ವಿಜಯಪುರ: ‘ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ. ನಮ್ಮ ಪೊಲೀಸರ ಮೇಲೆ ನನಗೆ ಗೌರವ, ನಂಬಿಕೆ ಇದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

‘ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೆ ವಹಿಸಬೇಕು’ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಶನಿವಾರ ಇಲ್ಲಿ ತಿರುಗೇಟು ನೀಡಿದ ಅವರು, ‘ಈ ಹಿಂದೆ ಐದು ವರ್ಷ ಬಿಜೆಪಿಯವರೇ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರು. ಅವರು ಎಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದರು ಎಂಬುದನ್ನು ಹೇಳಲಿ’ ಎಂದರು.

‘ಭಯೋತ್ಪಾದಕ ಸಂಘಟನೆಗಳಿಗೂ ಹಣವನ್ನು ಹಂಚಿರುವ ಸಾಧ್ಯತೆ ಇದೆ’ ಎಂಬ ಶೋಭಾ ಹೇಳಿಕೆಗೆ, ‘ಅದನ್ನು ಅವರನ್ನೇ ಕೇಳಿ’ ಎಂದು ಖಾರವಾಗಿ ಹೇಳಿದರು.

ನೋಟಿಸ್ ತಪ್ಪೇನಲ್ಲ: ‘ಐಎಂಎ ವಂಚನೆ ಪ್ರಕರಣದಲ್ಲಿ ಸಚಿವ ಜಮೀರ್ ಅಹಮದ್ ಅವರಿಗೆ ನೋಟಿಸ್ ನೀಡಿರುವುದರಲ್ಲಿ ತಪ್ಪೇನಿಲ್ಲ. ಜಮೀರ್ ಅವರು ಐಎಂಎಗೆ ಜಾಗ ಮಾರಾಟ ಮಾಡಿದ್ದಾರೆ. ಹೀಗಾಗಿ ಅವರಿಗೆ ನೋಟಿಸ್ ಜಾರಿಯಾಗಿದೆ. ಅದಕ್ಕೆ ಅವರು ಉತ್ತರ ನೀಡಬೇಕು’ ಎಂದು ಹೇಳಿದರು.

ಇನ್ನಷ್ಟು...

ಐಎಂಎ ವಂಚನೆ: ತನಿಖೆ ಚುರುಕುಗೊಂಡಿದೆ -ಎಂ.ಬಿ.ಪಾಟೀಲ

ಜಮೀರ್ ಅಹಮದ್: ಐಎಂಎ ಪ್ರಕಣದಲ್ಲಿ ಇಡಿಸಮನ್ಸ್ ಪಡೆದ ಮೊದಲ ರಾಜಕಾರಿಣಿ

ಸಚಿವ ಜಮೀರ್, ಡಿಕೆಶಿಗೆ ನೋಟಿಸ್

ಐಎಂಎ ಜ್ಯುವೆಲ್ಸ್ ಹಗರಣ ತನಿಖೆಗೆರವಿಕಾಂತೇಗೌಡ ನೇತೃತ್ವದಲ್ಲಿ ಎಸ್ಐಟಿ ರಚನೆ

ಐಎಂಎ: ವಂಚನೆಯೇ ಉದ್ದೇಶ?

‘ಧರ್ಮದ ಹೆಸರಲ್ಲಿ ಮೋಡಿ ಮಾಡಿದ ಖಾನ್’

ಐಎಂಎ ಜ್ಯುವೆಲ್ಸ್ ಮಾಲೀಕನ ‘ಆತ್ಮಹತ್ಯೆ’ ಆಡಿಯೊ; ಮಳಿಗೆ ಎದುರು ಕೋಲಾಹಲ

‘ಐಎಂಎ ಸಮೂಹ ಕಂಪನಿ’ ವಿವಾದ| ‘ಪ್ರಕರಣ ಸಿಸಿಬಿಗೆ ವಹಿಸಲಾಗಿದೆ’ –ಕುಮಾರಸ್ವಾಮಿ

11 ಸಾವಿರ ಜನರಿಗೆ ದೋಖಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.