ಬೆಂಗಳೂರು: ‘ಟಾಕ್ಸಿಕ್ ಸಿನಿಮಾ ಚಿತ್ರೀಕರಣ ನಡೆದಿರುವ ಜಾಗಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಎಚ್ಎಂಟಿ ಹೇಳಿದೆ.

ಈ ಸಂಬಂಧ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಎಚ್ಎಂಟಿ, ‘ಸಿನಿಮಾ ಚಿತ್ರೀಕರಣಕ್ಕೆ ಸೆಟ್ ಹಾಕಿರುವ ಜಾಗವು ಕೆನರಾ ಬ್ಯಾಂಕ್ನದ್ದು ಮತ್ತು ಈಗಲೂ ಅದರ ಸುಪರ್ದಿಯಲ್ಲೇ ಇದೆ’ ಎಂದು ವಿವರಿಸಿದೆ. ಜತೆಗೆ ಚಿತ್ರೀಕರಣ ನಡೆದಿರುವ ಜಾಗದ ಉಪಗ್ರಹ ಚಿತ್ರದ ಮೇಲೆ ‘ಕೆನರಾ ಬ್ಯಾಂಕ್ನ ಸ್ವತ್ತು’ ಎಂದು ಬರೆದು ಪೋಸ್ಟ್ಗೆ ಲಗತ್ತಿಸಿದೆ.

ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಸೆಟ್ನ ಜಾಗಕ್ಕೆ ಈಚೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ‘ಎಚ್ಎಂಟಿಗೆ ನೀಡಲಾಗಿದ್ದ ಜಾಗವನ್ನು ಅಕ್ರಮವಾಗಿ ಕೆನರಾ ಬ್ಯಾಂಕ್ಗೆ ಮಾರಾಟ ಮಾಡಲಾಗಿದೆ. ಬ್ಯಾಂಕ್ ಆ ಜಾಗವನ್ನು ಸಿನಿಮಾ ಚಿತ್ರೀಕರಣಕ್ಕೆ ಬಾಡಿಗೆಗೆ ನೀಡಿದೆ. ಅಲ್ಲಿದ್ದ ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ತನಿಖೆ ನಡೆಸಿ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ಎಚ್ಎಂಟಿ ಜಾಗಕ್ಕೆ ರಾಜ್ಯ ಅರಣ್ಯ ಸಚಿವರು ಅತಿಕ್ರಮ ಪ್ರವೇಶ ಮಾಡಿದ್ದಾರೆ’ ಎಂದಿದ್ದರು. ಆದರೆ ಎಚ್ಎಂಟಿ ಈಗ ಇದು ತನ್ನ ಜಾಗವೇ ಅಲ್ಲ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.