ಬೆಂಗಳೂರು: ಮೂವರು ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರಿನ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವರಾಜ್ ಸಿಂಗ್ ಅವರನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ ಮತ್ತು ಐಸಿಟಿ) ಹುದ್ದೆಗೆ ವರ್ಗ ಮಾಡಲಾಗಿದೆ.

ಧಾರವಾಡದ ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಪಿಸಿಸಿಎಫ್ ಆಗಿದ್ದ ಎ.ರಾಧಾ ದೇವಿ ಅವರನ್ನು ಜಲಸಂಪನ್ಮೂಲ ಇಲಾಖೆಯ ಭೂಸ್ವಾಧೀನ ಮತ್ತು ಅರಣ್ಯ ಘಟಕದ ಹೆಚ್ಚುವರಿ ಪಿಸಿಸಿಎಫ್ ಆಗಿ ನೇಮಿಸಲಾಗಿದೆ. ರಾಧಾ ದೇವಿ ಅವರ ವರ್ಗದಿಂದ ತೆರವಾದ ಹುದ್ದೆಗೆ ಬೆಂಗಳೂರಿನ ಪ್ರಚಾರ ಮತ್ತು ಐಸಿಟಿ ವಿಭಾಗದ ಹೆಚ್ಚುವರಿ ಪಿಸಿಸಿಎಫ್ ವಿಜಯಲಾಲ್ ಮೀನಾ ಅವರನ್ನು ನಿಯೋಜಿಸಲಾಗಿದೆ. ಡಿ.ಯತೀಶ್ ಕುಮಾರ್ ಅವರಿಗೆ 2008ರಿಂದಲೇ ಪೂರ್ವಾನ್ವಯವಾಗುವಂತೆ ಕರ್ನಾಟಕ ಐಎಫ್‌ಎಸ್ ವೃಂದಕ್ಕೆ ಬಡ್ತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.