ಬೆಂಗಳೂರು: ಬೆಂಗಳೂರು ನಗರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿ, ಭಾರಿ ಮೊತ್ತದ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಬಿಜೆಪಿ ಅಭ್ಯರ್ಥಿ ಎದುರು ಸೋಲುಂಡಿದ್ದಾರೆ.

ಇದನ್ನೂ ಓದಿ:ಪತ್ನಿಯರ ಜತೆ ಸುದ್ದಿಗೋಷ್ಠಿ ನಡೆಸಿ ಕಣ್ಣೀರಿಟ್ಟ ಕೆಜಿಎಫ್ ಬಾಬು: ಕಾರಣ ಏನು?

ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ 1227 ಮತ ಪಡೆದರೆ, ಕೆಜಿಎಫ್ ಬಾಬು 830 ಮತಗಳನ್ನು ಪಡೆದರು. ಈ ಕ್ಷೇತ್ರದಲ್ಲಿ 2057 ಮತಗಳು ಚಲಾವಣೆಗೊಂಡಿದ್ದವು. 13 ಮತಗಳು ತಿರಸ್ಕೃತಗೊಂಡಿದ್ದವು.

ಮತ ಎಣಿಕೆ ನಡೆಯುತ್ತಿರುವಾಗಲೇ ಸೋಲಿನ ಸುಳಿವು ಹಿಡಿದ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಎಣಿಕೆ ಕೇಂದ್ರದಿಂದ ತರಾತುರಿಯಲ್ಲಿ ಹೊರಗೆ ಬಂದು, ಬಂದಷ್ಟೇ ವೇಗದಲ್ಲಿ ಆಟೊ ಹತ್ತಿ ಹೊರಟರು. ಈ ವಿಡಿಯೊ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕೆಜೆಎಫ್ ಬಾಬು ಅವರು ತಮ್ಮ ಐಷಾರಮಿ ಕಾರು ರೋಲ್ಸ್ ರಾಯ್ಸ್ ಮತ್ತು ಭಾರಿ ಮೊತ್ತದ ಆಸ್ತಿಯ ಮೂಲಕವೇ ಪ್ರಚಾರ ಗಳಿಸಿದ್ದವರು. ಆದರೆ, ಹೀಗೆ ಗಡಿಬಿಡಿಯಲ್ಲಿ ಆಟೊ ಹತ್ತಿ ಹೊರಟಿದ್ದು ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿತು.

5ನೇ ತರಗತಿ ಓದಿರುವ ಯೂಸುಫ್ ಷರೀಫ್ ಅವರು ಚುನಾವಣಾ ಅಫಿಡವಿಟ್ನಲ್ಲಿ₹1743 ಕೋಟಿಆಸ್ತಿಘೋಷಿಸಿಕೊಂಡಿದ್ದರು.ತಾವು ಪ್ರತಿನಿಧಿಸುವ ಬೆಂಗಳೂರು ನಗರ ಕ್ಷೇತ್ರಕ್ಕೆ ₹500 ಕೋಟಿ ನೀಡುವುದಾಗಿ ಬಾಬು ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.