ರಾಮನಗರ: ಶಾಸಕರಾದ ಆನಂದ ಸಿಂಗ್ ಮತ್ತು ಜೆ.ಎನ್.ಗಣೇಶ್ ನಡುವಿನ ಮಾರಾಮಾರಿಯ ವಿಡಿಯೊ ತುಣುಕೊಂದು ಶನಿವಾರ ಬಹಿರಂಗ ಗೊಂಡಿದ್ದು, ಸಾಮಾಜಿಕ ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐದು ಸೆಕೆಂಡ್ಗಳ ವಿಡಿಯೊ ಇದಾಗಿದ್ದು, ಆನಂದ ಸಿಂಗ್ ಅವರು ಗಣೇಶ್ ಕತ್ತಿನ ಪಟ್ಟಿ ಹಿಡಿದು 'ಏನ್ ಹೊಡೆಯುತ್ತಿಯೇನೋ, ಅವಳಿಗೋಸ್ಕರ?' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಗಣೇಶ್ 'ಇದು ತಪ್ಪು' ಎನ್ನುತ್ತಾರೆ. ವಿಡಿಯೊ ಮಾಡುತ್ತಿರುವ ವ್ಯಕ್ತಿ ' ಏ ಬಿಡಣ್ಣ' ಎಂದಷ್ಟೇ ಹೇಳುತ್ತಾರೆ. ಇಷ್ಟಕ್ಕೆ ವೀಡಿಯೊ ಕೊನೆಗೊಳ್ಳುತ್ತದೆ.

ಬಿಡದಿಯ ಈಗಲ್ ಟನ್ ರೆಸಾರ್ಟ್ನಲ್ಲಿ ಜನವರಿ 19ರ ತಡರಾತ್ರಿ ಈ ಇಬ್ಬರು ಶಾಸಕರ ನಡುವೆ ಗಲಾಟೆ ನಡೆದಿತ್ತು. ಘಟನೆಯಲ್ಲಿ ಆನಂದ್ ಸಿಂಗ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ಈ ವಿಷಯವಾಗಿ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಗಣೇಶ್ರನ್ನು ಪೊಲೀಸರು ಫೆ.20ರಂದು ಗುಜರಾತಿನಲ್ಲಿ ಬಂಧಿಸಿದ್ದರು. ಆರೋಪಿಯನ್ನು ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಗಣೇಶ್ರನ್ನು ಮಾ.6 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.