ಬೆಳಗಾವಿ: ‘ದೇಶದ ರೈತರ ಖಾತೆಗೆ ಈ ಬಾರಿಯ ಕಿಸಾನ್ ಸಮ್ಮಾನ್ ನಿಧಿಯ ಕಂತನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಫೆ. 27ರಂದು ಬೆಳಗಾವಿಯಿಂದಲೇ ವರ್ಗಾಯಿಸಲಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದಂದೇ ರೈತರಿಗೆ ಈ ಹಣ ಮುಟ್ಟಿಸುತ್ತಿರುವುದು ಖುಷಿ ತಂದಿದೆ’ ಎಂದು ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮಾಲಿನಿಸಿಟಿಯಲ್ಲಿ ನಡೆಯಲಿರುವ ಪ್ರಧಾನಿ ಕಾರ್ಯಕ್ರಮದ ಸಿದ್ಧತೆಗಳನ್ನು ಗುರುವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇಲ್ಲಿನ ನವೀಕರಿಸಿದ ಹೈಟೆಕ್ ರೈಲು ನಿಲ್ದಾಣ ಲೋಕಾರ್ಪಣೆ ಮಾಡುವ ಪ್ರಧಾನಿ, ನಂತರ ರೈತರ ಖಾತೆಗೆ ಕಂತು ವರ್ಗಾಯಿಸುವರು. ಕಳೆದ ಬಾರಿ ದೆಹಲಿ ಗ್ರಾಮೀಣ ಕ್ಷೇತ್ರದಿಂದ ರೈತರ ಖಾತೆಗೆ ₹22 ಸಾವಿರ ಕೋಟಿ ನಿಧಿ ವರ್ಗಾಯಿಸಿದ್ದರು. ಈವರೆಗೆ 14 ಕೋಟಿ ರೈತರ ಖಾತೆಗೆ ₹2.70 ಲಕ್ಷ ಕೋಟಿ ವರ್ಗಾಯಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.