ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಕೇಂದ್ರ ಸರ್ಕಾರವು ಸಹಕಾರ ಸಂಘಗಳಿಗೆ ನಬಾರ್ಡ್ ಮೂಲಕ ನೀಡುತ್ತಿದ್ದ ಅನುದಾನ, ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತಿದ್ದ ಸಾಲವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಲಾಗಿದೆ. ಹೀಗಾಗಿ ರೈತರಿಗೆ ನೀಡಲಾಗಿರುವ ಬೆಳೆ ಮತ್ತು ಕೃಷಿ ಸಾಲದ ಮೊತ್ತ ಕುಸಿದಿದೆ. ಇದೇ ಸ್ಥಿತಿ ಮುಂದುವರೆದರೆ, ಸಹಕಾರ ಕ್ಷೇತ್ರಕ್ಕೆ ಕೇಂದ್ರ ಅಸಹಕಾರ ನೀಡುತ್ತಿದೆ ಎನ್ನಬೇಕಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಬಾರ್ಡ್ ಈ ಮೊದಲು ಸಹಕಾರ ಸಂಘಗಳಿಗೆ ಶೇ 1ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿತ್ತು. ಆದರೆ ಈಗ ಬಡ್ಡಿದರವನ್ನು ಶೇ 4.5ಕ್ಕೆ ಏರಿಕೆ ಮಾಡಿದೆ. ಅದರಲ್ಲೂ ಈ ದರದಲ್ಲಿ ನೀಡುತ್ತಿರುವ ಸಾಲದ ಪ್ರಮಾಣ ಅತ್ಯಂತ ಕಡಿಮೆ. ಇನ್ನೂ ಹೆಚ್ಚು ಸಾಲ ಕೇಳಿದರೆ, ಶೇ 8.5ರ ಬಡ್ಡಿ ದರದಲ್ಲಿ ನೀಡುತ್ತೇವೆ ಎನ್ನುತ್ತದೆ. ಹೀಗಾಗಿಯೇ ಹೆಚ್ಚಿನ ರೈತರಿಗೆ ಸಾಲ ನೀಡಲಾಗುತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಬಾರ್ಡ್ ಆರಂಭವಾದ ಸಂದರ್ಭದಲ್ಲಿ ಸಹಕಾರ ಸಂಘಗಳು ರೈತರಿಗೆ ಶೇ10 ರಷ್ಟು ಸಾಲ ನೀಡಿದರೆ, ನಬಾರ್ಡ್ ಶೇ 90ರಷ್ಟು ನೀಡುತ್ತಿತ್ತು. ಈಚಿನ ವರ್ಷಗಳಲ್ಲಿ ಇದನ್ನು ಇಳಿಕೆ ಮಾಡುತ್ತಾ ಬರಲಾಗಿದೆ. ಈಗ ನಬಾರ್ಡ್ನ ಪಾಲು ಶೇ 20ರಷ್ಟಕ್ಕೆ ಕುಸಿದಿದೆ. ಸಹಕಾರ ಸಂಘಗಳು ರೈತರಿಗೆ ಕಡಿಮೆ ಬಡ್ಡಿದರದಲ್ಲೇ ಸಾಲ ನೀಡಬೇಕಿರುವುದರಿಂದ ಅವು ನಷ್ಟಕ್ಕೆ ಸಿಲುಕುತ್ತಿವೆ’ ಎಂದು ಉತ್ತರಿಸಿದರು.

‘ಈ ಪರಿಸ್ಥಿತಿ ಬದಲಾಗಬೇಕು ಅಂದರೆ ಕೇಂದ್ರ ಸರ್ಕಾರವು ಹೆಚ್ಚಿನ ಅನುದಾನವನ್ನು ನೀಡಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರನ್ನು ಕೋರುತ್ತೇನೆ. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರೂ ಶ್ರಮಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ’ ಎಂದರು.

'ಹೆಸರಿಲ್ಲದ ಮೇಲೆ ಪ್ರಚಾರಕ್ಕೆ ಹೋಗಬಹುದೇ’

‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಪರವಾಗಿ ಸಿದ್ದಪಡಿಸಲಾದ ತಾರಾ ಪ್ರಚಾರಕರ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಹೀಗಾಗಿ ನಾನು ಪ್ರಚಾರಕ್ಕೆ ಹೋಗಿಲ್ಲ’ ಎಂದು ಜಿ.ಟಿ.ದೇವೇಗೌಡ ಹೇಳಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘40 ಜನರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಪಕ್ಷದ ಕೋರ್ ಕಮಿಟಿ ಅಧ್ಯಕ್ಷನಾದ ನನ್ನ ಹೆಸರೇ ಅದರಲ್ಲಿ ಇರಲಿಲ್ಲ. ಹೆಸರು ಇಲ್ಲದ ಮೇಲೆ ಪ್ರಚಾರಕ್ಕೆ ಹೋಗಬಹುದೇ? ಹೆಸರು ಇದ್ದಿದ್ದರೆ ಖಂಡಿತಾ ಪ್ರಚಾರಕ್ಕೆ ಹೋಗುತ್ತಿದ್ದೆ’ ಎಂದರು.

14ರಿಂದ ಸಹಕಾರ ಸಪ್ತಾಹ

‘ಅಖಿಲ ಭಾರತ ಸಹಕಾರ ಸಪ್ತಾಹವನ್ನು ರಾಜ್ಯದಲ್ಲಿ ಇದೇ 14ರಿಂದ 20ರವೆಗೆ ಆಯೋಜಿಸಲಾಗಿದೆ. ರಾಜ್ಯದ ಆಯ್ದ ಏಳು ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮ ಮತ್ತು ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜಿ.ಟಿ.ದೇವೇಗೌಡ ಮಾಹಿತಿ ನೀಡಿದರು. ‘ಸಹಕಾರ ಕ್ಷೇತ್ರಕ್ಕೆ ಜವಾಹರ ಲಾಲ್ ನೆಹರೂ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಜನ್ಮದಿನದಂದೇ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡುವುದನ್ನು ರೂಢಿಸಿಕೊಳ್ಳಲಾಗಿದೆ’ ಎಂದರು. ‘ಬೆಂಗಳೂರು ಚಿತ್ರದುರ್ಗ ಮಂಗಳೂರು ಬಾಗಲಕೋಟೆ ಬೀದರ್ ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನ.17ರಂದು ಬಾಗಲಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.