ಬೆಂಗಳೂರು: ದ್ವಿತೀಯ ಪಿಯುಮೌಲ್ಯಮಾಪನ ಕಾರ್ಯ ಕೊನೆಗೊಂಡು ಎರಡು ತಿಂಗಳಾಗಿದ್ದು, ಫಲಿತಾಂಶ ಬಂದು ಒಂದೂವರೆ ತಿಂಗಳಾಗಿದೆ. ಆದರೆ ಉಪನ್ಯಾಸಕರಿಗೆ ಮಾತ್ರ ಮೌಲ್ಯಮಾಪನದ ಗೌರವಧನ ಸಂದಾಯವಾಗಿಲ್ಲ.

ಎರಡು ವರ್ಷಗಳ ಹಿಂದಿನವರೆಗೂ ಮೌಲ್ಯಮಾಪನ ಕೇಂದ್ರಗಳಲ್ಲೇ ಗೌರವಧನದ ಚೆಕ್ ನೀಡಲಾಗುತ್ತಿತ್ತು. ಆದರೆ ಇದೀಗ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ಪಡೆಯುತ್ತಿದ್ದಾರೆಯೇ ಹೊರತು ಗೌರವಧನವನ್ನು ಆಮೇಲೆ ಕಳುಹಿಸಲಾಗುತ್ತದೆ ಎಂದು ತಿಳಿಸಲಾಗುತ್ತಿದೆ. ಎರಡು ತಿಂಗಳಾದರೂ ಗೌರವಧನ ಸಿಗದೆ ಇರುವುದರಿಂದ ಉಪನ್ಯಾಸಕರು ಬೇಸರಗೊಂಡಿದ್ದಾರೆ.

‘ಪದವಿಪೂರ್ವ ಶಿಕ್ಷಣ ಇಲಾಖೆಗೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಅವರು ಏನೇನೋ ಕಾರಣ ನೀಡುತ್ತ ಗೌರವಧನ ನೀಡುವುದನ್ನು ಮುಂದೂಡುತ್ತಿದ್ದಾರೆ. ಒಂದು ವಾರದೊಳಗೆ ಎಲ್ಲ ಗೌರವಧನ ಪಾವತಿಸದಿದ್ದರೆ ಉಗ್ರ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಪಿ.ಕರಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.