ಪಾವಗಡ: ಫ್ಲುರೊಸಿಸ್ ಪರಿಣಾಮ ಮೊಳೆ ಸವೆತದಿಂದನರಕಯಾತನೆ ಅನುಭವಿಸುತ್ತಿರುವ ಗೀತಾಂಜಲಿಗೆ ಇಲ್ಲಿನ ತಾಲ್ಲೂಕು ವೈದ್ಯಾಧಿಕಾರಿಗಳು ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ.

ಡಿಸೆಂಬರ್ 4 ರಂದುಪ್ರಜಾವಾಣಿ ’ಫ್ಲೊರೊಸಿಸ್ ಕಾಟಕ್ಕೆ ಹೈರಾಣಾದ ಪಾವಗಡದ ಜನ’ ಎಂಬ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ಮೂರ್ತಿ ಕರಿಯಮ್ಮನಪಾಳ್ಯಕ್ಕೆ ಭೇಟಿ ನೀಡಿ ಗೀತಾಂಜಲಿ ಅವರ ಆರೋಗ್ಯವನ್ನು ಪರೀಕ್ಷಿಸಿದ್ದಾರೆ.

ಫ್ಲುರೊಸಿಸ್ನಿಂದಾಗಿ 35 ವರ್ಷದ ಗೀತಾಂಜಲಿಯ ಎರಡೂ ಕಾಲಿನ ಮೂಳೆಗಳು ತಿರುಚಿಕೊಂಡಿದ್ದು ಅಲ್ಲಲ್ಲಿ ಬಿರುಕುಬಿಟ್ಟಿವೆ. ಸೊಂಟದಿಂದ ಕೆಳಗಿನ ಭಾಗಸ್ವಾಧೀನವಿಲ್ಲ.ಮೂಳೆ ಸವೆತ (ಸ್ಕೆಲಿಟಲ್ ಫ್ಲೂರೊಸಿಸ್ -ಎಸ್ಎಫ್)ದಿಂದಬಳಲುತ್ತಿರುವ ಅವರಿಗೆ ಮೂರು ತಿಂಗಳು ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಡಾ.ವೆಂಕಟೇಶ್ಮೂರ್ತಿ ತಿಳಿಸಿದ್ದಾರೆ.

ಗೀತಾಂಜಲಿ ಅವರನ್ನು ಮಧುಗಿರಿ ಆಸ್ಪತ್ರೆಗೆ ಕರೆದೊಯ್ದುಎಕ್ಸ್ ರೇ ತಪಾಸಣೆ ಹಾಗೂಮೂತ್ರ ಪರೀಕ್ಷೆ ಮಾಡಿಸಲಾಗುವುದು. ಅವರ ದೇಹದಲ್ಲಿಫ್ಲುರೊಸಿಸ್ ಅಂಶ ಪತ್ತೆಯಾದರೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಹಲವಾರು ವರ್ಷಗಳಿಂದ ಫ್ಲುರೊಸಿಸ್ಯುಕ್ತ ನೀರುಕುಡಿಯುತ್ತಿರುವುದರಿದ ಅವರ ದೇಹದಲ್ಲಿ ಪ್ಲುರೈಡ್ ಅಂಶ ಪತ್ತೆಯಾಗಬಹುದು.ಈಗಾಗಲೇ ಗೀತಾಂಜಲಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಾತ್ರೆಗಳು,ಪೊಷಕಾಂಶಗಳ ಪೌಡರ್ ಹಾಗೂ ವಿಟಮಿನ್ ಟಾನಿಕ್ ನೀಡಲಾಗಿದೆ. ನಿಯಮಿತವಾಗಿ ಗೀತಾಂಜಲಿಗೆ ಚಿಕಿತ್ಸೆ ಕೊಡಿಸಲಾಗುವುದು ಎಂದು ಡಾ.ವೆಂಕಟೇಶ್ಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ:ಫ್ಲೊರೊಸಿಸ್ ಕಾಟಕ್ಕೆ ಹೈರಾಣಾದ ಪಾವಗಡದ ಜನ

ಪಾವಗಡಕ್ಕೆ ಶಾಶ್ವತವಾಗಿ ಒಬ್ಬರು ಮೂಳೆ ತಜ್ಞರನ್ನು ನಿಯೋಜನೆ ಮಾಡಲು ಜಿಲ್ಲಾ ಆಡಳಿತ ಒಪ್ಪಿದೆ ಎಂದುಡಾ.ವೆಂಕಟೇಶ್ಮೂರ್ತಿ ಮಾಹಿತಿ ನೀಡಿದರು. ಇದೇ ವೇಳೆ ವೈದ್ಯರ ಜತೆ ಆಗಮಿಸಿದ್ದ ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಘಟಕಗಳನ್ನು (ರಿವರ್ಸ್ ಒಸ್ಮಾಸಿಸ್ ಪ್ಲಾಂಟ್- ಆರ್ಒ) ತಪಾಸಣೆ ಮಾಡಿದರು. ಹಾಗೇ ನೀರಿನ ಮಾದರಿ ಸಂಗ್ರಹಿಸಿದ ಅವರು ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಉಚಿತವಾಗಿ ನೀರನ್ನು ಪೂರೈಕೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಪ್ರಸ್ತುತ ಜನರು ಒಂದು ಬಿಂದಿಗೆಗೆ 2 ರೂಪಾಯಿ ನೀಡಿ ಕುಡಿಯುವ ನೀರು ಪಡೆಯುತ್ತಿದ್ದಾರೆ.

ಪ್ರಜಾವಾಣಿ ವರದಿ ನಮ್ಮ ಕಣ್ಣುತೆರೆಸಿದೆ, ಜಿಲ್ಲಾ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ದೀರ್ಘವಾಗಿ ಚರ್ಚೆ ನಡೆದಿದೆ. ಸಾಕಷ್ಟು ಜನರಿಗೆ ಶುದ್ಧ ಕುಡಿಯುವ ನೀರು ಘಟಕಗಳಿಂದ (ಆರ್ಒ)ನೀರು ಲಭ್ಯವಾಗುತ್ತಿಲ್ಲ ಎಂಬುದು ತಿಳಿದುಬಂದಿದೆ.ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಉಚಿತವಾಗಿಶುಧ್ಧ ಕುಡಿಯುವ ನೀರುಪೂರೈಕೆ ಮಾಡಲು ಒಪ್ಪಿಕೊಂಡಿದ್ದಾರೆ. ಆರ್ಒ ಘಟಕಗಳ ಕಾರ್ಯನಿರ್ವಹಣೆಯನ್ನು ಪರೀಕ್ಷಿಸುವಂತೆ ಹಾಗೂ ಕೆಟ್ಟು ಹೋಗಿರುವ ಘಟಕಗಳನ್ನು ದುರಸ್ತಿ ಮಾಡುವಂತೆ ಗ್ರಾಮೀಣಾ ನೀರು ಪೂರೈಕೆ ಅಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ಡಾ.ವೆಂಕಟೇಶ್ಮೂರ್ತಿ ತಿಳಿಸಿದ್ದಾರೆ.

ಆರೋಗ್ಯ ಇಲಾಖೆತಾಲ್ಲೂಕಿನಾದ್ಯಂತ ಶಿಕ್ಷಣ, ಮಾಹಿತಿ, ಸಂವಹನ (ಐಎಫ್ಸಿ) ಚಟುವಟಿಕೆ ಮೂಲಕ ಶುದ್ಧ ಕುಡಿಯುವ ನೀರಿನ ಬಗ್ಗೆ ಜಾಗೃತಿ ಮೂಡಿಸಲಿದೆ. ಪಾವಗಡದ ಬಹುತೇಕ ಶಾಲಾ ಮಕ್ಕಳು ಬೋರ್ವೇಲ್ ನೀರು ಕುಡಿಯುವುದರಿಂದ ದಂತಕ್ಷಯಕ್ಕೆ ತುತ್ತಾಗಿದ್ದಾರೆ. ಈ ಕುರಿತಂತೆಎಲ್ಲಾ ಶಾಲೆಗಳಿಗೂ ಸುತ್ತೋಲೆ ಹೊರಡಿಸಲಾಗುವುದು. ಹಾಗೇ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸೂಚಿಸಲಾಗುವುದು ಎಂದು ಡಾ.ವೆಂಕಟೇಶ್ಮೂರ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.