ಬೆಂಗಳೂರು: ಗದಗ, ಉಡುಪಿ ಹಾಗೂ ಉತ್ತರ ಕನ್ನಡದ ಮೂವರು ಜನಪ್ರತಿನಿಧಿಗಳ ಹನಿಟ್ರ್ಯಾಪ್ ಕುರಿತು ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಮಹಿಳೆಯೊಬ್ಬರ ಜೊತೆ ಅನರ್ಹ ಶಾಸಕರೊಬ್ಬರು ನಡೆಸಿದ್ದಾರೆ ಎನ್ನಲಾದ ಅಶ್ಲೀಲ ಸಂಭಾಷಣೆಗಳಿರುವ ಆಡಿಯೊ ವೈರಲ್ ಆಗಿದೆ.

ಅನರ್ಹ ಶಾಸಕ ಸುಮಾರು ಹತ್ತು ನಿಮಿಷ ಮಹಿಳೆಯೊಂದಿಗೆ ಅಶ್ಲೀಲ ಸಂಭಾಷಣೆ ನಡೆಸಿದ್ದಾರೆ. ‘ನಾವು ಬೇಗ ಭೇಟಿ ಆಗೋಣ’ ಎಂದು ಮಹಿಳೆಗೆ ಹೇಳುತ್ತಾರೆ. ‘ಫ್ಲ್ಯಾಟ್ ಮಾಡಿ ಬೇಗ ಬೆಂಗಳೂರಲ್ಲಿ’ ಎಂದು ಮಹಿಳೆ ಉತ್ತರಿಸುತ್ತಾರೆ. ಅದಕ್ಕೆ ಅವರು, ‘ಸದ್ಯ ಫ್ಲ್ಯಾಟ್ ಬೇಡ ಹೊರಗೆ ಮುಂಬೈ, ದೆಹಲಿಯಲ್ಲಿ ಭೇಟಿ ಆಗೋಣ’ ಎಂದು ಕೇಳುತ್ತಾರೆ.

‘ನಾನು ಮಾಡಿಸ್ತೀನಲ್ಲಾ’ ಎಂದು ಮಹಿಳೆ ಮತ್ತೆ ಹೇಳುತ್ತಾರೆ. ಅದಕ್ಕೆ ಅನರ್ಹ ಶಾಸಕರು, ‘ಫ್ಲ್ಯಾಟ್ ನೋಡಿಡು, ಉಪ ಚುನಾವಣೆ ಮುಗಿದ ಮೇಲೆ ಮಾಡೋಣ’ ಎನ್ನುತ್ತಾರೆ. ಅದರ ನಡುವೆಯೇ ಮಹಿಳೆ ಯಾವುದೋ ಕೆಲಸ ಮಾಡಿಸಿಕೊಡುವ ಬಗ್ಗೆ ವಿಚಾರಿಸುತ್ತಾರೆ. ಹೀಗೆ ಮಾತು ಮುಂದುವರಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.