ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಸಮೀಪದ ಶಿಂಷಾ ನದಿಯ ದಡದಲ್ಲಿ ಬಳಪದ ಕಲ್ಲಿನಲ್ಲಿ ಕೆತ್ತಲಾಗಿರುವ ನಾಲ್ಕು ಅಡಿ ಎತ್ತರದ ವಿಷ್ಣುವಿನ ಪುರಾತನ ವಿಗ್ರಹ ಪತ್ತೆಯಾಗಿದೆ.

ಗುಡ್ಡೇನಹಳ್ಳಿ ಗ್ರಾಮದ ಯೋಗೀಶ್ ಎಂಬುವರ ತೋಟಕ್ಕೆ ಹೊಂದಿಕೊಂಡಂತಿರುವ ತೊರೆಯ ಬಳಿಯ ನೀರಿನಲ್ಲಿ ಈ ವಿಷ್ಣುವಿನ ವಿಗ್ರಹ ಕಂಡುಬಂದಿದೆ. ಗ್ರಾಮಸ್ಥರು ಟ್ರ್ಯಾಕ್ಟರ್ನಲ್ಲಿ ಆಂಜನೇಯ ದೇವಾಲಯ ವಿಗ್ರಹವನ್ನು ಸಾಗಿಸಿದ್ದಾರೆ. ಈ ವಿಗ್ರಹ ಯಾವ ಕಾಲದ್ದು, ಎಷ್ಟು ವರ್ಷಗಳ ಹಿಂದಿನದು ಎನ್ನುವ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

ಶೆಟ್ಟಿಗೊಂಡನಹಳ್ಳಿಯಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಹಳ್ಳಿಕಾರ ಮಠಕ್ಕೆ ಈ ವಿಗ್ರಹ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.