ರಾಮನಗರ: ಎಲ್ಲದಕ್ಕೂ ಕರ್ನಾಟಕ ಬಂದ್ ಮಾಡುವುದರಿಂದ ಪ್ರಯೋಜನ ಇಲ್ಲ. ಬದಲಿಗೆ ಎಂಇಎಸ್ ಸೇರಿದಂತೆ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಇದೇ 31ರಂದು ನಮ್ಮ ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಆದರೆ ಇದರಿಂದ ಮಹಾರಾಷ್ಟ್ರಕ್ಕೆ ಏನು ತೊಂದರೆ ಆಗದು. ಬಂದ್ ಮಾಡುವುದರಿಂದ ನಮ್ಮಲ್ಲಿನ ಸಣ್ಣ ವ್ಯಾಪಾರಿಗಳಿಗೆ, ಕೂಲಿ ಕಾರ್ಮಿಕರಿಗೆ ಆಗುವ ತೊಂದರೆ ಕುರಿತು ಕರೆ ನೀಡಿದವರು ಯೋಚಿಸಬೇಕು. ಹೋರಾಟಗಾರರು ಇದರ ಬದಲು ಸರ್ಕಾರದ ಮೇಲೆ ಬೇರೆ ಮಾರ್ಗಗಳ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.

ವ್ಯರ್ಥ ಕಲಾಪ; ಈ ಬಾರಿ ಬೆಳಗಾವಿಯ ವಿಧಾನಮಂಡಲ ಕಲಾಪ ಸಂಪೂರ್ಣ ವ್ಯರ್ಥ ಆಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಅಲ್ಲಿ ಚರ್ಚೆ ಆಗಲಿಲ್ಲ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆಯೂ ಚರ್ಚಿಸಲಿಲ್ಲ. ಬದಲಾಗಿ ಸಂಡೂರು ತಹಶೀಲ್ದಾರ್, ಬೈರತಿ ಬಸವರಾಜು ಬಗ್ಗೆ ವ್ಯರ್ಥ ಚರ್ಚೆ ಆಯಿತು. ಕೊನೆಯಲ್ಲಿ ಮತಾಂತರ ವಿಚಾರ ತರಲಾಯಿತು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.