ಬೆಂಗಳೂರು:ವಿಧಾನಸಭೆ ಉಪ ಚುನಾ ವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಕಾಂಗ್ರೆಸ್ ನಾಯಕರು ಕಸರತ್ತು ಮುಂದುವರಿಸಿದ್ದು, ಬುಧವಾರ 11 ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಿದರು.

ಬೆಂಗಳೂರು ನಗರದ ಕ್ಷೇತ್ರಗಳು, ಹೊಸಕೋಟೆ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ತಮ್ಮ ನಾಯಕರ ಮೂಲಕ ಆಕಾಂಕ್ಷಿಗಳು ಲಾಬಿ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್‌ಗೂ ಅನಿವಾರ್ಯವಾಗಿದ್ದು, ಗೆಲ್ಲುವ ಅಭ್ಯರ್ಥಿಗಾಗಿ ಮುಖಂಡರು ಹುಡುಕಾಟ ನಡೆಸಿದ್ದಾರೆ.

ರಿಜ್ವಾನ್ ಸ್ಪರ್ಧೆಗೆ ವಿರೋಧ: ಶಿವಾಜಿನಗರ ಕ್ಷೇತ್ರದಲ್ಲಿ ರಿಜ್ವಾನ್ ಅರ್ಷದ್ ಸ್ಪರ್ಧಿಸಲು ಅವಕಾಶ ನೀಡ ಬಾರದು. ಅವರು ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದಾರೆ. ಮತ್ತೊಮ್ಮೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದು, ಈ ಸಂದರ್ಭದಲ್ಲಿ ಆಕಾಂಕ್ಷಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.ಸಿದ್ದರಾಮಯ್ಯ ಎದುರೇ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.

ಕ್ಷೇತ್ರದಲ್ಲಿ ಹಿಂದೂಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಾರಿ ಅಲ್ಪ ಸಂಖ್ಯಾತರನ್ನು ಹೊರತು ಪಡಿಸಿ ಬೇರೆ ಸಮುದಾಯದವರಿಗೆ ಟಿಕೆಟ್ ನೀಡುವಂತೆ ಕೆಲವರು ಬೇಡಿಕೆ ಮಂಡಿಸಿದ್ದಾರೆ ಎನ್ನಲಾಗಿದೆ. ಟಿಕೆಟ್ಆಕಾಂಕ್ಷಿಗಳಾದಬಿ.ಆರ್.ನಾಯ್ಡು, ರೆಹಮಾನ್ ಷರೀಫ್, ಹುಸೇನ್, ರಿಜ್ವಾನ್ ಅರ್ಷದ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಯಶವಂತಪುರ: ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಎಂ.ರಾಜ್‌ಕುಮಾರ್, ಎಂ.ಸದಾನಂದ, ಅಮೃತ್‌ಗೌಡ ಜತೆಗೆ ಮುಖಂಡರು ಮಾತುಕತೆ ನಡೆಸಿದರು. ಕಳೆದ ಬಾರಿಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಜವರಾಯಿಗೌಡ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ ಅವರಿಗೆ ಜೆಡಿಎಸ್ ಟಿಕೆಟ್ ಖಚಿತಪಡಿಸಿರುವ ಹಿನ್ನೆಲೆಯಲ್ಲಿ ಹೆಸರು ಕೈಬಿಡಲಾಯಿತು.

ಮಹಾಲಕ್ಷ್ಮಿ ಲೇಔಟ್: ಕಳೆದ ಬಾರಿ ಸೋತಿದ್ದ ಎಚ್.ಎಸ್.ಮಂಜುನಾಥ ಗೌಡ ಅಥವಾ ಬಿಬಿಎಂಪಿ ಸದಸ್ಯ ಎಂ. ಶಿವರಾಜ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.

ಕೆ.ಆರ್.ಪುರ: ನಾರಾಯಣಸ್ವಾಮಿ, ಸಿ.ಎಂ.ಧನಂಜಯ, ಕೇಶವ ರಾಜಣ್ಣ ನಡುವೆ ಟಿಕೆಟ್‌ಗೆ ಪೈಪೋಟಿ ನಡೆದಿದೆ.

ಹೊಸಕೋಟೆ: ಈ ಕ್ಷೇತ್ರಕ್ಕೆ ಮುನಿ ಶಾಮಣ್ಣ, ಪದ್ಮಾವತಿ ಸುರೇಶ್, ನಾರಾಯಣಗೌಡ ಆಕಾಂಕ್ಷಿಗಳಾಗಿದ್ದಾರೆ. ಮೂವರ ಅಭಿಪ್ರಾಯವನ್ನೂ ಮುಖಂಡರು ಪಡೆದುಕೊಂಡರು.

ಚಿಕ್ಕಬಳ್ಳಾಪುರ: ಜಿ.ಎಚ್.ನಾಗರಾಜು, ಎಲುವಳ್ಳಿ ರಮೇಶ್, ಜಗದೀಶ್ ರೆಡ್ಡಿ, ನವೀನ್ ಕಿರಣ್, ಅಂಜಿನಪ್ಪ, ನಾರಾ ಯಣಸ್ವಾಮಿ ಟಿಕೆಟ್ ನೀಡುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿದರು. ಈ ಕ್ಷೇತ್ರದ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದ್ದು, ಮುಖಂಡರು ಚರ್ಚೆ ನಡೆಸಿದ್ದಾರೆ.

ಹಿರೆಕೆರೂರು: ಬನ್ನಿಕೋಡ್, ಎಸ್.ಕೆ. ಕರಿಯಣ್ಣ, ಬಿ.ಎನ್.ಬಣಕಾರ, ಪಿ.ಡಿ.ಬಸವಲಿಂಗಯ್ಯ, ಎ.ಕೆ.ಪಾಟೀಲ, ಡಾ.ಹುಲಿಮನೆ ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯನಗರ: ಸೂರ್ಯನಾರಾಯಣ ರೆಡ್ಡಿ, ಸಂತೋಷ್ ಲಾಡ್, ಇಮಾಮ್ ಸ್ಪರ್ಧೆಗೆ ಅವಕಾಶ ಕೇಳಿದರು.

ಕೆ.ಆರ್.ಪೇಟೆ: ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಥವಾ ಕಿಕ್ಕೇರಿ ಸುರೇಶ್ ಅವರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ರಾಣೆಬೆನ್ನೂರಿನಿಂದ ಕೆ.ಬಿ.ಕೋಳಿ ವಾಡ, ಹುಣಸೂರಿನಿಂದ ಎಚ್.ಪಿ.ಮಂಜುನಾಥ್ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.

ಚುನಾವಣೆ ಸಮಿತಿ ಸಭೆ ಇಂದು

ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಮೊದಲ ಸುತ್ತಿನ ಸಭೆ ಬುಧವಾರ ರಾತ್ರಿ ನಡೆಯಿತು. ಗುರುವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಪಟ್ಟಿ ಅಂತಿಮಗೊಳಿಸಲಾಗುತ್ತದೆ. ನಂತರ ಹೈಕಮಾಂಡ್‌ಗೆ ಸಲ್ಲಿಸಿ, ಒಪ್ಪಿಗೆ ಪಡೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.