ಚಿಕ್ಕಮಗಳೂರು: ‘ಇವತ್ತಿನ ಬೆಳವಣಿಗೆ ಏನು, ಮಂಗಳೂರು ಕಮಿಷನರ್ ಹರ್ಷ ಅವರು ಇವತ್ತೇನಾದರೂ ಬಾಂಬ್ ಹಾಕಿಸಿದ್ರಾ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನಗುತ್ತಲೇ ಪ್ರಶ್ನಿಸಿದರು.

ಜಿಲ್ಲೆಯ ಶೃಂಗೇರಿಗೆ ಚಂಡಿಕಾಯಾಗ ಕೈಂಕರ್ಯಕ್ಕೆ ಬಂದಿದ್ದ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಧಿಕಾರಿಗಳು ಎಲ್ಲವನ್ನೂ ಸೂಕ್ಷ್ಮವಾಗಿ ಪರಿಗಣಿಸಬೇಕು. ಯಾರ ಮುಲಾಜಿಗೊಳಗಾಗದಂತೆ ಕರ್ತವ್ಯ ನಿರ್ವಹಿಸಬೇಕು’ ಎಂದರು.

‘ಮಂಗಳೂರಲ್ಲಿ ಸಂಶಯಕ್ಕೆ ಎಡೆಮಾಡಿಕೊಡುವ ವಾತಾವರಣ ನಿರ್ಮಿಸಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಣುಕು ಪ್ರದರ್ಶನ ಮಾಡುತ್ತಾರೆ. ನಿನ್ನೆಯ ಬಾಂಬ್ ಪ್ರಕರಣ ಅಣಕು ಪ್ರದರ್ಶನದಂತೆ ಇತ್ತು ಎಂಬುದು ನನ್ನ ಭಾವನೆ’ ಎಂದು ಉತ್ತರಿಸಿದರು.

‘14 ತಿಂಗಳು ಮೈತ್ರಿ ಸರ್ಕಾರ ಇದ್ದಾಗ ಈ ರೀತಿಯ ಪ್ರಕರಣಗಳು ಆಗಿರಲಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಎಲ್ಲರೂ ಸೌಹಾರ್ದಯುತವಾಗಿ ಬಾಳುವ ವಾತಾವರಣ ನಿರ್ಮಾಣ ಮಾಡಬೇಕಿರುವುದು ಸರ್ಕಾರದ ಕರ್ತವ್ಯ’ ಎಂದು ಪ್ರತಿಕ್ರಿಯಿಸಿದರು.

‘ನಿರ್ಜನ ಪ್ರದೇಶಕ್ಕೆ ಬಾಂಬ್ ಒಯ್ದು ಸ್ಫೋಟಿಸಿರುವ ಪ್ರಕರಣಗಳು ಕಡಿಮೆ. ಮಾಧ್ಯಮಗಳಲ್ಲಿ ನಿನ್ನೆ ಸ್ಫೋಟ ಚಿತ್ರಣ ನೋಡಿದಾಗ ಬರಿ ಹೊಗೆ ಕಾಣಿಸುತ್ತಿತ್ತು. ಜನರನ್ನು ಭಯಭೀತರಾಗಿಸಬಾರದು. ಕರಾವಳಿಯ ಆರ್ಥಿಕ ಬೆಳವಣಿಗೆ ಕುಂಠಿತಗೊಳಿಸಬಾರದು. ಜನರ ಜತೆ ಹುಡುಗಾಟ ಆಡಬಾರದು. ಸತ್ಯಾಂಶವನ್ನು ತಿಳಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.