ಬೆಂಗಳೂರು: ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹುದ್ದೆಗಳ ಭರ್ತಿಗೆ ಫೆ. 28ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್) ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಪ್ರಕಟಿಸಿರುವ ಪರಿಷ್ಕೃತ ‘ಕೀ ಉತ್ತರ’ಗಳಲ್ಲಿ ಕೆಲವು ತಪ್ಪಾಗಿವೆ ಎಂದು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕೆಪಿಎಸ್ಸಿ ಕಾರ್ಯದರ್ಶಿಗೆ ದೂರು ನೀಡಿರುವ ಅಭ್ಯರ್ಥಿಗಳು, ‘ಉತ್ತರ ಸರಿ ಇದ್ದರೂ ತಪ್ಪೆಂದು ಪರಿಷ್ಕೃತ ಉತ್ತರ ನೀಡಲಾಗಿದೆ. ಅಲ್ಲದೆ, ಅನಗತ್ಯವಾಗಿ ಗ್ರೇಸ್ ಅಂಕ ಕರುಣಿಸಲಾಗಿದೆ’ ಎಂದಿದ್ದಾರೆ

‘ಪರಿಷ್ಕೃತ ಕೀ ಉತ್ತರದಲ್ಲಿ 19 ಪ್ರಶ್ನೆಗಳಿಗೆ (ಸಾಮಾನ್ಯ ಜ್ಞಾನ – 4, ಸಾಮಾನ್ಯ ಕನ್ನಡದಲ್ಲಿ 15) ಉತ್ತರಗಳನ್ನು ಬದಲಿಸಲಾಗಿದೆ. ಆ ಪೈಕಿ, ಸಾಮಾನ್ಯ ಜ್ಞಾನದ 1 ಮತ್ತು ಸಾಮಾನ್ಯ ಕನ್ನಡದ 6 ಪ್ರಶ್ನೆಗಳಲ್ಲಿ ಎಲ್ಲ ನಾಲ್ಕೂ ಆಯ್ಕೆ ಉತ್ತರಗಳು ಸರಿ ಎಂಬ ಕಾರಣಕ್ಕೆ ಗ್ರೇಸ್ ಅಂಕ ನೀಡಲಾಗಿದೆ. ಇದರ ಹೊರತಾಗಿ ಎರಡು ತಪ್ಪುಉತ್ತರ ಪ್ರಕಟಿಸಲಾಗಿದೆ. ಗ್ಲಿಲಹಪ್ರಶ್ನೆಗಳಿಗೆ ಉತ್ತರಗಳನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ’ ಎಂದು ದೂರಿದ್ದಾರೆ.

‘ಮೊದಲು ಮಾರ್ಚ್ 2ರಂದು ಕೀ ಉತ್ತರ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಅದರಲ್ಲಿ ತಪ್ಪುಗಳಿವೆ ಎಂದು ದಾಖಲೆ ಸಹಿತ ಆಕ್ಷೇಪಣೆ ಸಲ್ಲಿಸಿದ್ದೇವೆ. ಆದರೆ, ಕೆಪಿಎಸ್ಸಿ ಆಕ್ಷೇಪಣೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಏ. 8ರಂದು ಅಂತಿಮ ಪರಿಷ್ಕೃತ ಕೀ ಉತ್ತರ ಪ್ರಕಟಿಸಲಾಗಿದೆ. ಉತರ ಸರಿಯಿದ್ದರೂ (ಆಯೋಗ ನಡೆಸಿದ ಹಿಂದಿನ ಪರೀಕ್ಷೆಗಳಲ್ಲಿ ಕೇಳಿದ ಪ್ರಶ್ನೆಗೆ ಆಗ ಉತ್ತರ ಸರಿಕೊಟ್ಟು) ತಪ್ಪೆಂದು ನೀಡಿದೆ’ ಎಂದು ಅಭ್ಯರ್ಥಿಯೊಬ್ಬರು ಹೇಳಿದರು.

‘ಕೆಪಿಎಸ್ಸಿಯ ಈ ನಡೆಯಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ. ಪರಿಷ್ಕೃತ ಉತ್ತರಗಳನ್ನು ಮತ್ತೊಮ್ಮೆ ಪರಿಷ್ಕರಿಸಿ, ಸರಿಯಿದ್ದರೂ ತಪ್ಪೆಂದು ನೀಡಿದ ಉತ್ತರಗಳನ್ನು ಸರಿಪಡಿಸಬೇಕು. ಗ್ರೇಸ್ ಅಂಕ ನೀಡಿದ ಉತ್ತರಗಳನ್ನು ಪರೀಶಿಲಿಸಿ, ಒಂದೇ ಆಯ್ಕೆ ಸ್ಷಷ್ಟವಾಗಿ ಸರಿ ಇದ್ದರೂ ಎರೆಡರಡು ಮತ್ತು ಮೂರೂ ಅಯ್ಕೆಗಳು ಸರಿ ಎಂದು ನೀಡಿದ ಉತ್ತರಗಳನ್ನು ಬದಲಿಸಬೇಕು. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಬೇಕು’ ಎಂದೂ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಕೆಪಿಎಸ್ಸಿ ಕಾರ್ಯದರ್ಶಿ ಅವರನ್ನು ಸಂಪರ್ಕಿಸಲು ಯತ್ನಿಸಿದರೂ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.