ಹೊಸಪೇಟೆ: ಶಾಸಕ ಆನಂದ್ ಸಿಂಗ್ ಅವರಿಗೆ ಸೇರಿದ ಲೆಟರ್ ಹೆಡ್ನಲ್ಲಿ ಅವರ ಸಹಿಯೊಂದಿದೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಬರೆದಿರುವ ಪತ್ರ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನಿಂದಿಸಲಾಗಿದೆ. ಪತ್ರದುದ್ದಕ್ಕೂ ಅವಾಚ್ಯ ಶಬ್ದಗಳನ್ನು ಬಳಸಲಾಗಿದೆ.

‘ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿ ರಾಜಕೀಯವಾಗಿ ನಾನು ಹಾಳಾದೆ. ನಿಮಗೆ ಸೂಕ್ತ ಸ್ಥಾನಮಾನ ಕೊಡುತ್ತೇವೆ. ಮುಸ್ಲಿಮರನ್ನು ದೂರವಿಟ್ಟು, ಬ್ಯಾಡರು, ಮಾದಿಗರು ಹಾಗೂ ಹಿಂದೂಗಳ ಪರವಾಗಿ ಕೆಲಸ ಮಾಡಿ. ಚುನಾವಣೆಯಲ್ಲಿ ಗೆದ್ದ 24 ಗಂಟೆಯೊಳಗೆ ಮಂತ್ರಿ ಮಾಡುತ್ತೇವೆ ಎಂದು ಅಮಿತ್ ಶಾ ಭರವಸೆ ಕೊಟ್ಟಿದ್ದರು. ಆದರೆ, ಎಂಟು ದಿನಗಳು ಕಳೆದಿವೆ. ಅವರು ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. ನಾನು ಸೇರಿದಂತೆ 16 ಜನರಿಗೆ ಮಂತ್ರಿ ಮಾಡದಿದ್ದಲ್ಲಿ ಅದರ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಡಿ. 17ರಂದು ಪತ್ರ ಬರೆದಿರುವ ದಿನಾಂಕ ನಮೂದಾಗಿದೆ.

‘ಹಿಂದೆಯೂ ಇದೇ ರೀತಿ ನನ್ನ ಲೆಟರ್ ಹೆಡ್ನಲ್ಲಿ ಏನೇನೋ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿತ್ತು. ಈಗ ಪುನಃ ಅದೇ ರೀತಿ ಆಗಿದೆ. ಯಾರು ಮಾಡುತ್ತಿದ್ದಾರೋ ಗೊತ್ತಿಲ್ಲ’ ಎಂದು ಶಾಸಕ ಆನಂದ್ ಸಿಂಗ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.