ಬೆಂಗಳೂರು:‘ಗಾಂಧಿ ಹತ್ಯೆಗೂ ಸುಮಾರು ಹದಿನೈದು ದಿನ ಮುನ್ನ ನಾಥೂರಾಂ ಗೋಡ್ಸೆ ಬೆಂಗಳೂರಿಗೆ ಬಂದಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಅವರು, ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರ ಮನೆಯಲ್ಲಿಯೇ ಉಳಿದುಕೊಂಡಿದ್ದರು’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ಡಿ.ಎಸ್. ನಾಗಭೂಷಣ್ ಅವರ ‘ಗಾಂಧಿ ಕಥನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಾಂಧಿ ಹತ್ಯೆ ನಂತರ, ಗೋಡ್ಸೆಗೂ ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ ಎಂದು ಸಂಘದವರು ಹೇಳುತ್ತಾರೆ. ಆದರೆ, ಗೋಡ್ಸೆ ಆರ್‌ಎಸ್‌ಎಸ್‌ಗೆ ಸೇರಿದವರೇ ಎನ್ನಲು ಹಲವು ಸಾಕ್ಷ್ಯಗಳಿವೆ’ ಎಂದು ಹೇಳಿದರು.

ಇದನ್ನೂ ಓದಿ:'ಜೈ ಶ್ರೀರಾಮ್ ಎಂಬ ಹಿಂಸೆಯೂ, ಹೇ ರಾಮ್ ಎಂಬ ಅಹಿಂಸೆಯೂ’: ದೇವನೂರ ಮಹಾದೇವ

‘ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜಿಸಬೇಕು ಎಂದು ಗಾಂಧಿ ಹೇಳಿದ್ದು ನಿಜ. ಆದರೆ, ಕಾಂಗ್ರೆಸ್ ವಿಸರ್ಜಿಸಿ, ಲೋಕ ಸೇವಾ ದಳ ಎಂಬ ಸಂಘ ರಚಿಸಿಕೊಂಡು ಆಳುವವರನ್ನು ತಿದ್ದುವ ಕೆಲಸವನ್ನು ಮಾಡಬೇಕು ಎಂಬ ಉದ್ದೇಶ ಗಾಂಧಿಯವರಿಗಿತ್ತು. ಆದರೆ, ಮೋದಿಯವರು ಈ ವಾಕ್ಯವನ್ನು ಪೂರ್ಣವಾಗಿ ಹೇಳದೆ, ಕಾಂಗ್ರೆಸ್ ವಿಸರ್ಜಿಸಲು ಗಾಂಧಿ ಹೇಳಿದ್ದರು ಎಂಬುದಷ್ಟನ್ನೇ ವೈಭವೀಕರಿಸುತ್ತಿದ್ದಾರೆ’ ಎಂದು ದೊರೆಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.