ಮಂಡ್ಯ: ‘ರೈತರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯತೆ ಇಲ್ಲ, ಮಾಜಿ ಸಚಿವ ಪುಟ್ಟರಾಜು ಸ್ವಕ್ಷೇತ್ರದಲ್ಲಿ ಭತ್ತದ ನಾಟಿ ಕಾರ್ಯಕ್ರಮ ಆಯೋಜಿಸಿದ್ದರು, ಇದರಲ್ಲಿ ಕೇಂದ್ರ ಸಚಿವರು ಭಾಗಿಯಾಗಿದ್ದರು. ಇದರಿಂದ ರೈತರಿಗೆ ಹೊಸ ಮಾದರಿಯ ನಾಟಿ ಕಲಿಸಲು ಮುಂದಾಗಿರಬಹುದು’ ಎಂದು ಕೃಷಿ ಸಚಿವರು ವ್ಯಂಗ್ಯವಾಡಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಾನು ಮೂಲತಃ ಕೃಷಿಕ ಕುಟುಂಬದವನು ಟ್ರ್ಯಾಕ್ಟರ್ ಓಡಿಸುತ್ತೇನೆ, ಉಳುಮೆ ಮಾಡುತ್ತೇನೆ, ಆದರೆ ನೇಗಿಲು ಕಟ್ಟುವುದನ್ನು ಸ್ವಲ್ಪ ಮರೆತಿದ್ದೇನೆ. ಮಂಡ್ಯ ಜನರಿಗೆ ಹುಟ್ಟುತ್ತಲೇ ಭತ್ತ, ಕಬ್ಬು ನಾಟಿ ಮಾಡುವುದು ಗೊತ್ತು. ಕುಮಾರಸ್ವಾಮಿ ಕೆಲವರನ್ನು ಮೆಚ್ಚಿಸಲು ನಾಟಿ ಕಾರ್ಯ ಮಾಡಿರಬಹುದು’ ಎಂದು ಮೂದಲಿಸಿದರು.

ರಾಜಕೀಯ ಸಭೆಗಷ್ಟೇ ಆಸಕ್ತಿ

ಇಂದಿನ ಪ್ರಗತಿ ಪರಿಶೀಲನಾ ಸಭೆಗೆ ಕುಮಾರಸ್ವಾಮಿ ಗೈರಾಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಸತ್ಯ ಹೇಳಿದರೆ ಕೆಲವರಿಗೆ ಮೆಣಸಿನಕಾಯಿ ಇಟ್ಟಂತೆ ಆಗುತ್ತೆ. ಹಿಂದೇ ಸಂಸದರಾಗಿದ್ದಾಗ, ಮುಖ್ಯಮಂತ್ರಿ ಆಗದ್ದಾಗ ರಾಮನಗರದಲ್ಲಿ ಎಷ್ಟು ಕೆಡಿಪಿ ಸಭೆ ಮಾಡಿದ್ದಾರೆ. ಎಷ್ಟು ಜನರ ಸಮಸ್ಯೆ ಆಲಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ರಾಜಕೀಯದ ಸಭೆ ಸಮಾರಂಭಗಳಲ್ಲಿ ಇರುವ ಆಸಕ್ತಿ, ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಇಲ್ಲ’ ಎಂದು ಲೇವಡಿಯಾಡಿದರು.

ಎಚ್ಡಿಕೆ ನಾಚಿಕೆ ಆಗಬೇಕು

‘ಪ್ರಜ್ವಲ್ ಪ್ರಕರಣದ ಸಿ.ಡಿ ಹಂಚಿಕೆ ವಿಚಾರವಾಗಿ ಒಂದು ಬಾರಿ ಪ್ರೀತಂ ಗೌಡ ಮತ್ತೊಂದು ಬಾರಿ ಮಹಾ ನಾಯಕ ಡಿ.ಕೆ ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸುವ ಕುಮಾರಸ್ವಾಮಿ ಉದ್ಯಮಿ ಸಿದ್ದಾರ್ಥ ಸಾವಿನ ಬಗ್ಗೆ ಎಸ್.ಎಂ. ಕೃಷ್ಣ ಕುಟುಂಬದ ಹಿತೈಷಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸುವುದು ಕುಮಾರಸ್ವಾಮಿ ಮನಸ್ಥಿತಿಯನ್ನು ಅರ್ಥೈಸುತ್ತದೆ. ಇಂಥ ಹೇಳಿಕೆ ನೀಡಲು ಅವರಿಗೆ ನಾಚಿಕೆ ಆಗಬೇಕು’ ಎಂದು ಜರಿದರು.

ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಹೊರಿಸಿದರೆ ಕುಮಾರಸ್ವಾಮಿ ಅವರನ್ನು ದೇವರು ಕ್ಷಮಿಸುವುದಿಲ್ಲ. 1996ರ ಲೋಕಸಭಾ ಚುನಾವಣೆ ಹಾಗೂ ಚನ್ನಪಟ್ಟಣ ಮತ್ತು ರಾಮನಗರದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿಯವರನ್ನು ಡಿ.ಕೆ.ಶಿ ಬೆಂಬಲಿಸಿಲ್ಲವೇ ? ಜರಿದರು.

ಸಿಎಂ ಒಕ್ಕಲಿಗರ ವಿರೋಧಿಯಲ್ಲ

‘ಮಂಡ್ಯ ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ಅನುದಾನ, ಕೃಷಿ ವಿ.ವಿ ಸ್ಥಾಪನೆಗೆ ಅನುಮತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ. ಅದೇ ರೀತಿ 2ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಲು ಸಹಕಾರ ನೀಡಿದ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಲಘುವಾಗಿ ನಿಂದಿಸುವುದು ಮಾಜಿ ಪ್ರಧಾನಿಯ ಕುಟುಂಬಸ್ಥರಿಗೆ ಶೋಭೆ ತರುವುದಿಲ್ಲ’ ಎಂದು ಕುಟುಕಿದರು.

ಸರ್ಕಾರ ತೆಗೆಯೋದು ಮಕ್ಕಳ ಆಟವಾ?

ಎಚ್.ಡಿ.ಕುಮಾರಸ್ವಾಮಿ ಅವರು ಮಾತೆತ್ತಿದರೆ ಸರ್ಕಾರ ತೆಗೆಯುತ್ತೇವೆ ಅಂತಾರೆ. ಇದೇನು ಮಕ್ಕಳ ಆಟವಾ? ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದಾಗ ಅವರ ಜೊತೆ ನಿಂತಿದ್ದು ಒಕ್ಕಲಿಗರೇ. ಮೊದಲ ಬಾರಿ ನಾನು ಮತ್ತು ಎರಡನೇ ಬಾರಿ ಡಿ.ಕೆ.ಶಿ ನಿಂತಿದ್ದರು. ಬೇರೆಯವರನ್ನು ಬೈಯ್ಯೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ವಿಷಯಾಧಾರಿತವಾಗಿ ಪಾದಯಾತ್ರೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ, ಅದನ್ನು ಬಿಟ್ಟು ಬಿ.ವೈ.ವಿಜಯೇಂದ್ರ ಹಾಗೂ ನಿಖಿಲ್ ಅವರನ್ನು ರಾಜಕೀಯವಾಗಿ ಬಿಂಬಿಸಲು ಪಾದಯಾತ್ರೆ ನಡೆಸಿದರೆ ನಾವು ಸುಮ್ಮನಿರಬೇಕೇ ? ಪಾದಯಾತ್ರೆ ಬಗ್ಗೆ ಯತ್ನಾಳ್ ಹಾಗೂ ಪ್ರತಾಪ ಸಿಂಹ ಅಸಹನೆ ವ್ಯಕ್ತಪಡಿಸಿಲ್ಲವೇ? ಎಂದರು.

ಬಿಜೆಪಿಯವರ ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ: ಚಲುವರಾಯಸ್ವಾಮಿ

‘ಕೆಆರ್ಎಸ್ ಡ್ಯಾಮ್ ಸುಭದ್ರವಾಗಿದೆ, ಆತಂಕಪಡಬೇಡಿ’

ಮಂಡ್ಯ: ‘ಕೆ.ಆರ್.ಎಸ್ ಅಣೆಕಟ್ಟೆ ನಿರ್ಮಾಣವಾಗಿ 90 ವರ್ಷವಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೊನ್ನೆಯಷ್ಟೇ ವರದಿ ಬಂದಿದ್ದು, ಸದ್ಯ ಕೆ.ಆರ್.ಎಸ್. ಡ್ಯಾಮ್ ಸುಭದ್ರವಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಎಲ್ಲಾ ಡ್ಯಾಂಗಳ ಸುರಕ್ಷತೆಗೆ ಸಮಿತಿ ರಚಿಸಲಾಗಿದ್ದು, ಸಮಿತಿಯು ಅಣೆಕಟ್ಟೆಗಳ ಸುರಕ್ಷತೆಗೆ ನಿಗಾ ವಹಿಸಲಿದೆ. ತುಂಗಭದ್ರಾ ಡ್ಯಾಮ್ ಕ್ರಸ್ಟ್ ಗೇಟ್ ತುಂಡಾಗಿದ್ದು, ಈ ಬಗ್ಗೆ ವರದಿ ಬರುವವರೆಗೆ ವಿರೋಧ ಪಕ್ಷಗಳು ಸುಮ್ಮನಿದ್ದರೆ ಒಳ್ಳೆಯದು’ ಎಂದರು.

‘ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಅಂತಾರಲ್ಲ ಹಾಗೆ ಬಿಜೆಪಿಯವರಿಗೆ ದೇಶವೆಲ್ಲ ಹಳದಿಯಾಗಿ ಕಾಣುತ್ತಿದೆ. ಇದು ರಾಜಕೀಯ ಮಾಡುವ ಸಂದರ್ಭವಲ್ಲ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.