ಲಂಡನ್: ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ನೀಡುವ ಡಿಎಸ್ಸಿ ಬಹುಮಾನದ ಸ್ಪರ್ಧೆಯಲ್ಲಿ ಕನ್ನಡದ ಕವಿ ಮತ್ತು ಕತೆಗಾರ ಜಯಂತ ಕಾಯ್ಕಿಣಿ, ಭಾರತದ ನೀಲ್ ಮುಖರ್ಜಿ, ಸುಜಿತ್ ಶರಾಫ್, ಮನು ಜೋಸೆಫ್, ಪಾಕಿಸ್ತಾನ ಮೂಲದ ಕಮಿಲಾ ಶಮ್ಶಿ, ಮೊಹ್ಸೀನ್ ಹಮೀದ್ ಅವರ ಕೃತಿಗಳು ಕೊನೆಯ ಸುತ್ತಿಗೆ ಆಯ್ಕೆಯಾಗಿವೆ.

ಲಂಡನ್ ಸ್ಕೂಲ್ ಆಫ್ ಏಕಾನಮಿಕ್ಸ್ ಆ್ಯಂಡ್ ಪಾಲಿಟಿಕಲ್ ಸೈನ್ಸ್ ಸಂಸ್ಥೆಯಲ್ಲಿ ಬುಧವಾರ ರಾತ್ರಿ 2018ರ ಡಿಎಸ್ಸಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ರುದ್ರಾಂಗ್ಸು ಮುಖರ್ಜಿ ಅವರ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಯಿತು.

ಉಳಿದಂತೆ ಆರುಂಧತಿ ರಾಯ್, ಜೀತ್ ತಾಯಿಲ್, ಪೆರುಮಾಳ್ ಮುರುಗನ್ ಹಾಗೂ ತಾಬೀಶ್ ಖೈರ್ ಅವರ ಕೃತಿಗಳು ಅಂತಿಮ ಸುತ್ತಿನ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲಗೊಂಡವು.

ಜಯಂತ್ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕನ್ನಡ ಕಥಾ ಸಂಕಲನವು, ಮುಂಬೈ ಕುರಿತ ಕಥೆಗಳ ಆಯ್ದ ಕೃತಿ ಇದಾಗಿದ್ದು, ತೇಜಸ್ವಿನಿ ನಿರಂಜನ ಅವರು ಇಂಗ್ಲಿಷ್ಗೆ ಅನುವಾದಿಸಿದ್ದಾರೆ.

ಉಳಿದಂತೆ, ಶಮ್ಶಿ ಅವರ ‘ಹೋಮ್ ಫೈರ್’, ಮನುಜೋಸೆಫ್ ಅವರ ‘ಮಿಸ್ಲೈಲಾ ಆರ್ಮ್ಡ್ ಆ್ಯಂಡ್ ಡೇಂಜರಸ್’, ಮೊಹ್ಸಿನ್ ಹಮೀದ್ ಅವರ ‘ಎಕ್ಸಿಟ್ ವೆಸ್ಟ್’ ನೀಲ್ ಮುಖರ್ಜಿ ಅವರ ‘ ಎ ಸ್ಟೇಟ್ ಆಫ್ ಫ್ರೀಡಂ’ ಹಾಗೂ ಶರಾಫ್ ಅವರ ‘ಹರಿಲಾಲ್ ಆ್ಯಂಡ್ ಸನ್ಸ್’ ಕೃತಿಗಳು ಅಂತಿಮ ಸುತ್ತಿನಲ್ಲಿ ಆಯ್ಕೆಯಾಗಿವೆ.

2019ರ ಜನವರಿ 22ರಿಂದ 27ರ ತನಕ ನಡೆಯುವ ಕೋಲ್ಕತ್ತದಲ್ಲಿ ನಡೆಯುವ ಟಾಟಾಸ್ಟೀಲ್ ಕೋಲ್ಕತ್ತ ಸಾಹಿತ್ಯ ಉತ್ಸವದಲ್ಲಿ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗುತ್ತದೆ. ವಿಜೇತವಾಗುವ ಕೃತಿ ₹18 ಲಕ್ಷ ಬಹುಮಾನ ಗೆಲ್ಲಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.