ಬೆಂಗಳೂರು: ಚನ್ನಪಟ್ಟಣದಲ್ಲಿ ನಿರೀಕ್ಷಿತ ಗೆಲುವು ದೊರೆತಿದೆ. ಹಳೆ ಮೈಸೂರು ಭಾಗದ ಜನರು ಡಿ.ಕೆ. ಶಿವಕುಮಾರ್ ನಾಯಕತ್ವ ಒಪ್ಪಿಕೊಂಡಿದ್ದಾರೆ. ಒಕ್ಕಲಿಗರ ನಾಯಕತ್ವವನ್ನು ದೇವೇಗೌಡರ ಕುಟುಂಬದಿಂದ ಕಿತ್ತುಕೊಂಡಿದ್ದಾರೆ ಎಂದು ವಿಜೇತ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ತಿಳಿಸಿದರು.

ಗೆಲುವಿನ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಧ್ಯಾ
ಕಾಲದಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದ ದೇವೇಗೌಡರು ಮೊಮ್ಮಗನನ್ನು ಗೆಲ್ಲಿ
ಸುವ ಪಣತೊಟ್ಟಿದ್ದರು. ಅವರ ಹೋರಾಟ
ದಲ್ಲಿ ಸಾಮಾಜಿಕ ಕಾಳಜಿ ಇರಲಿಲ್ಲ. ಸ್ವಾರ್ಥವಿತ್ತು. ವಂಶಪಾರಂಪರ್ಯ ಆಡಳಿತ ಮುಂದುವರಿಸುವ ಕೌಟುಂಬಿಕ ಉದ್ದೇಶವಷ್ಟೇ ಕಾಣುತ್ತಿತ್ತು. ಹಾಗಾಗಿ, ಜನರು ತಿರಸ್ಕಾರ ಮಾಡಿದ್ದಾರೆ. ಈಗಲಾ
ದರೂ ರಾಜಕೀಯ ನಿವೃತ್ತಿ ಪಡೆದು, ವಿಶ್ರಾಂತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ, ಕುಮಾರಸ್ವಾಮಿ ಅವರದು ಒಂದೇ ಕಾರ್ಯಸೂಚಿ. ತಮ್ಮ ಮಕ್ಕಳ ಬೆಳವಣಿಗೆಗೆ ಬಿಜೆಪಿ–ಜೆಡಿಎಸ್ ಪಕ್ಷಗಳನ್ನೇ ಬಳಸಿಕೊಳ್ಳು
ತ್ತಿದ್ದಾರೆ. ಜೆಡಿಎಸ್ ಅಸ್ತಿತ್ವಕ್ಕಾಗಿ ಕುಮಾರ
ಸ್ವಾಮಿ, ದೇವೇಗೌಡರು ಮಗ–ಮೊಮ್ಮಗ
ನನ್ನೇ ಪಣಕ್ಕೆ ಇಟ್ಟಿದ್ದರು. ಜೆಡಿಎಸ್ ಈಗ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದೆ ಎಂದರು.

‘ವಿಜಯೇಂದ್ರ, ಯಡಿಯೂರಪ್ಪ ಬೀದಿಗೆ ಬಂದಾಗ ಮರು ಶಕ್ತಿ ತುಂಬಿದ್ದೆವು. ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿಯ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಿದ್ದೆವು. ಈಗ ಅದೇ ಮತಗಳು ಕಾಂಗ್ರೆಸ್ ಪಾಲಾಗಿವೆ. ಅಂದು ಸೋತಿದ್ದ ಅಭ್ಯರ್ಥಿ ಡಿ.ಕೆ. ಸುರೇಶ್ ಜತೆ ನಿಂತು ಈಗ ಚುನಾವಣೆ ಎದುರಿಸಿದೆ. 30 ಸಾವಿರ ಅಂತರದಿಂದ ಗೆಲ್ಲುವುದಾಗಿ ಮತದಾನದ ದಿನವೇ ಹೇಳಿದ್ದೆ’ ಎಂದರು.

ದ್ವೇಷಪೂರಿತ ಭಾಷಣಗಳಿಗೆ ತಕ್ಕ ಉತ್ತರ; ರಮೇಶ್ ಬಾಬು

ಬೆಂಗಳೂರು: ‘ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ದ್ವೇಷಪೂರಿತ ಭಾಷಣಗಳನ್ನು ತಿರಸ್ಕರಿಸಿ ಸುಳ್ಳು ಪ್ರಚಾರಗಳಿಗೆ ಒಳಗಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಾಯಕತ್ವಕ್ಕೆ ಮತದಾರರು ಮನ್ನಣೆ ನೀಡಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ. ಉಪ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಅವರು ರಾಜ್ಯ ಬಿಜೆಪಿಯಲ್ಲಿ ಗುಂಪುಗಾರಿಕೆ ಮಿತಿಮೀರಿದ್ದು ಉಪ ಚುನಾವಣೆಯ ಫಲಿತಾಂಶ ಬಂಡಾಯ ನಾಯಕರಿಗೆ ಮತ್ತಷ್ಟು ಶಕ್ತಿ ನೀಡಿದೆ. ದೆಹಲಿ ದಂಡಯಾತ್ರೆಯ ಮೂಲಕ ಕುರ್ಚಿ ಉಳಿಸಿಕೊಳ್ಳುವ ವಿಜಯೇಂದ್ರ ಅವರ ಪ್ರಯತ್ನ ವಿಫಲವಾಗಿದ್ದು ಬೆಳಗಾವಿ ಅಧಿವೇಶನಕ್ಕೆ ಮೊದಲೇ ಅವರು ರಾಜೀನಾಮೆ ನೀಡುವ ಅನಿವಾರ್ಯ ಉಂಟಾಗಿದೆ’ ಎಂದಿದ್ದಾರೆ. ‘ಈ ಫಲಿತಾಂಶ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಮ್ಮ ಸ್ಥಾನ ತ್ಯಜಿಸಲು ಮುನ್ನುಡಿ ಬರೆದಿದೆ. ಚುನಾವಣೆಯಲ್ಲಿ ರಾಜ್ಯದ ಅಭಿವೃದ್ಧಿ ಅಥವಾ ಕ್ಷೇತ್ರದ ಅಭಿವೃದ್ಧಿ ವಿಷಯಗಳನ್ನು ಮುನ್ನೆಲೆಗೆ ತರುವ ಬದಲು ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಎಳಸುತನದೊಂದಿಗೆ ಉಪ ಚುನಾವಣೆ ನಡೆಸಿದ ಬಿಜೆಪಿ– ಜೆಡಿಎಸ್ ನಾಯಕರಿಗೆ ಮತದಾರರು ತಮ್ಮ ತೀರ್ಪಿನ ಮೂಲಕ ಮತ್ತೊಮ್ಮೆ ಸರಿಯಾದ ಸಂದೇಶ ನೀಡಿದ್ದಾರೆ’ ಎಂದೂ ಅವರು ಹೇಳಿದ್ದಾರೆ. ‘ತನ್ನ ಆಡಳಿತ ಅವಧಿಯಲ್ಲಿ ಅನೇಕ ಹಗರಣಗಳಿಗೆ ಒಳಗಾಗಿರುವ ಬಿಜೆಪಿ ನ್ಯಾಯಾಂಗ ತನಿಖೆಯನ್ನು ಒಪ್ಪಿಕೊಂಡು ಆರೋಪಿತರ ಮೇಲೆ ಕ್ರಮ ಕೈಗೊಳ್ಳಲಿ. ಧಾರ್ಮಿಕ ವಿಷಯದ ಮೇಲೆ ಜನರ ದಾರಿ ತಪ್ಪಿಸುವ ಬದಲು ಸರ್ಕಾರದ ಪ್ರಗತಿಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಅಭಿವೃದ್ಧಿಯ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ನೀಡಲಿ’ ಎಂದೂ ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.