ಬೆಳಗಾವಿ: ‘ಮುಜರಾಯಿ ಇಲಾಖೆಗೆ ಸೇರಿದ ರಾಜ್ಯದ 25 ಎ–ಗ್ರೇಡ್ ದೇವಸ್ಥಾನಗಳಲ್ಲಿ ‘ಮಾಸ್ಟರ್ ಪ್ಲ್ಯಾನ್‘ ಮಾಡಲು ಸಿದ್ಧತೆ ನಡೆಸಲಾಗಿದೆ. ಬಜೆಟ್ ಅಧಿವೇಶನ ಮುಗಿದ ತಕ್ಷಣ ಇದನ್ನು ಕಾರ್ಯಗತ ಮಾಡಲಾಗುವುದು’ ಎಂದು ಮುಜರಾಯಿ, ಹಜ್ ಮತ್ತು ವಕ್ಪ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

‘ಬೆಂಗಳೂರು ನಗರವೂ ಸೇರಿದಂತೆ ರಾಜ್ಯದ ಹಲವು ದೇವಸ್ಥಾನಗಳ ಜಾಗ ಅತಿಕ್ರಮಣವಾಗಿದೆ. ನಾನು ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ. ‘ಮಾಸ್ಟರ್ ಪ್ಲ್ಯಾನ್’ ಮೂಲಕ ಒತ್ತುವರಿ ತೆರವು ಮಾಡುವುದು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸ್ವಚ್ಛತಾ ಕೆಲಸಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮುಜರಾತಿ ಹಾಗೂ ವಕ್ಫ್ ಭೂಮಿ ಅತಿಕ್ರಮಣ ತೆರವಿಗೆ ಕಠಿಣ ಕ್ರಮ ಅನುಸರಿಸಲಾಗುವುದು. ಈ ಹಿಂದೆ ಜಾಗಗಳ ಸಮೀಕ್ಷೆ ನಡೆಯದ ಕಾರಣ ಅತಿಕ್ರಮಣವಾಗಿದೆ’ ಎಂದರು.

‘ವಿಪರೀತ ಚಳಿ ಇದ್ದ ಕಾರಣ ‘ಕಾಶಿಯಾತ್ರೆ’ ಯೋಜನೆಯನ್ನು ಎರಡು ತಿಂಗಳಿಂದ ಸ್ಥಗಿತ ಮಾಡಲಾಗಿತ್ತು. ಫೆ. 15ರಿಂದ ಮತ್ತೆ ಆರಂಭಿಸಲಾಗುವುದು. ಹೆಚ್ಚಿನ ಭಕ್ತರು ಮುಂದೆ ಬರುತ್ತಿದ್ದಾರೆ. ಇನ್ನಷ್ಟು ಅನುದಾನ ನೀಡುವಂತೆ ಕೋರಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ಸಿಗಲಿದೆ’ ಎಂದೂ ತಿಳಿಸಿದರು.

‘ಸವದತ್ತಿ ತಾಲ್ಲೂಕಿನ ಯಲ್ಲಮ್ಮನ ಗುಡ್ಡ ದೇವಸ್ಥಾನ ಅಭಿವೃದ್ಧಿಗೆ ಸ್ವತಃ ಮುಖ್ಯಮಂತ್ರಿ ಆಸ್ಥೆ ವಹಿಸಿದ್ದಾರೆ. ಈಗಾಗಲೇ ಒತ್ತುವರಿ ತೆರವು ಮುಂದುವರಿದಿದೆ. ಮಾಸ್ಟರ್ ಪ್ಲ್ಯಾನ್ನಲ್ಲಿ ಈ ದೇವಸ್ಥಾನದ ಅಭಿವೃದ್ಧಿ ಕೂಡ ಸೇರಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.