ಬೆಂಗಳೂರು: ಹಾವೇರಿ ಜಿಲ್ಲೆಗೆ ಅಗತ್ಯವಿರುವ ಡಿಎಪಿ, ಯೂರಿಯಾ ಹಾಗೂ ಕಾಂಪ್ಲೆಕ್ಸ್ ಗೊಬ್ಬರವನ್ನು ಕೂಡಲೇ ಸರಬರಾಜು ಮಾಡುವಂತೆ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಅವರು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ಆಗ್ರಹಿಸಿದ್ದಾರೆ.

ಈ ಕುರಿತು ಸಚಿವರಿಗೆ ಪತ್ರ ಬರೆದಿರುವ ಬೊಮ್ಮಾಯಿ, ‘ಕಳೆದ ಒಂದು ವರ್ಷದಿಂದ ನಮ್ಮ ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಹಿಂದಿನ ವರ್ಷ ಬಿತ್ತನೆ ಬೀಜ, ಗೊಬ್ಬರ ಹಾಗೂ ಇತರೆ ಕೃಷಿ ಚಟುವಟಿಕೆಗಳಿಗೆ ವೆಚ್ಚ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲದ ಹೊರೆ ಹೆಚ್ಚಾಗುತ್ತಿರುವುದರಿಂದ ಕೆಲವರಂತೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಮ್ಮ ಸರ್ಕಾರ, ರೈತರಿಗೆ ಕೊಟ್ಟಿರುವ ಪರಿಹಾರ ಅತ್ಯಲ್ಪ. ಕೊಡುವುದರಲ್ಲೂ ವಿಳಂಬವಾಗಿದೆ’ ಎಂದು ವಿವರಿಸಿದ್ದಾರೆ.

ಮೇಲೆ ಕಾಣಿಸಿದ ಎಲ್ಲ ಕಾರಣಗಳು ಮತ್ತು ಇತ್ತೀಚೆಗೆ ಬೀಳುತ್ತಿರುವ ಮುಂಗಾರು ಮಳೆಯಿಂದ ರೈತರು ಉತ್ಸುಕರಾಗಿ ಬಿತ್ತನೆ ಮಾಡಲು ಸಿದ್ದರಾಗಿದ್ದಾರೆ. ಆದರೆ ಗೊಬ್ಬರ ದಾಸ್ತಾನು ಇಲ್ಲವಾಗಿದೆ. ಹಾವೇರಿ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರ ಸುಮಾರು 35,000 ಟನ್ ಮುಂಗಾರು ಹಂಗಾಮಿಗೆ ಬೇಕಾಗುತ್ತದೆ. ಇಲ್ಲಿಯವರೆಗೂ ಸುಮಾರು 6,500 ಟನ್ ಮಾತ್ರ ಸರಬರಾಜು ಆಗಿದೆ. ಬಾಕಿಯಿರುವ 29,000 ಟನ್ ಗೊಬ್ಬರವನ್ನು ಹಾವೇರಿ ಜಿಲ್ಲೆಗೆ ಪೂರೈಸಬೇಕಿ. ಹಾಗೆಯೇ, ಯೂರಿಯಾ 65,000 ಟನ್ ಮತ್ತು ಕಾಂಪ್ಲೆಕ್ಸ್ 38,000 ಟನ್‌ನಷ್ಟು ಅಗತ್ಯವಿದ್ದು, ಅದನ್ನೂ ಕೂಡಲೇ ಸರಬರಾಜು ಮಾಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.