ಚಿಕ್ಕಬಳ್ಳಾಪುರ:ಈಶಾ ಯೋಗಕೇಂದ್ರದ ಕಾರ್ಯಕ್ರಮದಲ್ಲಿಕೇರೆ ಹಾವು ಕೈಯಲ್ಲಿ ಹಿಡಿದು ಪ್ರದರ್ಶಿಸಿದ ಈಶಾ ಫೌಂಡೇಶನ್‌ನ ಜಗ್ಗಿ ವಾಸುದೇವ್ ವಿರುದ್ಧ ಕ್ರಮ ಜರುಗಿಸುವಂತೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ (ಎಸ್‌ಪಿಸಿಎ) ಜಿಲ್ಲಾ ಸಮಿತಿ ಸದಸ್ಯ ಸಿ.ಎನ್.ಪೃಥ್ವಿರಾಜ್ ಅವರು ಚಿಕ್ಕಬಳ್ಳಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನೀಡಿದ ದೂರಿನ ಬಗ್ಗೆ ಈಶಾ ಯೋಗ ಕೇಂದ್ರ ಸ್ಪಷ್ಟನೆ ನೀಡಿದೆ.

ತಾಲ್ಲೂಕಿನಈಶಾ ಯೋಗ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಹಾವನ್ನು ಪ್ರದರ್ಶಿಸಿದ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯಾಧಿಕಾರಿಗೆ ತಪ್ಪು ಮಾಹಿತಿಯಿಂದ ಕೂಡಿದ ದೂರು ನೀಡಲಾಗಿದೆ ಎಂದು ಅದು ಭಾನುವಾರ ಹೇಳಿದೆ.

ಯೋಗ ಕೇಂದ್ರದಲ್ಲಿ ನಾಗ ಪ್ರತಿಷ್ಠೆ ಕಾರ್ಯಕ್ರಮದ ವೇಳೆ ಹಾವು ಕಾಣಿಸಿಕೊಂಡಿತ್ತು. ಸ್ವಯಂಸೇವಕರೊಬ್ಬರು ಅದನ್ನು ಸದ್ಗುರು ಗಮನಕ್ಕೆ ತಂದರು. ಅವರು ಅದನ್ನು ಸೌಮ್ಯವಾಗಿ ನೋಡಿಕೊಂಡು ನಂತರ ಹತ್ತಿರದ ಕಾಡಿಗೆ ಸುರಕ್ಷಿತವಾಗಿ ಬಿಡುವಂತೆ ಹೇಳಿದರು. ಹಾವಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಈ ಬಗ್ಗೆ ಸ್ಥಳದಲ್ಲಿದ್ದ ಪೊಲೀಸರಿಗೆ ಅರಿವಿತ್ತು.

‘ಹಾವುಗಳ ಕುರಿತಾದ ತಪ್ಪು ಕಲ್ಪನೆ ತೊಡೆದುಹಾಕಲು ಮತ್ತು ಸಂರಕ್ಷಣೆ ಉತ್ತೇಜಿಸಲು ಈ ರೀತಿ ಮಾಡಿದರು. ಹಾವು ಸೌಮ್ಯ ಜೀವಿ ಮತ್ತು ಅದನ್ನು ನೋಯಿಸಬಾರದು ಎಂದುಹೇಳಿದರು. ಹಾವುಗಳನ್ನು ನಕಾರಾತ್ಮಕವಾಗಿ ನೋಡಲಾಗುತ್ತದೆ. ಆದರೆ ನಾವು ದಾಳಿ ಮಾಡದ ಹೊರತು ಅವು ನಮಗೆ ಹಾನಿ ಉಂಟು ಮಾಡುವುದಿಲ್ಲ. ಮನುಷ್ಯ ಅದರ ಆಹಾರವಲ್ಲ ಎಂದು ನೆರೆದವರಿಗೆ ಮನವರಿಕೆ ಮಾಡಿದರು’ ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.