ಕಾರವಾರ: ಯುದ್ಧವಿಮಾನ ವಾಹಕ ನೌಕೆ ‘ಐಎನ್ಎಸ್ ವಿಕ್ರಮಾದಿತ್ಯ’ವನ್ನು ಇಲ್ಲಿನ ಸೀಬರ್ಡ್ ನೌಕಾನೆಲೆಯಲ್ಲಿ ವೀಕ್ಷಿಸಲು ಡಿ.22ರಂದು (ಭಾನುವಾರ) ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಅಂದು ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ಭೇಟಿ ನೀಡಬಹುದು.

‘ಭಾರತೀಯ ನೌಕಾಪಡೆ ಸಪ್ತಾಹ 2019’ರ ಅಂಗವಾಗಿ ನೌಕಾಪಡೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.

ಭದ್ರತಾ ಸೂಚನೆಗಳು:ನೌಕಾನೆಲೆಯ ಅರಗಾ ದ್ವಾರದಿಂದ ಮಾತ್ರ ಪ್ರವೇಶಾವಕಾಶವಿದೆ. ದೃಶ್ಯ ಹಾಗೂ ಧ್ವನಿ ಮುದ್ರಣ ಮಾಡುವ ಮೊಬೈಲ್, ಕ್ಯಾಮೆರಾ ಮುಂತಾದ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ಒಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಭೇಟಿ ನೀಡುವವರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರ ಜಾರಿ ಮಾಡಿದ ಇನ್ಯಾವುದೇ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು.

ಸಾರ್ವಜನಿಕರ ವಾಹನಗಳನ್ನು ಪ್ರವೇಶದ್ವಾರದಲ್ಲೇ ನಿಲುಗಡೆ ಮಾಡಬೇಕು. ಅಲ್ಲಿಂದ ಜೆಟ್ಟಿಯವರೆಗೆ ನೌಕಾಪಡೆಯ ಬಸ್ಗಳಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಪಾಸ್ಗಳನ್ನು ನೀಡಲಿದ್ದು, ಅವುಗಳನ್ನು ಪುನಃ ಬರುವಾಗ ಭದ್ರತಾ ಸಿಬ್ಬಂದಿಗೆ ನೀಡಬೇಕು ಎಂದು ನೌಕಾನೆಲೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.