ಬೆಂಗಳೂರು: ಬಿಜೆಪಿ ಸರ್ಕಾರ ಭಾರತದಲ್ಲೂ 'ಶ್ರೀಲಂಕಾ ಮಾಡೆಲ್' ಸ್ಥಾಪಿಸುತ್ತಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

‘ಸಗಟು ಹಣದುಬ್ಬರ ದಾಖಲೆ’ ಕುರಿತ ಪ್ರಜಾವಾಣಿ ವರದಿಯನ್ನು ಹಂಚಿಕೊಂಡಿರುವ ಕೆಪಿಸಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

‘ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿಗೆ ಬೆಲೆ ಏರಿಕೆಯ ಬಗ್ಗೆ ಬಹಳ ಕಾಳಜಿ ಇತ್ತು. ಸಣ್ಣ ಬೆಲೆ ಏರಿಕೆಗೂ ಅವರ ಪ್ರತಿಭಟನೆ ಏನು, ಅವರ ಹೋರಾಟವೇನು, ಅವರ ಅರಚಾಟವೇನು? ಈಗ ಎಲ್ಲಿ ಹೋಗಿದೆ ಆ ವೀರಾವೇಶ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಬಿಜೆಪಿ ಸರ್ಕಾರ ಭಾರತದಲ್ಲೂ 'ಶ್ರೀಲಂಕಾ ಮಾಡೆಲ್' ಸ್ಥಾಪಿಸುತ್ತಿದೆ. ಹೀಗೆಯೇ ಮುಂದುವರಿದಲ್ಲಿ ಇಲ್ಲೂ ಶ್ರೀಲಂಕಾ ಸ್ಥಿತಿ ಬರಲಿದೆ’ ಎಂದು ಕಾಂಗ್ರೆಸ್ ಹರಿಹಾಯ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.