಿದ್ದಾಂತಗಳನ್ನು ಅಳವಡಿಸಿಕೊಂಡು ಪ್ರತಿಯೊಂದು ಸಮಾಜದ ಜೊತೆಗೆ ಹೋಗುತ್ತಿದ್ದರು. ಕಾಂಗ್ರೆಸ್‌ನಲ್ಲಿ ಎಂಎಲ್‌ಸಿ ಆಗಿದ್ದವರನ್ನು ಜೆಡಿಎಸ್‌ಗೆ ಕರೆತಂದವರೇ ಗೌಡರ ಕುಟುಂಬದವರು. ಈಗ ಅವರ ವಿರುದ್ಧ ಕ್ರಮ ಕೈಗೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಕೇಳಿದರು.
.ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ಗೆ ಹೋಗುವುದಾದರೆ ಹೋಗಲಿ: ಎಚ್.ಡಿ. ರೇವಣ್ಣ.
ಕಾಶೆಂಪುರ್ ಪಶ್ಚತ್ತಾಪ ಪಡ್ತಾರೆ: ‘ಜೆಡಿಎಸ್ ಮುಖಂಡರೂ ಆದ ಮಾಜಿಸಚಿವ ಬಂಡೆಪ್ಪ ಕಾಶೆಂಪುರ್ ಅವರು ಈಗ ಒಂದುವೇಳೆ ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ತೆಗೆದುಕೊಂಡಿರುವ ನಿರ್ಧಾರದ ಪರವಾಗಿ ನಿಂತರೆ ಮುಂದೆ ಪಶ್ಚತ್ತಾಪ ಪಡ್ತಾರೆ. ಪಕ್ಷದ ಕಾರ್ಯಕರ್ತರು ಜೊತೆಗಿರದಿದ್ದರೆ ಕೊನೆಯ ವರೆಗೆ ಮಾಜಿಯಾಗಿಯೇ ಇರಬೇಕಾಗುತ್ತದೆ’ ಎಂದು ವಿಷ್ಣುವರ್ಧನ ವಾಲದೊಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.