ಬೆಂಗಳೂರು:ಕೇಂದ್ರ ಆರೋಗ್ಯ ಸಚಿವಾಲಯದ ತಾಯಿ ಮತ್ತು ಮಕ್ಕಳ ವಿಭಾಗವು ಮಾದರಿ ನೋಂದಣಿ ವ್ಯವಸ್ಥೆಯ (ಎಸ್ಆರ್ಎಸ್) ವರದಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿತಾಯಂದಿರಮರಣಪ್ರಮಾಣವು 83ರಿಂದ 69ಇಳಿಕೆ ಕಂಡಿದೆ.

ಹೆರಿಗೆ ವೇಳೆತಾಯಂದಿರಮರಣದ ಅನುಪಾತ ಕುರಿತಂತೆಪ್ರತಿ ಎರಡು ವರ್ಷಕ್ಕೊಮ್ಮೆಎಸ್ಆರ್ಎಸ್ ವರದಿ ಬಿಡುಗಡೆ ಮಾಡಲಾಗುತ್ತಿದೆ. 2017-19ರ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ83 ತಾಯಂದಿರು ಮೃತಪಡುತ್ತಿದ್ದರು. 2018-20ರಲ್ಲಿಮರಣಪ್ರಮಾಣ ಶೇ 16.87ರಷ್ಟು ಇಳಿಕೆಯಾಗಿದೆ. ವರ್ಷಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಹೆರಿಗೆ ನಡೆಯುವ ರಾಜ್ಯಗಳನ್ನು ಮಾತ್ರ ಸಮೀಕ್ಷೆಗೆ ಪರಿಗಣಿಸಲಾಗುತ್ತಿದೆ. ದೇಶದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ ಸರಾಸರಿ 97 ತಾಯಂದಿರು ಮೃತಪಡುತ್ತಿದ್ದಾರೆ. 2014–16ರಲ್ಲಿ ಈ ಸಂಖ್ಯೆ 130 ರಷ್ಟಿತ್ತು.

ಕಡಿಮೆಮರಣಪ್ರಮಾಣಹೊಂದಿರುವ ರಾಜ್ಯಗಳಲ್ಲಿ ಕೇರಳ (19), ಮಹಾರಾಷ್ಟ್ರ (33), ತೆಲಂಗಾಣ (43),ಆಂಧ್ರಪ್ರದೇಶ (45) ಹಾಗೂ ತಮಿಳುನಾಡು (54) ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿವೆ. ದಕ್ಷಿಣದ ಐದು ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿತಾಯಂದಿರಮರಣವರದಿಯಾಗುತ್ತಿದೆ.

ಮೂಲಸೌಕರ್ಯ ಹೆಚ್ಚಳ: ‘ರಾಜ್ಯದಾದ್ಯಂತ ತಾಯಿ–ಮಕ್ಕಳ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪಸೂತಿ ತಜ್ಞರು ಮತ್ತು ಅರವಳಿಕೆ ತಜ್ಞರ ನೇಮಕಾತಿಗಳಿಗೆ ಕ್ರಮ ವಹಿಸಲಾಗಿದೆ. ಹೆರಿಗೆ ಆರೈಕೆಗೆ ಸಂಬಂಧಿಸಿದ ಮೂಲಸೌಕರ್ಯವನ್ನು ಗಮನಾರ್ಹವಾಗಿ ಹೆಚ್ಚಳ ಮಾಡಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

‘ನಗರ ಪ್ರದೇಶದಲ್ಲಿ ಮಹಿಳಾ ಚಿಕಿತ್ಸಾಲಯಗಳು ಹಾಗೂ ನಮ್ಮ ಕ್ಲಿನಿಕ್ಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಪ್ರಸವ ಪೂರ್ವ ಹಾಗೂ ಪ್ರಸವ ನಂತರದ ಆರೈಕೆ ಇನ್ನಷ್ಟು ಸುಧಾರಿಸಲಿದೆ. ಮಹಿಳೆಯರು ಮತ್ತು ಮಕ್ಕಳ ಯೋಗಕ್ಷೇಮಕ್ಕೆ ಇವು ಸಹಕಾರಿಯಾಗಲಿವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.