ಮಂಗಳೂರು: ಬಡವರಿಗೆ ಮದುವೆ ಉಡುಪುಗಳ ಖರೀದಿ ಹೊರೆಯಾಗಬಾರದು ಎಂಬ ಆಶಯದೊಂದಿಗೆ ಮದುವಣಗಿತ್ತಿಯರ ಉಡುಗೆಗಳನ್ನು ಬಾಡಿಗೆ ರಹಿತವಾಗಿ ಒದಗಿಸುತ್ತಿರುವ ‘ಎಂಎನ್‌ಜಿ ಫೌಂಡೇಷನ್’ ಎಂಬ ಸ್ವಯಂ ಸೇವಾ ಸಂಸ್ಥೆಯು, ಈಗ ಮದುಮಗ ಧರಿಸುವ ಕೋಟ್‌ಗಳನ್ನು ಕೂಡ ಒದಗಿಸಿ, ಬಡ ಕುಟುಂಬದ ಪಾಲಕರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿದೆ.

ಆರ್ಥಿಕ ಮುಗ್ಗಟ್ಟಿನಲ್ಲಿರುವವರ ವೈದ್ಯಕೀಯ ವೆಚ್ಚಕ್ಕೆ ನೆರವು ನೀಡುವ ಮೂಲಕ 8 ವರ್ಷಗಳ ಹಿಂದೆ ಸೇವಾ ಚಟುವಟಿಕೆ ಆರಂಭಿಸಿರುವ ಎಂಎನ್‌ಜಿ ಫೌಂಡೇಷನ್, ತಂದೆ ಯನ್ನು ಕಳೆದುಕೊಂಡ ಬಡ ಹೆಣ್ಣು ಮಕ್ಕಳ ಕುಟುಂಬಕ್ಕೆ ನೆರವು ನೀಡುವ ವೇಳೆ ಅವರಿಗೆ, ಮದುವೆ ಉಡುಪು ಗಳ ಖರೀದಿಯೇ ದೊಡ್ಡ ಹೊರೆಯಾ ಗುವುದನ್ನು ಗಮನಿಸಿತು. ಆ ವೇಳೆ ಮದುಮಗಳು ತೊಡುವ 10 ಉಡುಗೆ ಗಳನ್ನು ಖರೀದಿಸಿ, ಹಲವರಿಗೆ ನೆರವಾಯಿತು. ಸಂಸ್ಥೆಯ ಕಾರ್ಯಕ್ಕೆ ಅನೇಕರು ಕೈ ಜೋಡಿಸಿದರು. ಈಗ ಸಂಸ್ಥೆಯಲ್ಲಿ ವಧು ತೊಡುವ 1,500ಕ್ಕೂ ಹೆಚ್ಚು ಉಡುಗೆಗಳ ಸಂಗ್ರಹವಿದೆ. ವರ ಧರಿಸುವ 100ಕ್ಕೂ ಅಧಿಕ ಸೂಟ್‌ಗಳು ಇವೆ.

‘ಮದುವೆಗೆ ಒಳ್ಳೆಯ ಉಡುಗೆ ತೊಡಬೇಕು ಎಂಬ ಕನಸು ಆರ್ಥಿಕ ಸಮಸ್ಯೆ ಇರುವ ಯುವತಿಗೆ ಮರೀಚಿಕೆ ಯಾಗುತ್ತದೆ. ಬಾಡಿಗೆ ಉಡುಗೆಗೆ ದಿನಕ್ಕೆ ₹ 5,000 ವರೆಗೆ ವೆಚ್ಚ ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಯುವತಿಯರ ಆಸೆ ಕಮರಿಹೋಗ ಬಾರದು ಎಂದು ಬಾಡಿಗೆರಹಿತವಾಗಿ ಉಡುಗೆ ಪೂರೈಸುತ್ತೇವೆ. ಮದುವೆ ಮುಗಿದ ಮೇಲೆ ಹೆಚ್ಚಿನ ಸಂದರ್ಭ ಗಳಲ್ಲಿ ನಾವೇ ಅವರ ಮನೆಗೆ ಹೋಗಿ ಅದನ್ನು ಸಂಗ್ರಹಿಸುತ್ತೇವೆ. ಇದೇ ಮಾದರಿಯಲ್ಲಿ ಒಂದು ವರ್ಷದ ಈಚೆಗೆ ವರ ಧರಿಸುವ ಸೂಟ್‌ಗಳನ್ನು ಖರೀದಿಸಿಟ್ಟಿದ್ದೇವೆ. ಕೆಲ ಶ್ರೀಮಂತ ಕುಟುಂಬದವರು ತಮ್ಮ ಮಗ ಅಥವಾ ಮಗಳ ಮದುವೆಯ ವೇಳೆ ಒಂದು ಜತೆ ಹೆಚ್ಚುವರಿಯಾಗಿ ಖರೀದಿಸಿ, ಸಂಸ್ಥೆಗೆ ಕೊಡುಗೆ ನೀಡುತ್ತಾರೆ’ ಎಂದು ಎಂಎನ್‌ಜಿ ಫೌಂಡೇಷನ್ ಸ್ಥಾಪಕ, ಉದ್ಯಮಿ ಮೊಹಮ್ಮದ್ ಇಲ್ಯಾಸ್ ಹೇಳಿದರು.

‘ನೆರವು ಪಡೆದವರು ತಾವು ಆರ್ಥಿಕವಾಗಿ ಸಬಲರಾದ ಮೇಲೆ ಸಂಸ್ಥೆಗೆ ನೆರವು ನೀಡುತ್ತಾರೆ. ಇನ್ನು ಕೆಲವರು ತಮ್ಮ ಮದುವೆಗೆ ಖರೀ ದಿಸಿದ ಲಕ್ಷ ರೂಪಾಯಿಗೂ ಹೆಚ್ಚು ಬೆಲೆಬಾಳುವ ಬಟ್ಟೆಯನ್ನು ಒಮ್ಮೆ ಧರಿಸಿ, ಸಂಸ್ಥೆಗೆ ದೇಣಿಗೆ ನೀಡುತ್ತಾರೆ. ನಾವು ಡ್ರೈ ವಾಷ್ ಮಾಡಿ ಒಪ್ಪವಾಗಿ ಇಡುತ್ತೇವೆ. ವಧು– ವರರು ತಮಗೆ ಬೇಕಾದ ಬಟ್ಟೆ ಆಯ್ಕೆ ಮಾಡಿಕೊಂಡೊ ಯ್ಯುತ್ತಾರೆ. ಎಲ್ಲ ಸಮುದಾಯ, ಧರ್ಮದವರಿಗೂ ಈ ಸೌಲಭ್ಯ ಮುಕ್ತವಾಗಿದೆ’ ಎಂದು ವಿವರಿಸಿದರು.

ಸಂಪರ್ಕ ಸಂಖ್ಯೆ: 76192 33322.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.