ಬೆಂಗಳೂರು: ‘ಚುನಾವಣೆಗೆ ನಾಮಪತ್ರ ಸಲ್ಲಿಸುವ ಹತ್ತು ದಿನಗಳ ಮೊದಲಿನ ತನಕ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಲು ಅವಕಾಶವಿದೆ’ ಎಂದು ರಾಜ್ಯದ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯಬೇಕಿರುವ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು 2023ರ ನವೆಂಬರ್ 6ನೇ ತಾರೀಖು ಅಂತಿಮ ಎಂದು ಮಾಧ್ಯಮಗಳಲ್ಲಿ ನೀಡಲಾಗಿದ್ದ ಸಾರ್ವಜನಿಕ ತಿಳಿವಳಿಕೆಗೆ ಸ್ಪಷ್ಟನೆ ಕೋರಿ ಹೈಕೋರ್ಟ್ ವಕೀಲ ಎಚ್. ಸುನಿಲ್ ಕುಮಾರ್ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಉತ್ತರಿಸಿರುವ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ಎಸ್.ಯೋಗೇಶ್ವರ, ‘ಜನಪ್ರತಿನಿಧಿ ಕಾಯ್ದೆ–1950ರ ಕಲಂ 22 ಮತ್ತು 23ರ ನಿಬಂಧನೆಗಳ ಅನುಸಾರ, ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ನಿರಂತರ ನವೀಕರಿಸಬೇಕಾಗುತ್ತದೆ. ಪಟ್ಟಿಯ ನವೀಕರಣದ ಉದ್ದೇಶಕ್ಕಾಗಿ ಅರ್ಹ ಮತದಾರರ ನೋಂದಣಿ ಸದಾ ಮುಂದುವರಿಯುವ ಪ್ರಕ್ರಿಯೆಯಾಗಿರುತ್ತದೆ’ ಎಂಬ ಅಂಶವನ್ನು ಮನದಟ್ಟು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.