ಬೆಂಗಳೂರು:ಕರ್ನಾಟಕ ಜಾನಪದ ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಜಾನಪದ ವಿದ್ವಾಂಸರಾದಹಾಸನದ ಚಂದ್ರು ಕಾಳೇನಹಳ್ಳಿ ಹಾಗೂ ಉತ್ತರ ಕನ್ನಡದ ಶ್ರೀಪಾದ ಶೆಟ್ಟಿ ಅವರು ‘ಜಾನಪದ ತಜ್ಞ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಹಾಗೂ ರಿಜಿಸ್ಟ್ರಾರ್ ಎನ್. ನಮ್ರತಾ ಅವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಶುಕ್ರವಾರ ಬಿಡುಗಡೆಮಾಡಿದರು. ವಾರ್ಷಿಕ ಗೌರವ ಪ್ರಶಸ್ತಿಗೆ 30 ಜಿಲ್ಲೆಗಳಿಂದ 30 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ‘ಜಾನಪದ ತಜ್ಞ ಪ್ರಶಸ್ತಿ’ಯು ತಲಾ ₹ 50 ಸಾವಿರ ನಗದು ಹಾಗೂ ‘ಗೌರವ ಪ್ರಶಸ್ತಿ’ಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ.

ಗೌರವ ಪ್ರಶಸ್ತಿಗೆ ಆಯ್ಕೆಯಾದವರು: ಬೆಂಗಳೂರಿನ ಗಂಗಮ್ಮ (ಸೋಬಾನೆ ಪದ), ಬೆಂಗಳೂರು ಗ್ರಾಮಾಂತರದ ತಿಮ್ಮಯ್ಯ (ಜಾನಪದ ಕಥೆಗಾರ), ರಾಮನಗರದ ಚಿಕ್ಕಮ್ಮ (ಸೋಬಾನೆ ಪದ), ತುಮಕೂರಿನ ಕಡಬ ಶ್ರೀನಿವಾಸ (ಜಾನಪದ ಹಾಸ್ಯ), ಚಿಕ್ಕಬಳ್ಳಾಪುರದ ಗ.ನ. ಅಶ್ವತ್ಥ (ಜಾನಪದ ಗಾಯಕ), ಕೋಲಾರದ ನಾರಾಯಣಸ್ವಾಮಿ (ತತ್ವಪದ), ಶಿವಮೊಗ್ಗದ ಲಕ್ಷ್ಮೀರಾಮಪ್ಪ (ಹಸೆ ಚಿತ್ತಾರ), ಚಿತ್ರದುರ್ಗದ ಚಂದ್ರಮ್ಮ (ಮದುವೆ ಹಾಡು), ದಾವಣಗೆರೆಯ ರಂಗಮ್ಮ ಗಂಡ ಗಿಡ್ಡಪ್ಪ (ಜಾನಪದ ಗಾಯಕಿ), ಮಂಡ್ಯದ ಮಹದೇವಸ್ವಾಮಿ (ನೀಲಗಾರರ ಪದ), ಮೈಸೂರಿನ ಮಹದೇವು (ಬೀಸು ಕಂಸಾಳೆ), ಹಾಸನದ ಎಚ್.ಎಂ. ರಾಮಯ್ಯ (ಕೀಲು ಕುದುರೆ), ದಕ್ಷಿಣ ಕನ್ನಡದ ವೆಂಕಟೇಶ ಬಂಗೇರ (ಕರಗ ನೃತ್ಯ), ಚಾಮರಾಜನಗರದ ಆರ್.ಎಂ. ಶಿವಮಲ್ಲೇಗೌಡ (ಗೊರವರ ಕುಣಿತ), ಚಿಕ್ಕಮಗಳೂರಿನ ಹನುಮಕ್ಕ (ತತ್ವಪದ), ಕೊಡಗಿನ ಜೆ.ಕೆ. ಮರಿ (ಜೇನು ಕುರುಬರ ನೃತ್ಯ ಮತ್ತು ಹಾಡು), ಉಡುಪಿಯ ಪದ್ಮಾವತಿ ಆಚಾರ್ಯ (ನಾಟಿ ವೈದ್ಯೆ), ಧಾರವಾಡದ ಕುಬೇರನಗೌಡ ಮುರಳ್ಳಿ (ಜಗ್ಗಲಿಗೆ), ಗದಗದ ರಾಮಚಂದ್ರ ಸಿದ್ದಪ್ಪ (ಕರಡಿ ಮಜಲು), ವಿಜಯಪುರದ ನಾಗಲಿಂಗಪ್ಪ ಸಿದ್ರಾಮಪ್ಪ (ಭಜನೆ), ಬಾಗಲಕೋಟೆಯ ರಂಗಪ್ಪ ಬಾಲಪ್ಪ ಹಲಕುರ್ಕಿ (ಶಿವಭಜನೆ), ಹಾವೇರಿಯ ಸಿದ್ದಲಿಂಗಪ್ಪ ಚನ್ನಬಸಪ್ಪ (ತತ್ವಪದ), ಬೆಳಗಾವಿಯ ರುದ್ರಾಂಬಿಕಾ ಮಹಾಂತೇಶ (ಬೆಳಗಾವಿ), ಉತ್ತರ ಕನ್ನಡದ ಭೂಗೂ ಧಾಕೂ ಕೊಳಾಪ್ಪೆ (ಹೋಳಿ ಸಿಗ್ಮಾ ಕುಣಿತ), ಬಳ್ಳಾರಿಯ ಪೆದ್ದ ಮಾರಕ್ಕೆ (ಬುರ್ರಕಥಾ), ರಾಯಚೂರಿನ ಮರಿಯಪ್ಪ (ಭಜನೆ ಪದ), ಕೊಪ್ಪಳದ ಶಿವಲಿಂಗಪ್ಪ (ಹಗಲುವೇಷ), ಕಲಬುರಗಿಯ ಶಕುಂತಲಾ (ಗೀಗಿ ಪದ), ಬೀದರ್‌ನ ಸಿದ್ರಾಮ (ಗೋಂದಳಿ ಪದ) ಹಾಗೂ ಯಾದಗಿರಿಯ ಭೂಮ್ಮಣ್ಣ ಬಸಪ್ಪ ಲಾಠಿ (ಡೊಳ್ಳು ಕುಣಿತ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.